G20: ಸರಕಾರ ಪ್ರತಿಪಕ್ಷವನ್ನು ಒಂದು ಕಾರ್ಯಕ್ರಮಕ್ಕೂ ಆಹ್ವಾನಿಸಿಲ್ಲ- ಶಶಿ ತರೂರ್ ತರಾಟೆ

0
469

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಸೆ. 11: ಹೊಸದಿಲ್ಲಿಯಲ್ಲಿ ಕೊನೆಗೊಂಡಿರುವ ಜಿ20 ಕಾರ್ಯಕ್ರಮಕ್ಕೆ ಸರಕಾರ ಪ್ರತಿಪಕ್ಷಗಳನ್ನು ಯಾವ ಕಾರ್ಯಕ್ರಮಕ್ಕೂ ಕರೆದಿಲ್ಲ ಎಂದು ಕಾಂಗ್ರೆಸ್ ನೇತಾರ ಲೋಕಸಭಾ ಸದಸ್ಯ ಶಶಿ ತರೂರ್ ಹೇಳಿದರು. ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿದ್ದ ಔತಣ ಕೂಟ ಸಹಿತ ಪ್ರತಿಪಕ್ಷಗಳನ್ನು ಕಡೆಗಣಿಸಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೂ ಆಮಂತ್ರಣ ಇಲ್ಲದಿರುವುದು ಈ ಹಿಂದೆ ವಿವಾದಗೊಂಡಿತ್ತು. ಬೇರೆ ಯಾವುದೇ ಪ್ರಜಾಪ್ರಭುತ್ವ ದೇಶಗಳು ಸ್ವಂತ ಪಾರ್ಲಿಮೆಂಟಿನ ಸಹೋದ್ಯೋಗಿಗಳನ್ನು ಈ ರೀತಿಯಲ್ಲಿ ಜಾಗತಿಕ ವೇದಿಕೆಯಲ್ಲಿ ಅಪಮಾನಿಸದು. ಜಿ20ಯಲ್ಲಿ ವ್ಯಕ್ತವಾದ ಸಹಕಾರ ಮನೋಭಾವ ಭಾರತ ರಾಜಕೀಯದಲ್ಲಿ ಇಲ್ಲದ್ದು ಖೇದಕರ ವಿಷಾದದ್ದೆಂದು ಶಶಿ ತರೂರ್ ಹೇಳಿದರು.

ಮೋದಿ ಸರಕಾರ ಆಂತರಿಕ ವ್ಯವಹಾರಗಳಲ್ಲಿ ಸೌಹಾರ್ದ ಸಹಕಾರದ ದಾರಿಯಲ್ಲೇ ಇಲ್ಲ. ಇದು ಹೆಚ್ಚು ದಯನೀಯ ಸ್ಥಿತಿಯಾಗಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಶಶಿ ತರೂರ್ ಬರೆದಿದ್ದಾರೆ. ಜಿ20 ದಿಲ್ಲಿ ಘೋಷಣೆಗೆ ಸಮನ್ವಯ ಸಾಧಿಸಿದ್ದಕ್ಕಾಗಿ ಅಭಿನಂದಿಸುವೆ ಎಂದು ತರೂರ್ ಈ ಹಿಂದೆ ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಬರೆದಿದ್ದರು.