2024ರಲ್ಲಿ ‘ಇಂಡಿಯಾ’?

0
276

ಸನ್ಮಾರ್ಗ ವಾರ್ತೆ

✍️ಅರಫಾ ಮಂಚಿ

ನೀವು ಸರಕಾರದಿಂದ ಹೆಚ್ಚುವರಿಯಾಗಿ 3802 ಕೋಟಿ ರೂಪಾಯಿ ವಸೂಲಿ ಮಾಡಿದ್ದೀರಿ ಎಂದು ಗುಜರಾತ್ ಸರಕಾರ ಗೌತಮ್  ಅದಾನಿಗೆ ಒಂದು ಪತ್ರ ಬರೆಯುತ್ತದೆ ಗುಜರಾತ್ ಸರಕಾರದಿಂದ ಕಲ್ಲಿದ್ದಲಿನಲ್ಲಿ ಅದಾನಿ ಹೆಚ್ಚು ಹಣ ವಸೂಲು ಮಾಡಿದ್ದರು. ಇದು  ದೋಖಾ ಅಲ್ವೇ? ಬರೇ ಒಸಿಸಿಆರ್‌ಪಿ ವರದಿ, ಹಿಂಡೆನ್‌ಬರ್ಗ್ ವರದಿಗಳು ಅದಾನಿಯ ವಂಚನೆ ಹೇಳಬೇಕಾ, ಆ ವಿಷಯವಾಗಿ ಪ್ರಕಟಿಸುವುದಕ್ಕೆ ಗಾರ್ಡಿಯನ್, ಫೈನಾನ್ಸ್ ಟೈಮ್ಸ್ ನಂಥ ವಿದೇಶಿ ಮಾಧ್ಯಮಗಳೇ ಆಗಬೇಕಾ?  

ಕ್ರೈಂ ವರದಿಯ ಸಂಘಟನೆ ಒಸಿಸಿಆರ್‌ಪಿ ಪ್ರಕಾರ, ಅದಾನಿ ಕೃತವಾಗಿ ತನ್ನ ಶೇರು ಮೌಲ್ಯಗಳನ್ನು ಹೆಚ್ಚಿಸಿದ್ದಾರೆ. ಹಿಂಡನ್ ಬರ್ಗ್  ವರದಿ ಕೂಡ ಅದನ್ನೇ ಹೇಳಿತ್ತು. ಜಗತ್ತಿನಲ್ಲಿ 22ನೇ ಸ್ಥಾನದಲ್ಲಿದ್ದ ವ್ಯಕ್ತಿ ಕಳೆದ ಏಳೆಂಟು ವರ್ಷಗಳಲ್ಲಿ ಹೇಗೆ ನಂಬರ್ ಟು ಆದರು ಎಂದು ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಶ್ನಿಸಿದ್ದರು. ಪರಿಣಾಮ ಗೊತ್ತೇ ಇದೆ. ಅವರ ಸಂಸತ್ಸದಸ್ಯತ್ವ ನಾ ಖಾವೂಂಗಾ ನಾ ಖಾನೇ ದೂಂಗ ಎಂದು 2014ರಲ್ಲಿ ಮೋದಿ ಘೋಷಿಸಿದ್ದರು. ಈಗ, ಖಾನೆವಾಲೆ ಖಾತೆ ರಹೇ ಪೂಛ್‌ನೆವಾಲೆ ಪೂಚ್‌ತೆ ರಹೆ, ಸೋನೆವಾಲೆ  ಸೋತೆರಹೆ ಎಂಬಂತ್ತಾಗಿದೆ.

ಒಸಿಸಿಆರ್‌ಪಿ ವರದಿ ಇದನ್ನೆ ಬಹಿರಂಗ ಪಡಿಸಿದೆ. ಅಂದರೆ ಅದಾನಿ ಕಂಪೆನಿಯ ನಿರ್ದೇಶಕರಿಬ್ಬರಲ್ಲಿ ಒಬ್ಬರು ಯುಎಇಯ ನಾಸಿರಲಿ  ಶಾಬಾನಲಿ, ಇನ್ನೊಬ್ಬರೂ ತೈವಾನ್‌ನ ಚಂಗ್ ಚುಂಗ್‌ಲಿ. ಇಬ್ಬರು ಮಿಲಿಯನ್ ಗಟ್ಟಲೆ ಹಣ ಹೂಡಿಕೆ ಮಾಡಿದ್ದಾರೆ. ಅದಾನಿ ಅಣ್ಣ ಈ  ಕಂಪೆನಿಯ ನಿರ್ದೇಶಕರು. ಹೀಗೆ ತಮ್ಮವರಿಂದಲೇ ಶೇರು ಖರೀದಿ ಮಾಡಿ ಶೇರು ಪೇಟೆಯಲ್ಲಿ ಅದಾನಿ ಗ್ರೂಪ್‌ನ ಶೇರುಗಳಿಗೆ ಭಾರೀ ಬೆಲೆ ಹೆಚ್ಚಳವಾಗುವಂತೆ ನೋಡಿಕೊಂಡು ಹಣ ಮಾಡಲಾಗಿದೆ. ಈ ಹಣದಿಂದ ಭಾರತದ ಮೂಲ ಸೌಕರ್ಯಗಳ ಸಹಿತ ವಿಮಾನ ನಿಲ್ದಾಣ, ಬಂದರು, ಸಿಮೆಂಟು ಮುಂತಾದುದರಲ್ಲಿ ಹೂಡಿಕೆ ಮಾಡಲಾಗಿದೆ. ಒಸಿಸಿಆರ್‌ಪಿ ಬಹಿರಂಗಪಡಿಸಿದ್ದು ಮಾತ್ರವಲ್ಲ ಸಾಕ್ಷ್ಯಗಳು ತಮ್ಮ ಬಳಿಯಿವೆ ಎಂದೂ ಹೇಳಿಕೊಂಡಿದೆ.

ವಿಷಯ ಹೀಗಿರುವಾಗ ಪ್ರಾಮಾಣಿಕರಲ್ಲಿ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಪ್ರಜ್ಞಾವಂತರಿಗೆ ಅದಾನಿ ಕಂಪೆನಿಯ ಮೋಸವನ್ನು  ಗುರುತಿಸುವುದು ಬಹಳ ಸುಲಭ.

ನೋಡಿ ಜಿ20 ಶೃಂಗ ನಡೆಯಲಿರುವ ಹೊತ್ತಿಗೆ ಒಸಿಸಿಆರ್‌ಪಿ ಮೂಲಕ ಅದಾನಿ ಮೋದಿ ಸಂಬಂಧ ತೇಲಿ ಬಂದಿದೆ. ಇಬ್ಬರೂ ಸೇರಿ ವಂಚನೆಯಲ್ಲಿ ಭಾಗಿಯಾದ್ದಾರೆ ಎನ್ನುವ ಅರ್ಥದಲ್ಲಿ ಈ ವರದಿ ಇದೆ. ರಾಹುಲ್ ಗಾಂಧಿ ಹೇಳುವ ಪ್ರಕಾರ ಒಂದು ಬಿಲಿಯನ್ ಹಣ ಭಾರತದಿಂದ ವಿವಿಧ ದೇಶಗಳಿಗೆ ಹೋಗಿದೆ. ಮತ್ತೆ ಅಲ್ಲಿಂದ ಇಲ್ಲಿಗೆ ಬಂದಿದೆ. ಇದು ಯಾರ ಹಣ? ಅದಾನಿಯದ್ದಾ? ಅಲ್ಲ  ಬೇರೆಯಾರದ್ದಾ? ಆದರೆ, ಮಣಿಪುರ ಹೊತ್ತಿ ಉರಿಯುವಾಗ, ಹಿಂಡನ್ ಬರ್ಗ್ ವರದಿ, ಬಿಬಿಸಿ ಡಾಕ್ಯುಮೆಂಟರಿಗಳು ಹೊರಬಂದಾಗ  ಮೋದಿ ಮೌನ ಮುರಿದಿಲ್ಲ. ಹೀಗಿರುವಾಗ ಒಸಿಸಿಆರ್‌ಪಿಗೆ ಉತ್ತರಿಸುತ್ತಾರಾ?

ಬಹುಶಃ. ಈ ದೇಶದಲ್ಲಿ ತಿನ್ನುವ ಉಣ್ಣುವ ಆಹಾರಕ್ಕೂ ಜಿಎಸ್‌ಟಿ ಯಾಕೆ ಬೀಳುತ್ತಿದೆ, ಪೆಟ್ರೋಲ್ ಡೀಸೆಲ್‌ಗಳ ಬೆಲೆ ಯಾಕೆ  ಹೆಚ್ಚಳವಾಗುತ್ತಿದೆ ಎಂಬುದು ಈಗ ಬಹುತೇಕ ಎಲ್ಲ ಜನರಿಗೂ ಅರ್ಥ ಆಗಿರಬಹುದು. ಅಂದರೆ ಕೆಲವು ಉದ್ಯಮಿಗಳು ಇವೆಲ್ಲವನ್ನೂ ನಿಯಂತ್ರಿಸಿ ಕಾಸು ಮಾಡಿಕೊಳ್ಳುತ್ತಿದ್ದಾರೆ ಎಂದು ಕನಿಷ್ಠ ಅರಿವಿದ್ದವರೂ ಅರ್ಥ ಮಾಡಿಕೊಳ್ಳುತ್ತಾರೆ. ಈ ಮಾತಿಗೆ ಉದಾಹರಣೆಯಾಗಿ ಗುಜರಾತ್ ಸರಕಾರದಿಂದ 3802 ಕೋಟಿ ರೂಪಾಯಿ ಹೆಚ್ಚು ವಸೂಲು ಮಾಡಿದ್ದನ್ನೂ ಎತ್ತಿಕೊಳ್ಳಬಹುದು. ಐದು ವರ್ಷಗಳಲ್ಲಿ ಇಷ್ಟು ಹಣವನ್ನು ಹೆಚ್ಚಾಗಿ ಅದಾನಿ ಗ್ರೂಪ್ ಗುಜರಾತ್ ಸರಕಾರದಿಂದ ವಸೂಲು ಮಾಡಿದೆ. ಇದು ಗುಜರಾತ್ ಸರಕಾರಕ್ಕೆ ಗೊತ್ತಿರಲಿಲ್ವಾ?  ಆದರೆ ಅದಾನಿಯಿಂದಲೇ ಕರೆಂಟು ಖರೀದಿಸಬೇಕು ಎಂಬ ಒತ್ತಡದಿಂದಾಗಿ ಹೀಗೆ ಬಾಯಿ ಮುಚ್ಚಿ ಕೂರಲಾಗಿದೆ ಎನ್ನಲಾಗುತ್ತದೆ. ಈಗ  ಅದಾನಿ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿರುವುದರಿಂದ ತಮ್ಮ ಮೇಲೆ ಕೋರ್ಟಿನ ಚಾಟಿ ಬೀಳಬಹುದೆಂದು ಹೆದರಿ ಪತ್ರ ಬರೆಯಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ಸಂಜಯ್ ಸಿಂಗ್ ಹೇಳುತ್ತಾರೆ.

ಅಂತೂ ಒಸಿಸಿ ಆರ್‌ಪಿ ವರದಿ ಹೇಳಿದಂತೆ ಹಣ ಮಾಡುವ ಕಲೆ ಅದಾನಿಗೆ ಚೆನ್ನಾಗಿ ಗೊತ್ತಿದೆ ಎಂಬುದು ಹೀಗೆಲ್ಲವೂ ಸಾಬೀತುಗೊಳ್ಳುತ್ತಿದೆ. ಕಾಲ ಮಿಂಚಿಲ್ಲ, ಜನ ಇನ್ನಾದರೂ ಎಚ್ಚೆತ್ತು ಕೊಂಡರೆ ದೇಶ ಉಳಿದೀತು. ಸುಮ್ಮನಿದ್ದರೆ ದೇಶವನ್ನು ಕೆಲವೇ ಬೆರೆಳೆಣಿಕೆಯ  ಉದ್ಯಮಿಗಳು ಖರೀದಿಸಿಟ್ಟುಕೊಳ್ಳುತ್ತಾರೆ. ಹೇಗೂ ಅವರಿಗೆ ಅಧಿಕಾರದಲ್ಲಿ ಕೂತವರ ಬೆಂಬಲ ಇದೆಯಲ್ಲ. ಅಲ್ಲ, ನಮ್ಮ ದೇಶದ ಇನ್ಸ್ ಪ್ರಾಕ್ಟರ್ ಗಳಲ್ಲಿ ತೈವಾನಿನ ಚಾಂಗ್ ಚುಂಗ್ಲಿಗೆ, ಯುಎಇಯ ನಾಸಿರ್ ಅಲಿ ಶಬಾನ್ ಅಲಿಯಂತಹ ವಿದೇಶಿಯರಿಗೆ ಹಣ ಹೂಡಿಕೆ  ಮಾಡಲು ಒಂದು ಸರಕಾರ ಅದಾನಿ ಮೂಲಕ ಅವಕಾಶ ಮಾಡಿ ಕೊಡುತ್ತದೆ ಎಂದಾದರೆ ಅಂತಹವರು ಈ ದೇಶವನ್ನು ಮಾರುವುದಿಲ್ವಾ ಎಂಬ ಪ್ರಶ್ನೆ ಸಹಜವೇ.

ವಿಷಯ ಬದಲಿಸೋಣ:
ತಮಿಳ್ನಾಡಿನ ಸರಕಾರ ಸರಕಾರಿ ಶಾಲೆಗಳಲ್ಲಿ ಬೆಳಗ್ಗಿನ ಉಪಾಹಾರದ ಯೋಜನೆಯನ್ನು ಹೊರತಂದಿದೆ. ಆದರೆ, ಈ ಯೋಜನೆಯ  ನಂತರ ಕಕ್ಕಸು ತುಂಬಿ ಹರಿಯುತ್ತಿದೆ, ಮನೆಯಲ್ಲೂ ತಿನ್ನುತ್ತಾರೆ, ಶಾಲೆಯಲ್ಲೂ ತಿನ್ನುತ್ತಾರೆ, ಆಗಾಗ ಕಕ್ಕಸಿಗೆ ಹೋಗಬೇಕಾಗುತ್ತದೆ ಮಕ್ಕಳಿಗೆ ಎಂದು ದಿನ ಮಲರ್ ಪತ್ರಿಕೆ ವರದಿ ಪ್ರಕಟಿಸಿ ಅಣಕಿಸಿತ್ತು.

ತಮಿಳ್ನಾಡು ಮುಖ್ಯಮಂತ್ರಿ ಹೇಳುವಂತೆ ಇದು ಸಂಘಪರಿವಾರದತ್ತ  ವಾಲಿಕೊಂಡಿರುವ ಪತ್ರಿಕೆ. ಇದು ಸಂಘಪರಿವಾರದ ಮನಸ್ಥಿತಿ. ಇಷ್ಟು ಕೀಳುಮಟ್ಟದಲ್ಲಿ ಬಡ ಮಕ್ಕಳಿಗೆ ಉಪಯೋಗವಾಗುವ ಒಂದು ಯೋಜನೆಯನ್ನು ಅಣಕಿಸುವುದಾ? ತಮಿಳ್ನಾಡಿನಾದ್ಯಂತ ಪತ್ರಿಕೆಯ ವಿರುದ್ಧ ಪ್ರತಿಭಟನೆ ನಡೆಯಿತು. ಪತ್ರಿಕೆಯನ್ನು ಸುಟ್ಟು,  ಪೋಸ್ಟರ್‌ಗಳನ್ನು ಹರಿದು ಜನ ಪ್ರತಿಭಟಿಸಿದರು.

ಹೌದು, ಬಲಪಂಥೀಯ ಮನಸ್ಸೇ ಇಂಥದ್ದು. ಬಡವರಿಗೆ ಸರಕಾರದಿಂದ ಏನಾದರೂ ಉಚಿತವಾಗಿ ಸಿಕ್ಕರೆ ಇವರಿಗೆ ಹೊಟ್ಟೆ ಉರಿಯುತ್ತದೆ. ತಮಿಳ್ನಾಡಿನಲ್ಲಿರುವುದು ಡಿಎಂಕೆ ಸರಕಾರ. ಡಿಎಂಕೆ ದ್ರಾವಿಡ ಚಳವಳಿಯಿಂದ ಹುಟ್ಟಿ ಮೇಲೆ ಬಂದ ಪಕ್ಷ. ಮೇಲ್ವರ್ಗದವರ ದೌರ್ಜನ್ಯದಿಂದ ಹಿಂದುಳಿದವರನ್ನು ರಕ್ಷಿಸಲು ಅದಕ್ಕೆ ಸಾಧ್ಯವಾಗಿತ್ತು. ಹಿಂದುಳಿದವರಿಗೆ ಶಿಕ್ಷಣ ನಿಷಿದ್ಧವಾಗಿದ್ದಾಗ ಹಿಂದುಳಿದವರ ಮಕ್ಕಳಿಗೆ ಶಿಕ್ಷಣ ಕೊಡಿಸಲು ಅದಕ್ಕೆ ಸಾಧ್ಯವಾಯಿತು. ಸ್ಟಾಲಿನ್ ಸರಕಾರ ಇಂತಹ ಉಚಿತಗಳನ್ನು ಕೊಡುತ್ತಾ ಹೋದರೆ, ಸಂಘಪರಿವಾರ ತಲೆ ಎತ್ತುವುದು ಕಷ್ಟ.

ಹೀಗಾಗಿ ಇಂತಹ ಪ್ರಯತ್ನಗಳ ವಿರುದ್ಧ ಅಪಪ್ರಚಾರ ಮಾಡಲು ಹೊರಟಿದೆ. 2024ರ ಪಾರ್ಲಿಮೆಂಟು ಚುನಾವಣೆಯಲ್ಲಿ  ಸ್ಟಾಲಿನ್ ಇನ್ನಷ್ಟು ಜನಪ್ರಿಯವಾದರೆ ತಮಿಳ್ನಾಡಿನಲ್ಲಿ ಒಂದು ಸೀಟನ್ನೂ ನಿರೀಕ್ಷಿಸುವಂತಿಲ್ಲ.
ನಿಮಗೂ ನೆನಪಿರಬಹುದು. ಹಿಂದಿನ ಸಿದ್ದರಾಮಯ್ಯ ಸರಕಾರ ಅನ್ನಭಾಗ್ಯ ಉಚಿತ ಅಕ್ಕಿ ಯೋಜನೆ ತಂದಾಗ ಜನರನ್ನು ಸರಕಾರ ಸೋಮಾರಿ ಮಾಡುತ್ತಿದೆ ಎಂದು ಬಿಜೆಪಿ ವಿರೋಧಿಸಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಐದು ಗ್ಯಾರಂಟಿಗಳಲ್ಲಿ ಹತ್ತು ಕೆಜಿ ಅಕ್ಕಿಯೂ ಸೇರಿತ್ತು. ಸಿದ್ದರಾಮಯ್ಯ ಸರಕಾರಕ್ಕೆ ಹತ್ತು ಕೆಜಿ ಅಕ್ಕಿ ಕೊಡಲು ಸಾಧ್ಯವಿಲ್ಲದಾದಾಗ ಬಿಜೆಪಿಯ  ಆರ್ ಅಶೋಕ್ ಸಹಿತ ಹಲವು ಮುಖಂಡರು ಕೊಡಿ ಅಕ್ಕಿ ಕೊಡಿ ಎಂದು ಪ್ರತಿಭಟಿಸಿದ್ದರು. 2014ರಲ್ಲಿ ಸಿದ್ದರಾಮಯ್ಯ ಸರಕಾರ ಅನ್ನಭಾಗ್ಯ ಯೋಜನೆ ತಂದಾಗ ಇವರೇ ವಿರೋಧಿಸಿದ್ದರು. ಈಗ ಅಕ್ಕಿ ಬದಲು ಹಣ ಸಿಗುತ್ತದೆ. ಗೃಹಲಕ್ಷಿ ಹಣ ಎರಡು ಸಾವಿರ ರೂಪಾಯಿ, ಉಚಿತ ಕರೆಂಟು ಹೀಗೆ ಒಂದೊಂದೇ ಜಾರಿ ಮಾಡುತ್ತಿದೆ. ಜನರು, ಮಾತ್ರವಲ್ಲ ಸಮಾಜ ಚಿಂತಕರು ಸಿದ್ದರಾಮಯ್ಯ  ಸರಕಾರವನ್ನು ನುಡಿದಂತೆ ನಡೆಯುವ ಸರಕಾರ ಅಂತಹ ಹೇಳುತ್ತಲಿದ್ದಾರೆ. ಅತ್ತ ತಮಿಳ್ನಾಡಿನಲ್ಲಿಯೂ ಸ್ಟಾಲಿನ್ ಮಹಿಳೆಯರಿಗೆ  ಒಂದು ಸಾವಿರ ರೂಪಾಯಿ, ಶಾಲಾ ಮಕ್ಕಳಿಗೆ ಬೆಳಗ್ಗಿನ ಉಪಾಹಾರ ಮುಂತಾದ ಜನಪರ ಯೋಜನೆ ಜಾರಿ ಮಾಡುತ್ತಾ  ಹೋಗುತ್ತಿದ್ದಾರೆ.

ಸದ್ಯ ಕಾಂಗ್ರೆಸ್ ಚೇತರಿಸುತ್ತಿದ್ದು, ಬಿಜೆಪಿ ಮುಕ್ತ ಭಾರತ ಆಗುತ್ತಿರುವ ಎಲ್ಲ ಸೂಚನೆಗಳೂ ಇವೆ. ಮಧ್ಯ ಪ್ರದೇಶದಲ್ಲಿ ಬಿಜೆಪಿಯ  ಶಿವರಾಜ್ ಸಿಂಗ್ ಚೌಹಾನ್ ಕರ್ನಾಟಕದ ಗೃಹ ಲಕ್ಷ್ಮಿ ಯೋಜನೆಯನ್ನು ಅನುಕರಿಸುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಅಂತ ಮೈಕ್ ಹಿಡಿದು ರ‍್ಯಾಲಿಗಳಲ್ಲಿ ಕೂಗುತ್ತಿದ್ದಾರೆ. ಕಾರಣ ಏನೆಂದರೆ, ಒಂದು ಸಮೀಕ್ಷೆಯ ಪ್ರಕಾರ ಶೇ. 45ರಷ್ಟು ಮಹಿಳೆಯರು ಕಾಂಗ್ರೆಸ್ ಪರ ಇದ್ದಾರೆ. ಹೀಗಾಗಿ ಮಹಿಳೆಯರಲ್ಲಿ ಕೆಲಸ ಮಾಡಲು ಸಂಘಪರಿವಾರ ಹೊರಟಿದೆ.

ವಿಷಯಕ್ಕೆ ಬರೋಣ:
ಅದಾನಿ ಹಗರಣದ ಬಗ್ಗೆ ಹೊಸ ವಿಷಯಗಳು ಬಹಿರಂಗವಾದ ಮೇಲೆ, ಗಾರ್ಡಿಯನ್ ಪತ್ರಿಕೆ ಪ್ರಧಾನಿ ಮೋದಿಗೂ ಉದ್ಯಮಿ ಅದಾನಿ  ಕುಟುಂಬಕ್ಕೂ ಸಂಬಂಧ ಇದೆ ಎಂದು ಹೇಳಿದ ಮೇಲೆ ಬಿಜೆಪಿಯವರು ತಲೆ ಎತ್ತಿ ನಿಲ್ಲುವ ನೈತಿಕತೆಯನ್ನು ಉಳಿಸಿಕೊಂಡಿದ್ದಾರಾ  ಎಂಬ ಪ್ರಶ್ನೆ ಮೂಡುತ್ತದೆ. ವಿಶೇಷ ಏನೆಂದರೆ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರಲ್ಲಿ ಪ್ರಶ್ನೆ ಕೇಳಿ ಉತ್ತರ ಬಯಸುತ್ತಿದ್ದಾರೆ.  ನಮ್ಮ ತನಿಖಾ ಸಂಸ್ಥೆಗಳಿಗೆ ಅದಾನಿಯನ್ನು ಮುಟ್ಟುವ ತಾಕತ್ತಿಲ್ಲ ಎಂದು ಪ್ರತಿಪಕ್ಷಗಳು ಹೇಳುವುದು ಸರಿಯೇ ಇದೆ. ಬಿಜೆಪಿಗೆ ಡೊನೇಷನ್ ಕೊಟ್ಟು ವಿದೇಶಕ್ಕೆ ಓಡಿ ಹೋಗಬೇಕಾಯಿತೆಂದು ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ನೀರವ್ ಮೋದಿ ಇತ್ತೀಚೆಗೆ ಹೇಳಿಕೆ ಕೊಟ್ಟಿರುವುದನ್ನು ಇಲ್ಲಿ ಗಮನಿಸಬೇಕು. ಬಿಜೆಪಿಯ ಶ್ರೀಮಂತಿಕೆಯನ್ನು ಅಳೆದರೆ ನಿಮಗೂ ಈ  ಮಾತು ಸ್ಪಷ್ಟವಾಗಬಹುದು. ಬಿಜೆಪಿ ಇವತ್ತು ಕುಬೇರ ಪಕ್ಷ. ಅದ ರಲ್ಲಿ ಕಳೆದ ಮಾರ್ಚ್ 23ರ ವರೆಗೆ 3596 ಕೋಟಿ ರೂಪಾಯಿ ಇದೆ.  ಇದೇ ವೇಳೆ ಕಾಂಗ್ರೆಸ್‌ನಲ್ಲಿ ಇರುವುದು 162 ಕೋಟಿ ರೂಪಾಯಿ ಮಾತ್ರ.

ಈ ಎಲ್ಲ ಹಣ ಯಾರದ್ದು? ದೇಣಿಗೆ ಕೊಟ್ಟದ್ದು ಇಲೆಕ್ಟ್ರಾಲ್ ಬಾಂಡ್ ಮೂಲಕ. ಈ ಲೆಕ್ಕ ಯಾರಿಗೂ ಗೊತ್ತಾಗುವುದಿಲ್ಲ. ಈಗ ನಮಗೆ  ಪಿಎಂ ಕೇರ್ ಫಂಡ್‌ನ ಲೆಕ್ಕ ಗೊತ್ತುಂಟಾ? ಹಾಗೆ. ಮೋಸ ಮಾಡಿಸಿ ಹಣವನ್ನು ರಾಜಕೀಯ ಪಕ್ಷಗಳು ಈ ಇಲೆಕ್ಟ್ರಾಲ್ ಬಾಂಡ್  ಮೂಲಕ ಲೂಟಿ ಯಾಕೆ ಮಾಡದು? ಎಂದು ಹೇಗೆ ಹೇಳುವುದು? ಹೌದು ನೀರವ್ ಮೋದಿ ಲಂಡನ್‌ನಲ್ಲಿ ಇಂತಹ ಇಲೆಕ್ಟ್ರಾಲ್  ಬಾಂಡ್ ಬಗ್ಗೆ ಮಾತಾಡಿದ್ದಾರಾ, ಹೇಗೆ? ಅರುಣ್ ಜೇಟ್ಲಿ ವಿತ್ತ ಸಚಿವರಾಗಿದ್ದಾಗ ಈ ಇಲೆಕ್ಟ್ರಾಲ್ ಬಾಂಡ್ ಸಿಸ್ಟಂ ತರಲಾಗಿತ್ತು. ಬಿಜೆಪಿಯೇ ಇಲೆಕ್ಟ್ರಾಲ್ ಬಾಂಡಿನಲ್ಲಿ ರಾಜಕೀಯ ಪಕ್ಷಗಳು ದೇಣಿಗೆ ಪಡೆಯುವುದು ನಿಲ್ಲಬೇಕೆಂದು ಆಗ್ರಹಿಸಿ ಚಳವಳಿ ನಡೆಯಬೇಕಾಗಿದೆ. ಅದಾನಿಯ ಇಷ್ಟು ದೊಡ್ಡ ಹಗರಣಕ್ಕೂ ಇದಕ್ಕೂ ಕೊಂಡಿ ಇದ್ದರೂ ಇರಬಹುದು.

ಆದರೆ ಎಲ್ಲದ್ದಕ್ಕೂ ಒಂದು ಕಾಲ ಅಂತಿರ್ತದೆ. ಮೋಸಗಳು ಎಲ್ಲ ಕಾಲದಲ್ಲಿಯೂ ಯಶಸ್ವಿಯಾಗುವುದಿಲ್ಲ. ಜನ ಬಂಡೇಳುತ್ತಾರೆ. ಇವತ್ತು ಬಿಜೆಪಿಯ ವಿರುದ್ಧ ಬಂಡಾಯದ ಬಂಡೆ ಜನರ ಮನಸ್ಸಿನಲ್ಲಿದೆ. ಅದನ್ನು ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ  ತೋರಿಸಲು ಕಾಯುತ್ತಲೂ ಇದ್ದಾರೆ. ಬಿಜೆಪಿಗೆ ಬಹುಶಃ ಸಮೀಕ್ಷೆ ಗಳಿಂದ, ಇತರ ಮೂಲಗಳಿಂದ ಅರ್ಥವೂ ಆಗಿರಬಹುದು. ಆದ್ದರಿಂದಲೇ ಅಡುಗೆ ಅನಿಲಕ್ಕೆ 200 ರೂಪಾಯಿ ಕಡಿಮೆ ಮಾಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದ್ದು. ನೋಡ್ತಾ ಇರಿ ಇವರು ಪೆಟ್ರೋಲ್ ಡೀಸೆಲ್ ಬೆಲೆಯನ್ನೂ ಇಳಿಸಬೇಕಾಗುತ್ತದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. ಇಂಡಿಯಾವು ಮೋದಿ ಸರಕಾರವನ್ನು ನಿರ್ಬಂಧಿಸುತ್ತದೆ…

ಹೌದು, ಮುಂಬಯಿಯಲ್ಲಿ ಒಟ್ಟು ಸೇರಿದ ಪ್ರತಿಪಕ್ಷಗಳು ಇಂಡಿಯ ಕೂಟದಲ್ಲಿ ಪ್ರದರ್ಶಿಸಿದ ಒಗ್ಗಟ್ಟು 2024ರ ಪಾರ್ಲಿಮೆಂಟು ಚುನಾವಣೆಯಲ್ಲಿ ಬಿಜೆಪಿ ಸರಕಾರಕ್ಕೆ ಕೊನೆ ಮೊಳೆಯನ್ನು ಹೊಡೆಯುವ ಸಂಕಲ್ಪ ತೊಟ್ಟಿದೆ. ಬಹುತೇಕ ಯಶಸ್ವಿಯಾಗುವ ವಾತಾವರಣ  ನೆಲೆಸುತ್ತಿದೆ.