ಗ್ಯಾನ್‍ವಾಪಿ: ಅಲಾಹಾಬಾದ್ ಹೈಕೋರ್ಟ್ ನಿಂದ ಹೆಚ್ಚಿನ ವಿಚಾರಣೆ ಸೆ. 18ಕ್ಕೆ

0
517

ಸನ್ಮಾರ್ಗ ವಾರ್ತೆ

ಪ್ರಯೋಗ್‍ರಾಜ್, ಸೆ. 13: ಗ್ಯಾನ್‍ವಾಪಿ ಮಸೀದಿಯಡಿಯಲ್ಲಿ ದೇವಾಲಯವಿತ್ತೇ ಎಂದು ಪರಿಶೀಲಿಸಬೇಕೆಂದು ಸಲ್ಲಿಸಿದ್ದ ಅರ್ಜಿ ಪ್ರಯೋಜನವಿಲ್ಲ, ಮರು ಅರ್ಜಿ ಸಲ್ಲಿಕೆಯಲ್ಲಿ ಅಲಾಹಾಬಾದ್ ಹೈಕೋರ್ಟು ಈ ತಿಂಗಳ ಹದಿನೆಂಟಕ್ಕೆ ಹೆಚ್ಚಿನ ಆಲಿಕೆ ನಡೆಸಲಿದೆ.

ಪ್ರಕರಣದಲ್ಲಿ ಅರ್ಜಿದಾರ ಎದುರುವಾದಿ ಹಾಜರಿಲ್ಲದ್ದರಿಂದ ಅರ್ಜಿಯನ್ನು ಕೋರ್ಟು ಮುಂದೂಡಿತು.

ಪ್ರಕರಣ ಪರಿಗಣಿಸಿದ ಚೀಫ್ ಜಸ್ಟಿಸ್ ಪ್ರೀತಿಂಗರ್ ದಿವಾಕರ್ ವಕೀಲರ ಮುಷ್ಕರದ ಹಿನ್ನೆಲೆಯಲ್ಲಿ ವರ್ಚುವಲ್ ಹಿಯರಿಂಗ್ ಒಪ್ಪಿಗೆ ನೀಡಿದ್ದರು. ಗ್ಯಾನ್‍ವಾಪಿ ಮಸೀದಿಯ ಮೇಲ್ನೋಟ ವಹಿಸುವ ಅಂಜುಮನ್ ಇಂತಿಝಾಮಿಯ ಕಮಿಟಿಯ ಅರ್ಜಿ ವಿಚಾರಣೆಗೆ ಪರಿಗಣನೆಯಲ್ಲಿದೆ. ಈ ಹಿಂದೆ ಈ ಅರ್ಜಿಯನ್ನು  ಜಸ್ಟಿಸ್ ಪ್ರಕಾಶ್ ಪಾಡಿಯ ವಿಚಾರಣೆಗೆತ್ತಿಕೊಂಡಿದ್ದರು.

ಆಗಸ್ಟ್ 28ರಂದು ವಾದವನ್ನು ಆಲಿಸುವ ವೇಳೆ ಪ್ರಕರಣದಲ್ಲಿ ಹೆಚ್ಚಿನ ಅಧ್ಯಯನಕ್ಕೆ ಅವಕಾಶ ನೀಡಬೇಕೆಂದು ಮಸೀದಿ ಸಮಿತಿಯ ಮನವಿಯನ್ನು ಚೀಫ್ ಜಸ್ಟಿಸ್ ಪುರಸ್ಕರಿಸಿದ್ದರು. ಪ್ರಕರಣವನ್ನು ಸೆಪ್ಟಂಬರ್ ಹನ್ನೆರಡಕ್ಕೆ ಮುಂದೂಡಲಾಗಿತ್ತು. ಗ್ಯಾನ್‍ವಾಪಿ ಮಸೀದಿಯಲ್ಲಿ ವಕೀಲರ ನೇತೃತ್ವದಲ್ಲಿ ಸಮೀಕ್ಷೆ ನಡೆಸುವ 2021ರ ವಾರಣಾಸಿ ಕೋರ್ಟಿನ ನಿರ್ದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಇದರ ಜೊತೆಗೆ ಕೋರ್ಟು ವಿಚಾರಣೆ ನಡೆಸಲಿದೆ.