ಸನ್ಮಾರ್ಗ ವಾರ್ತೆ
ಜೆರುಸಲೇಂ: ಕಳೆದ ವರ್ಷ 172 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದ ಫೆಲೆಸ್ತೀನ್‌ನ ಕೈದಿಯೊಬ್ಬನನ್ನು ವಿಚಾರಣೆ ಅಥವಾ ಆರೋಪವಿಲ್ಲದೆ ಅನ್ಯಾಯವಾಗಿ ಇಸ್ರೇಲಿ ಬಂಧಿಸಿರುವುದನ್ನು ವಿರೋಧಿಸಿ ಕೊನೆಗೂ ಬಿಡುಗಡೆ ಮಾಡಲಾಗಿದೆ. ಪ್ಯಾಲೆಸ್ತೀನ್ ಖೈದಿ ಖಲೀಲ್ ಅವ್ಡಾ ನಿನ್ನೆ ಇಸ್ರೇಲಿ ಜೈಲಿನಿಂದ ಬಿಡುಗಡೆಯಾದರು.
ಅವ್ಡಾ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ರಾಮಲ್ಲಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪ್ಯಾಲೇಸ್ತೀನಿಯನ್ ಮಾಹಿತಿ ಕೇಂದ್ರ (ಪಿಐಸಿ) ವರದಿ ಮಾಡಿದೆ. ಉಪವಾಸ ಸತ್ಯಾಗ್ರಹದ ನಂತರ, ಅವರ ಚರ್ಮ ಮತ್ತು ಮೂಳೆಗಳ ಚಿತ್ರಗಳು ಪ್ರಸಾರಗೊಂಡಿತ್ತು. ಸದ್ಯ ಅವರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ.
ಇಸ್ರೇಲ್ ಅತಿಕ್ರಮಿಸಿದ ಫೆಲೆಸ್ತೀನ್ ಬಿಟ್ಟು ಹೋಗುವುದು ಇಸ್ರೇಲ್ ಗೆ ಅನಿವಾರ್ಯ ಎನಿಸಿಕೊಳ್ಳುತ್ತದೆ ಎಂದು ಅವ್ದ್ ಫೆಲಸ್ತೀನಿ ಮಾಧ್ಯಮಗಳಿಗೆ ಹೇಳಿದರು. ಸ್ವಾತಂತ್ರ್ಯ ಮಹತ್ತವಾದ ವಿಷಯವಾಗಿದೆ. ಅದಕ್ಕಾಗಿ ಸಾವಿರಾರು ಮಂದಿ ವೀರ ಮೃತ್ಯ ಅಪ್ಪಿದ್ದಾರೆ. ಫೆಲಸ್ತೀನಿನ ಜನರ ಕನಸು ಸ್ವಾತಂತ್ರ್ಯವಾಗಿದೆ. ಒಂದು ದಿವಸ ಈ ನಾಡು ಬಿಡುಗಡೆಗೊಳ್ಳುವುದು. ಅಕ್ರಮಿಗಲು ನಮ್ಮ ಭೂಮಿ, ಕೃಷಿಯನ್ನು ಬಿಟ್ಟು ಹೋಗುವುದಕ್ಕೆ ನಿರ್ಬಂಧಿತರಾಗಲಿದ್ದಾರೆ.” ಎಂದು ಅವರು ಹೇಳಿದರು.
ಇಸ್ರೇಲಿ ಸಚಿವ ತೀವ್ರ ಬಲಪಥಿಂಯ ಇಟಾಮರ್ ಬೆನ್ ಗಿರ್ ನೇತೃತ್ವದಲ್ಲಿ ಕ್ರೂರ ದಾಳಿಗಳು ನಡೆಯುತ್ತಿದೆ. ಆದರೆ ಫೆಲಸ್ತೀನಿ ಕೈದಿಗಳು ಒಗ್ಗಟ್ಟಿನಿಂದ ಅದನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ವಿದ್ಯಾವಂತರಾಗಿರುವ ಖಲೀಲ್ ಸಾಮಾಜಿಕ ಕಾರ್ಯಕರ್ತ ಕೂಡ ಆಗಿದ್ದಾರೆ. ಪವಿತ್ರ ಕುರ್‍ಆನ್ ಕಂಠಪಾಠ ಮಾಡಿರುವ ಇವರು ಸ್ವಯಂಸೇವಾ ಕಾರ್ಯಕರ್ತರನ್ನು ಸಂಘಟಿಸಿ ಹಲವು ಸೇವಾ ಚಟುವಟಿಕೆಗಳಿಗೆ ನೇತೃತ್ವ ಕೊಟ್ಟಿದ್ದರು. 2002ರಿಂದ ಐದು ವರ್ಷ ಅವ್ದ್‍ರನ್ನು ಇಸ್ರೇಲ್ ಬಂಧಿಸಿಟ್ಟಿತ್ತು. 2021 ಡಿಸೆಂಬರ್ 27ಕ್ಕೆ ಕೊನೆಯದಾಗಿ ಅವರ ಬಂಧನವಾಗಿತ್ತು. ಅಂದಿನಿಂದ ಅವರ ವಿರುದ್ಧ ಯಾವುದೇ ಆರೋಪ ಹೊರಿಸದೆ ವಿಚಾರಣೆಯೂ ನಡೆಸದೆ ಇಸ್ರೇಲ್ ಜೈಲಿನಲ್ಲಿಟ್ಟಿತ್ತು.
ಬಿಡುಗಡೆ ಕೋರಿ 2022 ಮಾರ್ಚಿನಿಂದ ಜೈಲಲ್ಲಿ ಅವ್ದ್ ನಿರಾಹಾರ ಸತ್ಯಾಗ್ರಹ ಆರಂಭಿಸಿದರು. 2022 ಅಕ್ಟೋಬರ್ 2ಕ್ಕೆ ಬಿಡುಗಡೆಗೊಳಿಸಬಹುದೆಂದು ಬರಹದ ಮೂಲಕ ಭರವಸೆ ನೀಡಲಾಗಿತ್ತು. ಆಗಸ್ಟ್ 31ಕ್ಕೆ ಅವರು ಅನ್ನಸತ್ಯಾಗ್ರಹ ನಿಲ್ಲಿಸಿದರು. ಆದರೂ ಜೈಲಿನಲ್ಲಿ ಮೊಬೈಲ್ ತಂದಿದ್ದಾರೆ ಆರೋಪಿಸಿ ಬಿಡುಗಡೆ ತಡೆಯಲಾಗಿತ್ತು. ಕೊನೆಗೆ ಒಂದು ವರ್ಷಧ ಬಳಿಕ ನಿನ್ನೆ ಬಿಡುಗಡೆಗೊಳಿಸಲಾಗಿದೆ.
ಅವ್ಡಾ ಮದುವೆಯಾಗಿದ್ದು ನಾಲ್ವರು ಹೆಣ್ಣುಮಕ್ಕಳ ತಂದೆಯಾಗಿದ್ದಾರೆ. ಜೈಲಿನಿಂದ ಹೊರಬಂದ ಅವರನ್ನು ಅವರ ಕುಟುಂಬ, ಫೆಲಸ್ತೀನ್‍ನ ವಿವಿಧ ಸಂಘಟನೆಗಳು ಸೇರಿ ಹೃತ್ಪೂರ್ವಕವಾಗಿ ಸ್ವಾತಿಸಿದೆ.












