ಪುಲ್ವಾಮ ಭಯೋತ್ಪಾದನೆ; ಭಾರತ ನೀಡಿದ ಸಾಕ್ಷ್ಯಗಳು ಸಾಲದು ಎಂದ ಪಾಕಿಸ್ತಾನ

0
587

ಇಸ್ಲಾಮಾಬಾದ್,ಮಾ.28: ಪುಲ್ವಾಮ ಭಯೋತ್ಪಾದನಾ ದಾಳಿಗೆ ಸಂಬಂಧಿಸಿ ಭಾರತ ನೀಡಿದ ಸಾಕ್ಷ್ಯಗಳನ್ನು ಪಾಕಿಸ್ತಾನ ಸಾಲದು ಎಂದಿದೆ. ಪುಲ್ವಾಮ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಸಾಬೀತು ಪಡಿಸುವ ದಾಖಲೆಗಳನ್ನು ಭಾರತ ಹಸ್ತಾಂತರಿಸಿತ್ತು.ಆದರೆ ಭಾರತ ಕೊಟ್ಟ ಸಾಕ್ಷ್ಯಗಳುಪಾಕಿಸ್ತಾನದ ಸಂಘಟನೆಗಳ ಪಾತ್ರವನ್ನು ಸಾಬೀತು ಪಡಿಸಲು ಸಾಲುವಷ್ಟಿಲ್ಲ. ಹೊಸ ವಿವರಗಳು ನೀಡಿದರೆ ತನಿಖೆ ಮಾಡಲಾಗುವುದು ಎಂದು ಪಾಕಿಸ್ತಾನ ತಿಳಿಸಿದೆ.

ಇಸ್ಲಾಮಾಬಾದಿನ ಭಾರತ ಹೈಕಮಿಶನರ್ ಅಜಯ್ ಬಿಸಾರರಿಗೆ ಪಾಕಿಸ್ತಾನ ಈವಿಷಯವನ್ನು ಹೇಳಿದೆ. ಫೆಬ್ರುವರ 27ಕ್ಕೆ ಪುಲ್ವಾಮ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿತ್ತು. ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಜೈಷೆ ಮುಹಮ್ಮದ್ ಮತ್ತು ಮಸೂದ್ ಅಝರ್ ಭಯೋತ್ಪಾದನಾ ದಾಳಿಯಲ್ಲಿ ಶಾಮಿಲಾಗಿದ್ದಾರೆ ಎಂದು ಸೂಚಿಸುವ ದಾಖಲೆಗಳನ್ನು ಭಾರತ ಹಸ್ತಾಂತರಿಸಿತ್ತು. ಕೆಲವು ಟೆಲಿಫೋನ್ ನಂಬರ್‍ಗಳು ವಾಟ್ಸಪ್ ಐಡಿಗಳನ್ನು ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ವಿದೆ ಎನ್ನುವುದಕ್ಕೆ ಸಾಕ್ಷ್ಯಗಳಾಗಿ ಭಾರತ ಹಸ್ತಾಂತರಿಸಿದೆ ಎಂದು ಪಾಕಿಸ್ತಾನದ ಅಧಿಕಾರಿಗಳನ್ನು ಉದ್ಧರಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.