ಸನ್ಮಾರ್ಗ ವಾರ್ತೆ
ಲಕ್ನೊ, ಅ. 3: ಉತ್ತರ ಪ್ರದೇಶದ ಮಥುರಾದಲ್ಲಿ ಹಾಡುಹಗಲೇ ಪೊಲೀಸಧಿಕಾರಿಗೆ ಚಪ್ಪಲಿಯಿಂದ ಮಹಿಳೆಯು ಹೊಡೆದ ಘಟನೆ ನಡೆದಿದ್ದು, ಮಹಿಳೆಯನ್ನು ಪೊಲೀಸಧಿಕಾರಿ ತುಳಿಯುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರವಾಗುತ್ತಿದೆ.
ಸೋಮವಾರ ಘಟನೆ ನಡೆದಿದ್ದು ಶಾಪಿಂಗ್ ಮುಗಿಸಿ ಮರಳಿದ ಮಹಿಳೆಯು ಸಂಚರಿಸಿದ ಆಟೋವನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ನಂತರ ಪೊಲೀಸಧಿಕಾರಿ ತನ್ನೊಡನೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಮಹಿಳೆಯು ಆತನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ.
ಮಹಿಳೆ ಚಪ್ಪಲಿಯಿಂದ ಹೊಡೆದಾಗ ಪೊಲೀಸ್ ಮಹಿಳೆಯನ್ನು ದೂರಕ್ಕೆ ದೂಡಿದ್ದು ಆಕೆಯನ್ನು ತುಳಿಯುತ್ತಾನೆ. ಘಟನೆಯ ವೇಳೆ ಅಲ್ಲಿದ್ದ ಇನ್ನೊಬ್ಬ ಪೊಲೀಸಧಿಕಾರಿ ಇಬ್ಬರನ್ನು ದೂರ ಮಾಡಿದ್ದು ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರವಾಗಿತ್ತು. ನಂತರ ದೂರು ಸ್ವೀಕರಿಸಲಾಗಿದೆ ಆರೋಪಿ ಪೊಲೀಸಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.