ಡಾ.ಎಂ.ರಾಮಕೃಷ್ಣ ಅವರಿಗೆ “ಆದರ್ಶ” ಪ್ರಶಸ್ತಿ ಪ್ರಧಾನ

0
328

ಸನ್ಮಾರ್ಗ ವಾರ್ತೆ

ರಕ್ತದಾನ ನೇತ್ರದಾನ ಅಂಗಾಂಗ ದಾನ ಸಮಾಜ ಸೇವೆಗೆ ಹೆಸರಾದ ಡಾ.ಎಂ.ರಾಮಕೃಷ್ಣ ಜಿಗಣಿ ರಾಮಕೃಷ್ಣ ಅವರಿಗೆ ಇಂದು ಕೆ.ಎನ್.ಫೌಂಡೇಷನ್ ವತಿಯಿಂದ ನಡೆದ ಸಾಧಕರ ದಿನಾಚರಣೆ ಕಾರ್ಯಕ್ರಮದಲ್ಲಿ “ ಆದರ್ಶ’ ಪ್ರಶಸ್ತಿ ಪ್ರಧಾನಮಾಡಿ ಗೌರವಿಸಲಾಯಿತು ಮತ್ತು ಜೊತೆಯಲ್ಲಿ ಅವರ ಶ್ರೀಮತಿ ಮಂಜುಳಾ ರಾಮಕೃಷ್ಣ ಅವರನ್ನೂ ಗೌರವಿಸಲಾಯಿತು.

ಇದೇ ವೇದಿಕೆಯಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದ ವಿಕಲಚೇತನ ರಾಜ್ಯ ಮತ್ತು ಅಂತರ್ ರಾಜ್ಯ ಕ್ರೀಡಾಪಟುಗಳು ಮತ್ತು ಇತರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಅವರವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಜಿಗಣಿ ರಾಮಕೃಷ್ಣ ಅವರು ನೇತ್ರದಾನ ಅಂಗಾಂಗ ದಾನ ಮತ್ತು ಆರೋಗ್ಯದ ಬಗ್ಗೆ ತಿಳಿಸಿಕೊಟ್ಟು ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೇ,ಬೆಂಕಿಯಲ್ಲಿ ಸುಡದೇ ಎಲ್ಲರೂ ನೇತ್ರದಾನ ಅಂಗಾಂಗ ದಾನ ಮಾಡಬೇಕು ಮತ್ತು ಮಾಡಿಸಬೇಕೆಂದು ಮನವಿ ಮಾಡಿದರು.

ಕೆ.ಎನ್.ಫೌಂಡೇಷನ್ ಸಂಸ್ಥಾಪಕರಾದ ಶ್ರೀ.ನಾರಾಯಣ್ ಅವರು ಮಾತನಾಡುತ್ತಾ ನನ್ನ 93ನೇ ಜನ್ಮದಿನದ ಪ್ರಯುಕ್ತ ಇಂದು 5ನೇ ವರ್ಷದ ಸಾಧಕರ ದಿನಾಚರಣೆ ಕಾರ್ಯಕ್ರಮದಲ್ಲಿ ಎಲೆಮರೆಯಲ್ಲಿರುವ ರಾಷ್ಟ್ರ ಮತ್ತು ರಾಜ್ಯಮಟ್ಟದ ವಿಕಲಚೇತನ ರಾಜ್ಯ ಮತ್ತು ಅಂತರ್ ರಾಜ್ಯ ಕ್ರೀಡಾಪಟುಗಳು ಮತ್ತು ಇತರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಅವರವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಶಸ್ತಿ ನೀಡಿ ಗೌರವಿಸಿದ್ದು ನಮಗೆ ಸಂತಸ ತಂದಿದೆ ಅದರಲ್ಲೂ ಡಾ.ರಾಮಕೃಷ್ಣ ಅವರು ಅಂಧತ್ವ ನಿವಾರಣೆಗೆ ಶ್ರಮಿಸುತ್ತಾ ಹೊಸ ಬೆಳಕು ನೀಡುತ್ತಿರುವುದು ಅಭಿನಂದನೀಯ ಎಂದರು.

ಕೆ.ಎನ್.ಫೌಂಡೇಷನ್ ಮತ್ತು ಕೆ.ಎನ್.ಗ್ರೂಪಿನ ಮುಖ್ಯಸ್ಥರಾದ ರಾಜ್ ಕೃಷ್ಣಮೂರ್ತಿ,ಬಂಗಾರಪೇಟೆ ಮಣಿ,ಪೊಲೀಸ್ ಅಧಿಕಾರಿ ಮತ್ತಿತರರು ಹಾಜರಿದ್ದರು.