ಸ್ಲೋವಾಕಿಯಕ್ಕೆ ಮೊದಲ ಮಹಿಳಾ ಅಧ್ಯಕ್ಷೆ: ಝುಝಾನ ಕಪುಟೊವಾ ಅಧಿಕಾರಕ್ಕೆ

0
2161

ಬ್ರಟಿಸ್ಲಾವ,ಮಾ.31: ಸ್ಲೋವಾಕಿಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿ ಓರ್ವ ಮಹಿಳೆ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಪಕ್ಷ ಅಭ್ಯರ್ಥಿ ಮೊರಾಸ್ ಸೆಫ್ಕಾವರನ್ನು ಸೋಲಿಸಿ ಝುಝಾನ ಕಪುಟೊವಾ ಸ್ಲೊವಾಕಿಯ ಅಧ್ಯಕ್ಷೆಯಾಗಿ ಆಯ್ಕೆಯಾದರು. ರಾಜಕೀಯದಲ್ಲಿ ಅನನುಭವಿಯಾದ ಝುಝಾನಾ ಲಿಬರಲ್ ಪ್ರೊಗ್ರೆಸಿವ್ ಸ್ಲೋವಾಕಿಯ ಪಾರ್ಟಿಯ ಭ್ರಷ್ಟಾಚಾರ ವಿರೋಧಿ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಝುಝಾನಾ ಓರ್ವ ನ್ಯಾಯವಾದಿ ಮತ್ತು ಯುರೋಪಿಯನ್ ಕಮಿಶನ್‍ನ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದಾರೆ. ಅಧ್ಯಕ್ಷೀಯ ಸ್ಥಾನಕ್ಕೆ ನಡೆದ ಎರಡನೆ ಹಂತದ ಚುನಾವಣೆಯಲ್ಲಿ ಶೇ.58 ಮತಗಳನ್ನು ಪಡೆದು ಝುಝಾನ ಆಯ್ಕೆಯಾದರು. ಅವರ ನಿಕಟ ಪ್ರತಿಸ್ಪರ್ಧಿ ಸೆಪ್ಕಾವರಿಗೆ ಶೇ.42ರಷ್ಟು ಮತಗಳು ಚಲಾವಣೆಯಾಗಿದೆ. ಮೊದಲ ಹಂತದ ಚುನಾವಣೆಯಲ್ಲಿಯೂ ಸೆಫ್ಕಾವರಿಗಿಂತ ಹೆಚ್ಚು ಮತಗಳನ್ನು ಝುಝಾನಾ ಪಡೆದುಕೊಂಡಿದ್ದರು.

ದೇಶದಲ್ಲಿ ಕೋಲಾಹಲ ಸೃಷ್ಟಿಸಿದ ಪತ್ರಕರ್ತ ಜಾನ್ ಕು ಝಿಯಾಕ್ ಮತ್ತು ಅವರ ಮಹಿಳಾ ಗೆಳತಿಯ ಕೊಲೆ ಪ್ರಕರಣವನ್ನು ಝುಝಾನಾ ಚುನಾವಣಾ ವಿಷಯವಾಗಿ ಪ್ರಚಾರ ಮಾಡಿದ್ದರು. ತನ್ನ ಪ್ರತಿಸ್ಪರ್ಧಿ ಸೆಫ್ಕಾವ ಕೊಲೆಯ ಹಿಂದಿದ್ದಾರೆ ಎಂದು ಝುಝಾನ ಆರೋಪಿಸಿದ್ದರು. ಪ್ರತಿಪಕ್ಷ ಸ್ಮೆರ್ ಎಸ್‍ಡಿ ಪಾರ್ಟಿಯ ಬೆಂಬಲ ಕೂಡ ಝುಝಾನಾರಿಗಿತ್ತು.
ಸ್ಲೋವಾಕಿಯ ಪಾರ್ಲಿಮೆಂಟಿನಲ್ಲಿ ಝುಝಾನರ ಲಿಬರಲ್ ಪ್ರೊಗ್ರೆಸಿವ್ ಸ್ಲೋವಾಕಿಯ ಪಾರ್ಟಿಗೆ ಒಂದು ಸೀಟು ಕೂಡ ಇಲ್ಲ. ಆದರೆ ಈ ಪಾರ್ಟಿಯ ಸದಸ್ಯೆ ಎರಡು ಮಕ್ಕಳ ತಾಯಿಯಾದ ಝುಝಾನಾ ಈಗ ಸ್ಲೋವಾಕಿಯದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.