ಸಿರಿಯಾದ ಪ್ರಮುಖ ವಿದ್ವಾಂಸರೂ ಸಂದೇಶ ಪ್ರಚಾರಕರೂ ಆದ ಮುಹಮ್ಮದ್ ರಾತಿಬ್ ಅಲ್ ನಾಬುಲ್ಸಿ ಅವರು ನಡೆಸಿದ ಜುಮಾ ಪ್ರವಚನ
ಸನ್ಮಾರ್ಗ ವಾರ್ತೆ
ಡಾ. ಮುಹಮ್ಮದ್ ರಾತಿಬ್ ಅಲ್ ನಾಬುಲ್ಸಿ
ಸಂಭವಿಸುವ ಎಲ್ಲ ಘಟನೆಗಳಲ್ಲೂ ಅಲ್ಲಾಹನೇ ಪರಮ ಸತ್ಯ. ಅವನ ಆಡಳಿತವೇ ಈ ಲೋಕದಲ್ಲಿ ನಡೆಯುತ್ತದೆ. ಎಲ್ಲ ಆಕ್ರಮಣಕಾರಿಗಳೂ ‘ಅಲ್ಲಾಹನಲ್ಲದೇ ಬೇರೆ ದೇವನಿಲ್ಲ’ ಎಂದು ಹೇಳುವಂತೆ ಅಲ್ಲಾಹನು ತನ್ನ ದೃಷ್ಟಾಂತಗಳನ್ನು ಬಹಿರಂಗ ಪಡಿಸುತ್ತಿರುತ್ತಾನೆ. ವಿಶ್ವ ಕಂಡ ಅತ್ಯಂತ ದೊಡ್ಡ ತಾಗೂತ್ ಆದ ಫರೋವ ತನ್ನ ಮರಣಾಸನ್ನ ಸ್ಥಿತಿಯಲ್ಲಿ “ಇಸ್ರಾಈಲ್ ಸಂತತಿಗಳು ವಿಶ್ವಾಸವಿರಿಸಿದ ದೇವನಲ್ಲದೇ ಬೇರೆ ದೇವನಿಲ್ಲ. ನಾನು ಮುಸ್ಲಿಮರಲ್ಲಿ ಸೇರಿದ್ದೇನೆ” (ಯೂನುಸ್: 90) ಎಂದು ಒಪ್ಪಬೇಕಾಗಿ ಬಂತು. ಎಲ್ಲಾ ಧಿಕ್ಕಾರಿಗಳು ಹಾಗೂ ಸ್ವೇಚ್ಛಾಧಿಪತಿಗಳು ಈ ಸತ್ಯವನ್ನು ಒಪ್ಪಿಕೊಂಡೇ ಈ ಲೋಕಕ್ಕೆ ವಿದಾಯ ಹೇಳುತ್ತಾರೆ.
ಪರೀಕ್ಷೆಗಳಲ್ಲಿ ಚಂಚಲರಾಗದೆ ದೃಢ ಚಿತ್ತರಾಗಿರುವವರೇ ಸತ್ಯವಿಶ್ವಾಸಿಗಳು. ವಿಶ್ವದಲ್ಲಿ ನಡೆಯುತ್ತಿರುವುದೆಲ್ಲವೂ ಅಲ್ಲಾಹನಿಗೆ ತಿಳಿಯುತ್ತಿಲ್ಲವೇ? ಮತ್ತು ಅವನೇಕೆ ಅದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದೆಲ್ಲ ಕೆಲವು ದುರ್ಬಲ ವಿಶ್ವಾಸಿಗಳಿಗೆ ತೋರಬಹುದು. ಎಲ್ಲವನ್ನೂ ಅಲ್ಲಾಹನು ಅರಿಯುತ್ತಾನೆ, ನಿರ್ಣಯಿಸುತ್ತಾನೆ, ನಿಯಂತ್ರಿಸುತ್ತಾನೆ. ಎಲ್ಲ ವಿಷಯಗಳೂ ಅಲ್ಲಾಹನೆಡೆಗೇ ಮರಳಿಸಲ್ಪಡುತ್ತವೆ. ಅಹ್ಝಾಬ್ ಯುದ್ಧದ ಸಂದರ್ಭದಲ್ಲಿ ಶತ್ರು ಸೇನೆಯ ಸಂಖ್ಯಾಬಲವನ್ನು ಕಂಡು ಆತಂಕಗೊಂಡ ಪ್ರವಾದಿ(ಸ) ಮತ್ತು ಸಹಾಬಿಗಳು ಆ ಸಂದಿಗ್ಧ ಘಟ್ಟದ ಬಳಿಕ ಕ್ಷೇಮವಾಗಿ ದಡ ಸೇರಿರುವುದನ್ನು ನಾವು ತಿಳಿದಿದ್ದೇವೆ. ಮುಸ್ಲಿಮರಲ್ಲಿರುವ ಒಳ್ಳೆಯವರನ್ನು ಕೆಟ್ಟವರನ್ನು ಬೇರ್ಪಡಿಸುವುದು ಇಂಥ ಪರೀಕ್ಷೆಗಳ ಗುರಿಯಾಗಿದೆ.
ವಿಶ್ವವು ಎರಡು ವಿಭಾಗಗಳಾಗಿ ವಿಂಗಡಿಸಲ್ಪಟ್ಟದ್ದನ್ನು ನಾವು ಕಂಡೆವು. ಅಪರಾಧಿಗಳ ಒಂದು ವಿಭಾಗ, ಮಾನವೀಯತೆಯ ವಾಹಕರ ಒಂದು ವಿಭಾಗ. ಅಪರಾಧಿಗಳ ಪರ ವಹಿಸುವವರೂ ಅಪರಾಧಿಗಳಾಗಿದ್ದಾರೆ. ಪ್ರವಾದಿ ಸಾಲಿಹ್(ಅ)ರ ಜನತೆಯಲ್ಲಿ ಓರ್ವ ವ್ಯಕ್ತಿ ದೇವನ ದೃಷ್ಟಾಂತವಾದ ಒಂಟೆಯನ್ನು ಕಡಿದು ಕೊಂದನು. ಆತನ ಆ ದುಷ್ಕೃತ್ಯವನ್ನು ಬೆಂಬಲಿಸಿದರು ಎಂಬ ಕಾರಣಕ್ಕೆ ಆ ಸಮೂಹವನ್ನೇ ಅಪರಾಧಿಗಳ ರೀತಿಯಲ್ಲಿ ಪವಿತ್ರ ಕುರ್ಆನ್ ಚಿತ್ರಿಸಿತು. ಅಥವಾ ‘ಅವರು ಕೊಂದರು’ ಎಂದು ಹೇಳಿತು. ದುಷ್ಕೃತ್ಯಗಳನ್ನು ಕಂಡು ಮೌನ ವಹಿಸುವವರು ಕೂಡಾ ಅಪರಾಧದಲ್ಲಿ ಪಾಲುದಾರರು ಎಂಬುದು ಇದರಿಂದ ತಿಳಿಯುವ ಪಾಠ. ಈ ಅರ್ಥದಲ್ಲಿ ಇಸ್ರೇಲ್ನ ಪರ ವಹಿಸುವವರೂ ಅಪರಾಧಿಗಳಾಗಿದ್ದಾರೆ.
‘ನೀವು ಶತ್ರುಗಳನ್ನು ಎದುರಿಸಲು ಸಾಧ್ಯವಾದಷ್ಟು ಸಿದ್ಧತೆ ಮಾಡಿಕೊಳ್ಳಿರಿ’ ಎಂಬ ಪವಿತ್ರ ಕುರ್ಆನ್ನ ಆಹ್ವಾನವನ್ನು ಹಮಾಸ್ ಗಣನೆಗೆ ತೆಗೆದುಕೊಂಡಿದೆ ಎನಿಸುತ್ತದೆ. ಶತ್ರುಗಳ ಸಿದ್ಧತೆಗೆ ಸಮಾನವಾದ ಶಸ್ತ್ರಗಳನ್ನು ಹೊಂದಬೇಕೆಂದು ಕುರ್ಆನ್ ಹೇಳಿಲ್ಲ. ಸಾಮರ್ಥ್ಯದ ಪರಮಾವಧಿ ಎಂದು ಮಾತ್ರವೇ ನಮ್ಮೊಡನೆ ಹೇಳಿದೆ. ಹಮಾಸ್ ಆ ರೀತಿಯಲ್ಲಿ ಅದನ್ನು ಗಳಿಸಿಕೊಂಡಿತು.
ಪರಸ್ಪರ ಕಾಣಲು ಸಾಧ್ಯವಿಲ್ಲದ ರೀತಿಯಲ್ಲಿ ಅಪರಾಧಿಗಳನ್ನು ಒಂದು ಭೂಖಂಡದಲ್ಲೂ ಇತರರನ್ನು ಇನ್ನೊಂದು ಭೂಭಾಗದಲ್ಲೂ ಇರಿಸಿದರೆ ಒಳ್ಳೆಯದಿತ್ತು. ಆದರೆ ಹಾಗೆ ಸಂಭವಿಸುವುದಿಲ್ಲ. ಅಪರಾಧಿಗಳು 15ನೇ ಶತಮಾನದಲ್ಲೂ ಸತ್ಯವಿಶ್ವಾಸಿಗಳು 16ನೇ ಶತಮಾನದಲ್ಲೂ ಬದುಕಲಿ ಎಂದು ಮಾಡಬಹುದಿತ್ತು. ಆದರೆ ಹಾಗೂ ನಡೆಯಲಿಲ್ಲ. ಸತ್ಯವಿಶ್ವಾಸಿಗಳು ಮತ್ತು ಅಪರಾಧಿಗಳು ಒಂದೇ ಭೂಮಿಯಲ್ಲಿ, ಒಂದೇ ಕಾಲದಲ್ಲಿ ಒಂದಾಗಿಯೇ ಜೀವಿಸಬೇಕು ಎಂಬುದು ಅಲ್ಲಾಹನ ನಿರ್ಣಯ. ಈ ತೀರ್ಮಾನದ ಹಿಂದೆ ಒಂದು ದೈವಿಕ ಯುಕ್ತಿ ಇದೆ. ಅಸತ್ಯ ಮತ್ತು ಅಪರಾಧಿಗಳ ಕಡೆಯಿಂದ ಎಚ್ಚರಿಕೆಯ ಗಂಟೆಗಳು ಕೇಳಿ ಬರುವಾಗ ಮಾತ್ರ ಸತ್ಯಕ್ಕೆ ಶಕ್ತಿ ಉಂಟಾಗಲು ಸಾಧ್ಯ. ಸತ್ಯವಾದಿಗಳಿಗೆ ಭೂಮಿ-ಆಕಾಶದಷ್ಟು ವಿಶಾಲವಾದ ಸ್ವರ್ಗ ಲಭಿಸಬೇಕಾದರೆ ಸತ್ಯ-ಅಸತ್ಯದ ನಡುವಿನ ಹೋರಾಟ ಅನಿವಾರ್ಯವಾಗಿದೆ. ಅಪರಾಧಿಗಳೊಂದಿಗೆ ಒಂದೇ ಕಾಲ, ಒಂದೇ ಸ್ಥಳದಲ್ಲೂ ಜೀವಿಸಿ, ಕಾರ್ಯನಿರ್ವಹಿಸಿ, ಎದುರಿಸಿಯೇ ಈ ಗುರಿಯನ್ನು ಸಾಧಿಸಬೇಕಾಗುತ್ತದೆ.
ಘರ್ಷಣೆಗಳು 3 ವಿಧ
ಎರಡು ಸತ್ಯಗಳ ನಡುವೆ ಘರ್ಷಣೆ ಉಂಟಾಗುವುದಿಲ್ಲ. ಸತ್ಯ ಮತ್ತು ಅಸತ್ಯದ ನಡುವಿನ ಸಂಘರ್ಷ ದೀರ್ಘವಿರುವುದಿಲ್ಲ. ಎರಡು ಅಸತ್ಯಗಳ ನಡುವಿನ ಸಂಘರ್ಷವಾದರೆ ಅದು ಕೊನೆಗೊಳ್ಳುವುದಿಲ್ಲ. ಸತ್ಯ-ಮಿಥ್ಯದೊಂದಿಗಿನ ಸಂಘರ್ಷದಲ್ಲಿ ಅಲ್ಲಾಹನು ಸತ್ಯದ ಜೊತೆಗಿರುತ್ತಾನೆ. ಅಲ್ಲಾಹನ ಇಚ್ಛೆಯಂತೆ ಸತ್ಯ-ಮಿಥ್ಯದ ಸಂಘರ್ಷ ನಡೆಯುತ್ತಿರುತ್ತದೆ. ಅದು ಅಲ್ಲಾಹನ ತೃಪ್ತಿಯೆಂದು ನಾವು ಭಾವಿಸಬೇಕಾಗಿಲ್ಲ. ಅವುಗಳ ಹಿಂದೆ ಅವನಿಗೆ ಮಾತ್ರ ತಿಳಿದಿರುವ ಯುಕ್ತಿ ಇರುತ್ತದೆ. ಗ್ರಹಿಸುವವರಿಗೆ ಇದನ್ನು ಅರ್ಥೈಸಲು ಸಾಧ್ಯ. ಅಲ್ಲದವರಿಗೆ ಅದು ನಿಗೂಢವಾಗಿಯೇ ಉಳಿಯುತ್ತದೆ. ಈ ಯುದ್ಧದ ರಚನಾತ್ಮಕ ಫಲಗಳು ಹೊರಬರಬೇಕಷ್ಟೇ.
ಮರಣ ಹೊಂದಿದವರು ಮರಣ ಹೊಂದಿದರು. ಅವರ ಕರ್ಮಗಳು ಕೊನೆಗೊಂಡವು. ನಾಶಗೊಂಡಿರುವವುಗಳನ್ನು ಪುನರ್ ನಿರ್ಮಿಸಲು ಸಾಧ್ಯವಾಗಬಹುದು. ಆದರೆ ಶತ್ರುವಿನ ಗುರಿ ನಮ್ಮ ಇಚ್ಛಾಶಕ್ತಿಯನ್ನು ಇಲ್ಲವಾಗಿಸುವುದಾಗಿತ್ತು. ಆದರೆ ಶತ್ರುಗಳಿಗೆ ಅದು ಸಾಧ್ಯವಾಗಲಿಲ್ಲ. ಹಲವು ದಶಕಗಳ ಕಾಲ ಫೆಲೆಸ್ತೀನಿಯರನ್ನು ಭಯ ಪಡಿಸಲಾಯಿತು. ಈಗ ಅವರೇ ಭಯದಲ್ಲಿದ್ದಾರೆ. ಝಿಯೋನಿಝಂನ ಮರ್ಮಭಾಗಕ್ಕೆ ಪ್ರಹಾರ ನಡೆದಿದೆ. ಇದುವರೆಗೆ ಇಸ್ರೇಲ್ನ ಸುರಕ್ಷ ತೆಯು ಝಿಯೋನಿಸ್ಟ್ ಗಳ ವಿಷಯವಾಗಿತ್ತು. ಇದೀಗ ಇಸ್ರೇಲ್ ಉಳಿಯುತ್ತದೆಯೇ ಎಂಬ ಪ್ರಶ್ನೆಯ ಉದಯವಾಗಿದೆ.
ಸತ್ಯವಿಶ್ವಾಸಿಗಳು ಅನುಭವಿಸುವ ಪ್ರತಿಯೊಂದು ಪರೀಕ್ಷೆಯೂ ಅವರನ್ನು ಅಲ್ಲಾಹನಿಗೆ ನಿಕಟಗೊಳಿಸುತ್ತದೆ. ಅವರು ಅನುಭವಿಸುವ ಪ್ರತಿ ಪರೀಕ್ಷೆಯೂ ಅವರಿಗೆ ಅಲ್ಲಾಹನ ಕೊಡುಗೆಯಾಗಿರುತ್ತದೆ. ಎಲ್ಲವೂ ಅಲ್ಲಾಹನ ಯುಕ್ತಿಯ ಭಾಗವಾಗಿಯೇ ಸಂಭವಿಸುತ್ತದೆ. ಅಲ್ಲಾಹನ ಚಿತ್ತವು ಅವನ ಸಂಪೂರ್ಣ ಇಚ್ಛೆಗೆ ಸಂಬಂಧಪಟ್ಟಿದೆ. ಅದು ಕೇವಲ ಒಳ್ಳೆಯದಕ್ಕೆ ಸಂಬಂಧಿಸಿದೆ. ಘಟನೆಗಳ ನಕಾರಾತ್ಮಕ ಅಂಶಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳುತ್ತಾರೆ. ಕೊಲೆ, ರಕ್ತಪಾತಗಳು, ಬಂಧನಗಳು, ಮನೆಗಳ ಧ್ವಂಸ, ಆಹಾರ ವಸ್ತುಗಳನ್ನು ಅಗ್ನಿಗಾಹುತಿ ಮಾಡುವುದು, ಆಸ್ಪತ್ರೆಗಳ ನಾಶ… ಹೀಗೆ ಹಲವು. ಆದರೆ ನಾವು ಮೇಲ್ನೋಟಕ್ಕೆ ಕಾಣುವ ವಿಷಯವನ್ನು ಬಿಟ್ಟು ಆಳವಾಗಿ ಪರಿಶೀಲಿಸುವಾಗ ಕೆಲವು ಮೂಲಭೂತ ವಾಸ್ತವಿಕತೆಗಳನ್ನು ಕಾಣಬಹುದು.
ಇವುಗಳಲ್ಲಿ ಅತ್ಯಂತ ಮುಖ್ಯ ವಿಷಯವೇನೆಂದರೆ, ಝಿಯೋನಿಝಂ ಮರ್ಮಕ್ಕೆ ಬಿದ್ದ ತೀವ್ರವಾದ ಹೊಡೆತ. ಅವರ ಮೊದಲ ಗುರಿ ಝಿಯೋನಿಝಂಗೆ ಒಂದು ಅಭಯ ಕೇಂದ್ರವನ್ನು ನೀಡುವುದಾಗಿತ್ತು. ಆದರೆ ಆ ಗುರಿಯು ಛಿದ್ರವಾಯಿತು. ನಿರ್ಭಯತೆ ಹೋಗಿ ಅಸ್ತಿತ್ವವೇ ಬಿಕ್ಕಟ್ಟಿನಲ್ಲಿದೆ. ಎರಡನೆಯದಾಗಿ, ಯುದ್ಧಗಳನ್ನು ಆರಂಭಿಸುತ್ತಿದ್ದ ಅವರು ಗಂಟೆಗಳೊಳಗೆ ಅದನ್ನು ಕೊನೆಗೊಳಿಸುತ್ತಿದ್ದರು. ಈಗ ಅದು ಸಾಧ್ಯವಾಗುತ್ತಿಲ್ಲ. ಮೂರನೆಯದಾಗಿ, ಅವರು ಅವರ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಹಮಾಸ್ನ ರಾಕೆಟ್ಗಳಿಗೆ ಅವರು ಭಯಪಡುತ್ತಾರೆ.
ಶತ್ರುಗಳ ಮುಖವನ್ನು ವಿಕೃತಗೊಳಿಸಿ ತೋರಿಸಲು ಲಕ್ಷಾಂತರ ಹಣ ಖರ್ಚಾಗುವುದಿದೆ. ಇಲ್ಲಿ ಅದರ ಯಾವುದೇ ಅಗತ್ಯ ಬೀಳಲಿಲ್ಲ. ಶತ್ರು ಸ್ವತಃ ತನ್ನ ವಿಕೃತ ಮುಖವನ್ನು ವಿಶ್ವದ ಮುಂದೆ ಪ್ರದರ್ಶಿಸಿದ್ದಾನೆ.
ಎಲ್ಲ ಸಮುದಾಯಗಳಿಗೂ ಒಂದು ಅವಧಿ ನಿಶ್ಚಯಿಸಲ್ಪಟ್ಟಿದೆ. ಮುಸ್ಲಿಮರು ಕೇವಲ ಬೊಬ್ಬೆ ಹೊಡೆಯುತ್ತಾರೆ, ಕೆಲಸ ಮಾಡುವುದಿಲ್ಲ ಎಂದು ಶತ್ರುಗಳು ಭಾವಿಸಿದ್ದರು. ಪೌರ್ವಾತ್ಯ, ಪಾಶ್ಚಾತ್ಯರಾದ ಮುಸ್ಲಿಮ್ ವಿರೋಧಿಗಳು ಮತ್ತು ಮುಸ್ಲಿಮರಾದ ಕೆಲವರು ಹಮಾಸನ್ನು ಇಲ್ಲವಾಗಿಸಲು ಪ್ರಯತ್ನಿಸಿದರೂ ಹಮಾಸ್ಗೆ ತನ್ನ ಅಸ್ತಿತ್ವ, ಸಾನಿಧ್ಯ ಮತ್ತು ನ್ಯಾಯವನ್ನು ವಿಶ್ವಕ್ಕೆ ತಿಳಿಸಲು ಸಾಧ್ಯವಾಯಿತು. ಎಲ್ಲ ನಿರೀಕ್ಷೆ ಗಳನ್ನು ತಪ್ಪಿಸಿ ಹಮಾಸ್ ತನ್ನ ಇರುವನ್ನು ಸಾಬೀತು ಪಡಿಸಿತು. ಅಣುಶಕ್ತಿ ದೇಶವಾದ ಇಸ್ರೇಲನ್ನು ನಡುಗಿಸಲು ಸಾಧ್ಯವಾಯಿತು. “ಅವರು ತಮ್ಮ ಕುತಂತ್ರಗಳನ್ನು ಮಾಡಿದರು. ನಾವೂ ನಮ್ಮ ತಂತ್ರವನ್ನು ಹೆಣೆದೆವು” ಎಂಬ ಸೂಕ್ತವನ್ನು ಇದು ಅನ್ವರ್ಥಗೊಳಿಸುವಂತೆ ಇತ್ತು. ನೀವು ಸಹನೆ ಮತ್ತು ಭಕ್ತಿಯನ್ನು ತೋರುವುದಾದರೆ ಅವರ ಕುತಂತ್ರಗಳು ಫಲಿಸುವುದಿಲ್ಲ ಎಂಬ ಸೂಕ್ತವನ್ನೂ ಇಲ್ಲಿ ನೆನಪಿಸಬಹುದು.
ನಮಗೆ ಅಲ್ಲಾಹನು ಸಹಾಯ ನೀಡಬೇಕಾಗಿದೆ. ಅವನು ನಮಗೆ ಸಹಾಯ ಮಾಡಬೇಕಾದರೆ ನಾವು ಅವನಿಗೆ ಸಹಾಯ ಮಾಡಬೇಕು. ಸಮಾಜದ ದುರ್ಬಲರಿಗೆ ನಾವು ಸಹಾಯ ಮಾಡುವಾಗ, ಆ ಮೂಲಕ ಅಲ್ಲಾಹನ ಸಹಾಯ ನಮಗೆ ಲಭಿಸುತ್ತದೆ. ನಮಗಿಂತಲೂ ಪ್ರಬಲರಾದವರನ್ನು ಜಯಿಸಲು ಅವನ ಸಹಾಯ ನಮಗೆ ದೊರೆಯುವುದು. ‘ಸತ್ಯವಿಶ್ವಾಸಿಗಳಿಗೆ ಸಹಾಯ ಮಾಡುವುದು ನಮ್ಮ ಬಾಧ್ಯತೆಯಾಗಿದೆ.’ (ರ್ರೂಮ್: 47)
ನಾವು ಸತ್ಯವಿಶ್ವಾಸಿಗಳಾದರೆ ಸಾಲದು, ಪೀಡಕರನ್ನು ಎದುರಿಸುವ ಸಿದ್ಧತೆಯನ್ನು ನಡೆಸಿರಬೇಕು. ಸಾಧ್ಯವಿಲ್ಲ. ಅಕ್ರಮಿಯಾದ ಶತ್ರುವಿಗೆ ಶಕ್ತಿಯ ಭಾಷೆ ಮಾತ್ರ ಅರಿವಾಗುವುದು. “ತಮಗೆ ಏನಾದರೂ ಮರ್ದನ ಎದುರಿಸಬೇಕಾಗಿ ಬಂದರೆ ಸುರಕ್ಷಾ ಕ್ರಮಗಳನ್ನು ಸತ್ಯವಿಶ್ವಾಸಿಗಳು ಸ್ವೀಕರಿಸುತ್ತಾರೆ.” (ಅಶ್ಶೂರಾ: 39)
ಸ್ವರ್ಗಪ್ರಾಪ್ತಿಯ ಮೂರು ಉಪಾಧಿ ಹೀಗಿದೆ: ಹುತಾತ್ಮತೆಯ ನಿಯ್ಯತ್ನೊಂದಿಗೆ ಬದುಕಿದ್ದರೆ, ಮರಣ ಹೊಂದುವುದು ಹಾಸಿಗೆಯಲ್ಲೇ ಆಗಿದ್ದರೂ ಹುತಾತ್ಮತೆ ಗಳಿಸಲು ಸಾಧ್ಯವಿದೆ. ಹೋರಾಟಗಾರರನ್ನು ತಯಾರಿಸು ವುದೂ ಹೋರಾಟವೇ ಆಗಿದೆ. ಇದು ಯಾವುದೂ ಸಾಧ್ಯವಾಗದವರು ರಾತ್ರಿಯಲ್ಲಿ ಎದ್ದು 2 ರಕಅತ್ ನಮಾಝ್ ಮಾಡಿ ಹೋರಾಟಗಾರರಿಗೆ ಪ್ರಾರ್ಥಿಸುವ ಕೆಲಸವಾದರೂ ಮಾಡಲಿ. ಜನರ ಗೈರು ಹಾಜರಿಯಲ್ಲಿ ಅವರಿಗಾಗಿ ನಡೆಸುವ ಪ್ರಾರ್ಥನೆಯು ಅಲ್ಲಾಹನ ಉತ್ತರ ಶೀಘ್ರದಲ್ಲೇ ದೊರೆಯುವ ಸಾಧ್ಯತೆ ಇರುವುದಾಗಿದೆ.












