ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಅಯೋಧ್ಯೆಯ ರಾಮಮಂದಿರ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಗೆ ಆಹ್ವಾನ ನೀಡಲಾಗಿದೆ ಎಂದು ಎನ್ಐಎ ವರದಿ ಮಾಡಿದೆ.
ರಾಮಮಂದಿರ ನಿರ್ಮಾಣ ಸಮಿತಿಯ ನೃಪೇಂದ್ರ ಮಿಶ್ರ ಜನುವರಿ 22ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಯೆಚೂರಿಗೆ ಆಹ್ವಾನ ನೀಡಿದ್ದಾರೆ.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಮನ್ಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿಗೂ ಆಹ್ವಾನ ಇದೆ. ಅಯೋಧ್ಯೆಯ ರಾಮಮಂದಿರ ಪ್ರತಿಷ್ಠಾ ಕಾಯಕ್ರಮಕ್ಕೆ ಆಹ್ವಾನ ನೀಡಲಾದವರ ಹೆಸರು ಈ ಹಿಂದೆ ಬಂದಿತ್ತು.
ವಿರಾಟ್ ಕೊಹ್ಲಿ ಸಚಿನ್ ತೆಂಡುಲ್ಕರ್, ಮಾತಾ ಅಮೃತಾನಂದಮಯಿ, ಅಕ್ಷಯ್ ಕುಮಾರ್ ರಜನೀಕಾಂತ್, ಮಾಧುರಿ ದೀಕ್ಷಿತ್ ಅನುಪಂ ಖೇರ್ ,ಚಿರಂಜೀವಿ, ಋಷಬ್ ಶೆಟ್ಟಿ, ಧನುಷ್ , ರಾಜ್ಕುಮಾರ್ ಹಿರಾನಿ , ಸಂಜಯ ಲೀಲ ಬನ್ಸಾಲಿ. ರೋಹಿತ್ ಶೆಟ್ಟಿ ಇವರಲ್ಲಿದ್ದಾರೆ. ವಿದೇಶದಿಂದ ಐವತ್ತು ಮಂದಿ ಬರಲಿದ್ದಾರೆ.












