ಮೋದಿಯ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸುವಂತೆ ಮಮತಾರಿಗೆ ಸವಾಲು ಹಾಕಿದ ಬಿಜೆಪಿ

0
315

ಸನ್ಮಾರ್ಗ ವಾರ್ತೆ

ಕೊಲ್ಕತಾ: ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವಂತೆ ಮಮತಾ ಬ್ಯಾನರ್ಜಿಯವರಿಗೆ ಬಿಜೆಪಿ ಸವಾಲು ಹಾಕಿದೆ. ಹೀಗೆಂದದ್ದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಅಗ್ನಿಮಿತ್ರ ಪೋಲ್.

ಸೀಟು ಹಂಚಿಕೆಯ ಮೊದಲು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅಲ್ಲಿ ಸ್ಪರ್ಧಿಸುವುದೆಂದಿತ್ತು. ಆದರೆ ಅಗ್ನಿಮಿತ್ರ ಅವರ ಪ್ರಕಾರ ಮಮತಾ ಬ್ಯಾನರ್ಜಿ ಸ್ಪರ್ಧಿಸುವ ಧೈರ್ಯ ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ.

ಈ ಹಿಂದೆ ವಾರಣಾಸಿಯಿಂದ ಪ್ರಿಯಾಂಕಾಗಾಂಧಿ ಸ್ಪರ್ಧಿಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅಗ್ನಿಮಿತ್ರ ಮಮತಾರನ್ನು ಸ್ಪರ್ಧಿಸುವಂತೆ ಹೇಳಿದ್ದಾರೆ. 2019ರಲ್ಲಿಯೂ ಪ್ರಿಯಾಂಕಾ ಗಾಂಧಿ ವಾರಣಾಸಿಯಿಂದ ಕಣಕ್ಕಿಳಿಯುತ್ತಾರೆ ಎಂಬ ಮಾತುಗಳು ಪ್ರಚಾರದಲ್ಲಿತ್ತು.

ಡಿಸೆಂಬರ್ ಕೊನೆಯಲ್ಲಿ ಇಂಡಿಯ ಸಖ್ಯದ ಸೀಟು ಹಂಚಿಕೆ ಮುಗಿಯಬೇಕು ಎಂದೂ ಮಮತಾ ಬ್ಯಾನರ್ಜಿ ಹೇಳಿದ್ದರು. ಜನವರಿ ಎರಡಕ್ಕೆ ಇಂಡಿಯ ಕೂಟದ ನಾಯಕರು ಸಭೆ ಸೇರಿ ಸೀಟು ಕುರಿತ ಲೆಕ್ಕಾಚಾರ ಅಂತಿಮಗೊಳಿಸುವುದು ಈಗಿನ ವ್ಯವಸ್ಥೆಯಾಗಿದೆ. ಮಮತಾ ಬ್ಯಾನರ್ಜಿ ಲೋಕಸಭೆಗೆ ಸ್ಪರ್ಧಿಸುವ ವಿಚಾರ ಆಗ ಬಹಿರಂಗವಾಗುತ್ತದೆ.