ಹಜ್: 2026 ರಿಂದ ಮುಂದಿನ 17 ವರ್ಷ ಇರಲಿದೆ ಚಳಿ; ವರದಿ

0
282

ಸನ್ಮಾರ್ಗ ವಾರ್ತೆ

ಈ ಬಾರಿಯ ಹಜ್ ನ ಸಮಯದಲ್ಲಿ ಅತಿ ತೀವ್ರ ಬಿಸಿಲಿತ್ತು ಎಂಬುದು ಎಲ್ಲರಿಗೂ ಗೊತ್ತು. ಆದರೆ 2026 ರ ಹಜ್ ತಂಪಿನಿಂದ ಕೂಡಿರುತ್ತದೆ ಎಂದು ಹೇಳಲಾಗಿದೆ. 2025ರ ಹಜ್ ವೇಳೆ ತೀವ್ರ ಬಿಸಿಲು ಇರಬಹುದು. ಆದರೆ ಮುಂದಿನ ವರ್ಷದಿಂದ ಇಂತಹ ಬಿಸಿಲು ಇರಲಾರದು ಎಂದು ತಿಳಿದು ಬಂದಿದೆ.

ಈ ವರ್ಷ ತೀವ್ರ ಬಿಸಿಲಿನ ವೇಳೆ ಹಜ್ ಕರ್ಮ ನಿರ್ವಹಿಸಲಾಗಿದೆ. ಮಕ್ಕಾದ ಇತಿಹಾಸದಲ್ಲಿ ಇಷ್ಟು ತೀವ್ರ ಬಿಸಿಲಿನ ಸಂದರ್ಭ ಬಂದಿರೋದು ಕಡಿಮೆ ಎಂದು ಹೇಳಲಾಗುತ್ತಿದೆ. ಈ ಬಾರಿ 51 ಡಿಗ್ರಿ ಸೆಲ್ಸಿಯಸ್ ವರೆಗೆ ಬಿಸಿಲಿನ ತಾಪ ಇತ್ತು.

2026ರ ಬಳಿಕ ತಂಪಿನ ವಾತಾವರಣ ಇರಲಿದ್ದು ಇದು ಮುಂದಿನ 17 ವರ್ಷಗಳವರೆಗೆ ಹಾಗೆಯೇ ಉಳಿಯಲಿದೆ ಎಂದು ಹೇಳಲಾಗುತ್ತಿದೆ. 2026 ರಿಂದ ಮುಂದಿನ ಎಂಟು ವರ್ಷಗಳವರೆಗೆ ತೀವ್ರ ಚಳಿಯ ವಾತಾವರಣದಲ್ಲಿ ಹಜ್ ಕರ್ಮ ನೆರವೇರಿಸಬೇಕಾಗಬಹುದು ಎಂದು ಹೇಳಲಾಗಿದೆ.