ತಮಿಳ್ನಾಡು: ಕಳ್ಳಭಟ್ಟಿ ದೊರೆ ಚಿನ್ನ ದೊರೈ ಬಂಧನ

0
181

ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿಯ ಕಳ್ಳಭಟ್ಟಿ ದುರಂತದ ಪ್ರಮುಖ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಈತನೇ ಕಳ್ಳಭಟ್ಟಿಯನ್ನು ಕರುಣಾಪುರಕ್ಕೆ ಒದಗಿಸಿದ್ದು ಈ ವರೆಗೆ ಇದನ್ನು ಸೇವಿಸಿದ 55 ಜನರು ಜೀವ ಕಳಕೊಂಡಿದ್ದಾರೆ. ಜೊತೆಗೆ ಕಳ್ಳಭಟ್ಟಿ ಸೇವನೆಯಿಂದ ಸಾವಿನ ಸಾವಿನ ಸುದ್ದಿ ದಿನಾಲೂ ವರದಿಯಾಗುತ್ತಿದ್ದು ಇನ್ನೊಂದು ಕಡೆ ವಿಷ ಮದ್ಯ ಸೇವಿಸಿ ಅಸ್ವಾಸ್ಥ್ಯಗೊಂಡವರು ಚಿಕಿತ್ಸೆಗೆ ಕೂಡ ದಾಖಲಾಗುತ್ತಿದ್ದಾರೆ ಎಂದು ವರದಿಯಾಗಿದೆ. .

ನ್ಯಾಯಮೂರ್ತಿ ಬಿ ಗೋಕುಲದಾಸ್ (ನಿವೃತ್ತ) ನೇತೃತ್ವದ ಏಕಸದಸ್ಯ ಆಯೋಗವು ಘಟನೆಯ ತನಿಖೆಯನ್ನು ಪ್ರಾರಂಭಿಸಿದ್ದು ಮೂರು ತಿಂಗಳಲ್ಲಿ ಘಟನೆಯ ಕುರಿತು ವರದಿ ನೀಡಲಿದೆ. ಘಟನೆಗೆ ಸಂಬಂಧಿಸಿ ಸ್ಟಾಲಿನ್ ಸರಕಾರ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು, ಜಿಲ್ಲಾಧಿಕಾರಿಯನ್ನು ಕೂಡ ಅಮಾನತಿನಲ್ಲಿರಿಸಿದೆ.

ಇದೇ ವೇಳೆ ಅಕ್ರಮ ಮದ್ಯ ದಂಧೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಆದರೆ, ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಒತ್ತಾಯಿಸಿವೆ. ಎಐಎಡಿಎಂಕೆ ಮುಖ್ಯಸ್ಥ ಇ ಪಳನಿಸ್ವಾಮಿ ಅವರು ಸ್ಟಾಲಿನ್ ಅವರನ್ನು “ಅಸಮರ್ಥ” ಮುಂಖ್ಯ ಮಂತ್ರಿ ಎಂದು ಟೀಕಿಸಿದ್ದರೆ ತಮಿಳ್ನಾಡು ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಕನಿಷ್ಠ 1,000 ಮದ್ಯದ ಅಂಗಡಿಗಳನ್ನು ಸರ್ಕಾರ ಮುಚ್ಚುವಂತೆ ಆಗ್ರಹಿಸಿದರು.