ಭಾರತದ ಕೋಟ್ಯಾಧಿಪತಿಗಳಲ್ಲಿ ಶೇ. 88ರಷ್ಟು ಮಂದಿ ಮೇಲ್ಜಾತಿಯವರು: ವರದಿ

0
381

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭಾರತದ ಕೋಟ್ಯಾಧಿಪತಿಗಳ ಪೈಕಿ ಶೇ 88.4ರಷ್ಟು ಮಂದಿ ಮೇಲ್ಜಾತಿಗೆ ಸೇರಿದವರು ಹಾಗೂ ಕೇವಲ ಶೇ2.6ರಷ್ಟು ಮಂದಿ ಪರಿಶಿಷ್ಟ ಜಾತಿಗೆ ಸೇರಿದವರೆಂದು ವರ್ಲ್ಡ್ ಇನ್‌ಇಕ್ವಾಲಿಟಿ ಲ್ಯಾಬ್ ಈ ವರ್ಷದ ಮೇ ತಿಂಗಳಲ್ಲಿ ಬಿಡುಗಡೆಗೊಂಡ ತನ್ನ ವರದಿಯಲ್ಲಿ ತಿಳಿಸಿದೆ.

“ಟುವರ್ಡ್ಸ್ ಟ್ಯಾಕ್ಸ್ ಜಸ್ಟಿಸ್ ಎಂಡ್ ವೆಲ್ತ್ ಡಿಸ್ಟ್ರಿಬ್ಯೂಶನ್ ಇನ್ ಇಂಡಿಯಾ: ಪ್ರೊಪೋಸಲ್ಸ್ ಬೇಸ್ಟ್ ಆನ್ ಲೇಟೆಸ್ಟ್‌ ಇನ್‌ಇಕ್ವಾಲಿಟಿ ಎಸ್ಟಿಮೇಟ್ಸ್’ ಎಂಬ ಹೆಸರಿನ ಈ ವರದಿಯನ್ನು ನ್ಯೂಯಾರ್ಕ್ ವಿಶ್ವವಿದ್ಯಾಲಯದ ನಿತಿನ್ ಭಾರ್ತಿ, ಹಾರ್ವರ್ಡ್ ಕೆನಡಿ ಸ್ಕೂಲ್‌ನ ಲುಕಾಸ್ ಚಾನ್ಸಲ್ ಮತ್ತು ಪ್ಯಾರಿಸ್ ಸ್ಕೂಲ್ ಆಫ್ ಇಕನಾಮಿಕ್ಸ್‌ನ ಥಾಮಸ್ ಪಿಕೆಟ್ಟಿ ಮತ್ತು ಅನ್ನೋಲ್ ಸೊಮಂಚಿ ಬರೆದಿದ್ದಾರೆ.

ಭಾರತದ ಕೋಟ್ಯಾಧಿಪತಿಗಳ ಪೈಕಿ ಶೇ9ರಷ್ಟು ಮಂದಿ ಇತರ ಹಿಂದುಳಿದ ವರ್ಗಗಳವರು ಎಂದು ಹೇಳಿದ ವರದಿ ಆದಿವಾಸಿ ಪಂಗಡದ ಯಾರೂ ಕೂಡ ಈ ಪಟ್ಟಿಯಲ್ಲಿಲ್ಲ ಎಂದು ಹೇಳಿದೆ.

ಈ ವರದಿ ಸಿದ್ಧಪಡಿಸಲು ಸಾರ್ವಜನಿಕವಾಗಿ ಲಭ್ಯವಿರುವ ಕೋಟ್ಯಾಧಿಪತಿಗಳ ಪಟ್ಟಿಗಳನ್ನು ಮತ್ತು ಜಾತಿ ನಿರ್ಧರಿಸಲು “ಅನ್ವಯಿತ ಮ್ಯಾನುವಲ್ ಕೋಡಿಂಗ್ ಮತ್ತು “ಔಟ್‌ಕಾಸ್ಟ್” ಎಂಬ ಆಲ್ತಾರಿಥಮ್ ಬಳಸಲಾಗಿದೆ.

ಈ ವರದಿ ಪ್ರಕಾರ ಒಬಿಸಿ ಕೋಟ್ಯಾಧಿಪತಿಗಳ ಸಂಪತ್ತು ಕಡಿಮೆಗೊಂಡಿದ್ದರೆ, ಮೇಲ್ಜಾತಿಯವರ ಸಂಪತ್ತು ಹೆಚ್ಚಾಗಿದೆ.

ವರದಿಯ ಪ್ರಕಾರ ದೇಶದ ಒಟ್ಟು ಉದ್ಯೋಗ ಪಡೆದ ಶೇ19.3ರಷ್ಟು ಮಂದಿ ಪರಿಶಿಷ್ಟ ವರ್ಗದವರಾಗಿದ್ದರೆ ಅವರಲ್ಲಿ ಶೇ 11.4ರಷ್ಟು ಮಂದಿ ಉದ್ಯಮ ಹೊಂದಿದ್ದಾರೆ. ಅದೇ ಸಮಯ ಪರಿಶಿಷ್ಟ ಪಂಗಡಗಳ ಪ್ರಮಾಣ ಉದ್ಯೋಗ ಕ್ಷೇತ್ರದಲ್ಲಿ ಶೇ10.1ರಷ್ಟಿದ್ದರೆ ಅವರಲ್ಲಿ ಶೇ5ರಿಂದ ಶೇ4ರಷ್ಟು ಮಂದಿ ಉದ್ಯಮ ಹೊಂದಿದ್ದಾರೆ.