ಗಗನಕ್ಕೇರಿದೆ ಮೀನಿನ ಬೆಲೆ: ಸಾಂಪ್ರದಾಯಿಕ ಮೀನುಗಾರಿಕೆ ಮಾಡಲಾಗುತ್ತಿಲ್ಲ, ಆಮದು ಮೀನುಗಳದ್ದೇ ಕಾರುಬಾರು

0
335

ಸನ್ಮಾರ್ಗ ವಾರ್ತೆ

ರಾಜ್ಯದಲ್ಲಿ ಮೀನಿನ ಬೆಲೆ ಗಗನಕ್ಕೇರುತ್ತಿದೆ. ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಯಂತ್ರ ಚಾಲಿತ ಬೊಟ್ ಮೂಲಕ ಮೀನುಗಾರಿಕೆಗೆ ರಾಜ್ಯದಲ್ಲಿ ನಿಷೇಧ ಹೇರಳಾಗಿದೆ. ಆದ್ದರಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರ ಅವಕಾಶ ಇದೆ. ಆದರೆ ಈ ಮೀನುಗಾರಿಕೆಯಿಂದ ರಾಜ್ಯದ ಜನರ ಬೇಡಿಕೆಗೆ ತಕ್ಕಂತೆ ಮೀನನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ.

ಈ ನೆಲೆಯಲ್ಲಿ ಓಡಿಸ್ಸಾ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಂದ ರಾಜ್ಯಕ್ಕೆ ಮೀನು ಆಮದು ಮಾಡಲಾಗುತ್ತಿದ್ದು ಸಹಜವಾಗಿಯೇ ಮೀನಿನ ಬೆಲೆ ಗಗನಕ್ಕೇರುತ್ತಿದೆ.

ಪ್ರತಿದಿನ ಉಡುಪಿಯ ಮಲ್ಪೆ ಬಂದರಿಗೆ 15 ಟ್ರಕ್ ನಲ್ಲಿ ಟನ್ ಗಟ್ಟಲೆ ಮೀನುಗಳು ಬರುತ್ತಿವೆ. ಪಶ್ಚಿಮ ಕರಾವಳಿಯ ಕೇರಳದಿಂದ ಹಿಡಿದು ಗುಜರಾತ್ ನ ವರೆಗೆ ಮೀನುಗಾರಿಕೆಗೆ ನಿಷೇಧ ಇದೆ. ಆದರೆ ಪೂರ್ವ ಕರಾವಳಿಯಲ್ಲಿ ಈ ನಿಷೇಧ ಇಲ್ಲ.

ಯಾವಾಗ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ಆರಂಭವಾಗುತ್ತದೋ ಆಗ ಪೂರ್ವ ಕರಾವಳಿಯ ಮೀನುಗಾರಿಕೆಗೆ ನಿಷೇಧ ಬೀಳುತ್ತದೆ. ಇದೇ ವೇಳೆ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಇದ್ದರೂ ಭಾರಿ ಗಾಳಿಯಿಂದಾಗಿ ಮೀನುಗಾರಿಕೆ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೀನಿನ ಬರ ಎದುರಾಗಿದೆ.