ಸೈನಿಕ ಕಾರ್ಯಾಚರಣೆ ಇನ್ನು ಲೆಬನಾನ್‍ಗೆ: ಗಾಝದ್ದು ಕೊನೆಯ ಹಂತದಲ್ಲಿದೆ- ನೆತನ್ಯಾಹು

0
232

ಸನ್ಮಾರ್ಗ ವಾರ್ತೆ

ಜೆರುಸಲೇಂ: ಗಾಝದಲ್ಲಿ ಹಮಾಸ್ ವಿರುದ್ಧ ಯುದ್ಧ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ ತಲುಪಿದೆ. ಮುಂದಿನ ಗುರಿ ಲೆಬನಾನ್ ವಿರುದ್ಧ ಕಾರ್ಯಾಚರಣೆಯಾಗಿದೆ ಎಂದು ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಹಿಝ್ಬುಲ್ಲಾವನ್ನು ಎದುರಿಸಲು ಹೆಚ್ಚಿನ ಸೈನಿಕ ಶಕ್ತಿಯನ್ನು ಉತ್ತರದ ಗಡಿಗೆ ಕಳುಹಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ನೆತನ್ಯಾಹು ಹೇಳಿದರು. ಇದೇ ವೇಳೆ ಗಾಝದಲ್ಲಿ ನಡೆದ ಯುದ್ಧಕ್ಕೆ ಕೊನೆಯಿಲ್ಲ ಎಂದು ಚ್ಯಾನೆಲ್ 14ಕ್ಕೆ ನೀಡಿದ ಸುದೀರ್ಘ ಸಂದರ್ಶನದಲ್ಲಿ ನೆತನ್ಯಾಹು ಹೇಳಿದ್ದಾರೆ. ಇದು ಅವರ ಇಬ್ಬಂದಿತನವನ್ನು ತೋರಿಸುತ್ತಿದೆಎಂದು ಟೀಕಾಕಾರು ಹೇಳುತ್ತಿದ್ದಾರೆ.

ದಕ್ಷಿಣ ಗಾಝದ ರಫಾದಲ್ಲಿ ಸೈನ್ಯ ಈಗ ಭೂ ಯುದ್ಧ ಪೂರ್ಣಗೊಳಿಸಿದೆ. ಹಮಾಸ್ ವಿರುದ್ಧ ಯುದ್ಧ ಕೊನೆಗೊಳಿಸಿದ್ದೇವೆ ಎಂದು ಅರ್ಥವಲ್ಲ. ಆದರೆ ಗಾಝದಲ್ಲಿ ಸ್ವಲ್ಪ ಸೈನಿಕರು ಮಾತ್ರ ಅಗತ್ಯ ಇದೆ. ಆದರೆ ಹಿಝ್ಬುಲ್ಲಾವನ್ನು ಎದುರಿಸಲು ಹೆಚ್ಚಿನ ಸೈನಿಕರು ಬೇಕಿದ್ದಾರೆ ಎಂದು ನೆತನ್ಯಾಹು ಹೇಳಿದ್ದಾರೆ.
ನಮ್ಮ ಸೈನ್ಯದಲ್ಲಿ ಕೆಲವರನ್ನು ಉತ್ತರಕ್ಕೆ ಕಳುಹಿಸುವ ಸಾಧ್ಯತೆ ಇದೆ. ರಕ್ಷಣೆಗಾಗಿ ನಾವು ಅದನ್ನು ಮಾಡುತ್ತೇವೆ ಎಂದು ನೆತನ್ಯಾಹು ಹೇಳಿದ್ದಾರೆ. ಲೆಬನಾನ್ ಗಡಿಯಿಂದ ಇಸ್ರೇಲ್ ಸರಕಾರ ತನ್ನ ನಾಗರಿಕರನ್ನು ತೆರವು ಗೊಳಿಸಿತ್ತು. ಇದೇ ವೇಳೆ ಲೆಬನಾನ್ ಇಸ್ರೇಲ್ ವಿರುದ್ಧ ನೇರ ಯುದ್ಧವನ್ನು ಘೊಷಿಸಿದೆ.

ಹಮಾಸ್‍ಗಿಂತ ಹಿಝ್ಬುಲ್ಲ ಪ್ರಬಲವಾಗಿದೆ. ಇರಾನ್ ಕೂಡ ಅಪರೋಕ್ಷವಾಗಿ ಯುದ್ಧದಲ್ಲಿ ಭಾಗವಹಿಸಬಹುದು. ಇದರಿಂದ ಉತ್ತರ ಇಸ್ರೇಲ್ ಯುದ್ಧ ಗ್ರಸ್ತವಾಗಿ ಅಪಾರ ಹಾನಿ ಸಂಭವಿಸಬಹುದು ಎನ್ನಲಾಗುತ್ತಿದೆ. ಇದೇವೇಳೆ ಕಳೆದ ವಾರ ವೈಟ್ ಹೌಸ್ ವಕ್ತಾರ ಹಾಚ್ಚಿಸ್ಟೀನ್ ಇಸ್ರೇಲ್ ಮತ್ತು ಲೆಬನಾನ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಚರ್ಚೆ ಏನೆ ಇದ್ದರೂ ಯುದ್ಧ ಅದರ ಹಾದಿಯಲ್ಲಿ ಮುಂದುವರಿಯುತ್ತಿದೆ.