ಪ್ರಮಾಣ ವಚನ ಸ್ವೀಕರಿಸಿ ‘ಜೈ ಭೀಮ್, ಜೈ ಪ್ಯಾಲೆಸ್ತೀನ್’ ಘೋಷಣೆ ಕೂಗಿದ ಅಸಾದುದ್ದೀನ್ ಓವೈಸಿ

0
260

ಸನ್ಮಾರ್ಗ ವಾರ್ತೆ

ಎಐಎಂಐಎಂ ಅಧ್ಯಕ್ಷ ಹಾಗೂ ಹೈದರಾಬಾದ್‌ನ ಸಂಸದ ಅಸಾದುದ್ದೀನ್‌ ಓವೈಸಿ ಅವರು 18ನೇ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ “ಜೈ ಭೀಮ್, ಜೈ ಮೀಮ್, ಜೈ ಪ್ಯಾಲೆಸ್ತೀನ್” ಎಂದು ಘೋಷಣೆ ಕೂಗಿದ್ದಾರೆ.

ಓವೈಸಿ ಅವರು ಐದನೇ ಬಾರಿ ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, “ತಾವು ಪ್ರಾಮಾಣಿಕತೆಯಿಂದ ಭಾರತದ ತಳಮಟ್ಟದಲ್ಲಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇನೆ” ಎಂದು ತಿಳಿಸಿದ್ದಾರೆ.

https://x.com/asadowaisi/status/1805543856664199175?t=tku8SgPtCPObSd2t5x9Ajw&s=19

ಅಸಾದುದ್ದೀನ್‌ ಓವೈಸಿ ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಬಿಜೆಪಿ ಸಂಸದರು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದರು. ಇದಕ್ಕೆ ಯಾವುದೇ ರೀತಿ ಪ್ರತಿಕ್ರಿಯೆ ನೀಡದ ಓವೈಸಿ ಪ್ರಮಾಣ ವಚನ ಸ್ವೀಕರಿಸಿ ಕೊನೆಯಲ್ಲಿ , “ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್‌” ಎಂದು ಘೋಷಣೆ ಕೂಗಿದರು.

2019ರಲ್ಲಿಯೂ ಓವೈಸಿ ಪ್ರಮಾಣ ವಚನ ಸ್ವೀಕರಿಸಿದ ನಂತರ “ಜೈ ಭೀಮ್, ಅಲ್ಲಾಹು ಅಕ್ಬರ್ ಹಾಗೂ ಜೈ ಹಿಂದ್‌” ಎಂದು ಘೋಷಣೆ ಕೂಗಿದ್ದರು.

2024ರ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಓವೈಸಿ ಬಿಜೆಪಿಯ ಮಾಧವಿ ಲತಾ ಅವರನ್ನು 3 ಲಕ್ಷಕ್ಕೂ ಅಧಿಕ ಅಂತರದ ಮತಗಳಿಂದ ಸೋಲಿಸಿದ್ದರು.

ಉತ್ತರ ಪ್ರದೇಶದ ಬರೈಲಿ ಲೋಕಸಭಾ ಸದಸ್ಯ ಚತ್ರಪಾಲ್‌ ಸಿಂಗ್‌ ಗಂಗ್ವಾರ್‌ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ “ಜೈ ಹಿಂದೂ ರಾಷ್ಟ್ರ” ಎಂದು ಕೂಗಿದಾಗ ಇಂಡಿಯಾ ಮೈತ್ರಿಕೂಟದ ಸಂಸದರು ವಿರೋಧ ವ್ಯಕ್ತಪಡಿಸಿದರು.

https://x.com/PTI_News/status/1805551883756384433?t=D1CMwUSIoFM_wWp2NkwqkQ&s=19