ಸೌದಿ ಅರೇಬಿಯಾ ಇನ್ನು ಚೀನಾದ ಪ್ರವಾಸಿಗರ ಅಧಿಕೃತ ಕೇಂದ್ರ

0
230

ಸನ್ಮಾರ್ಗ ವಾರ್ತೆ

ರಿಯಾದ್: ಈ ವರ್ಷ ಜುಲೈಯಿಂದ ಚೀನದ ಪ್ರವಾಸಿಗರಿಗೆ ಸೌದಿ ಅರೇಬಿಯ ಅಧಿಕೃತ ಪ್ರವಾಸಿ ಕೇಂದ್ರವಾಗಲಿದೆ.

ಚೀನದ ನಗರ ಶಾಂಗ್‍ಹಾನಿನಲ್ಲಿ ನಡೆದ ಐಇಬಿ ಎಕ್ಸಿಬಿಶನ್‍ನಲ್ಲಿ ವಿಶೇಷ ಅತಿಥಿ ದೇಶವಾಗಿ ಭಾಗವಹಿಸಿದ ಸಮಯದಲ್ಲಿ ಸೌದಿ ಅರೇಬಿಯ ಚೀನಾಕ್ಕೆ ಅಂಗೀಕೃತ ಡೆಸ್ಟಿನೇಸನಲ್ ಸ್ಥಾನಮಾನವನ್ನು ಘೋಷಿಸಿದೆ.

ಹಲವು ಉನ್ನತ ಸಭೆಗಳು, ಒಪ್ಪಂದಗಳು ಎರಡು ದೇಶಗಳ ಪ್ರವಾಸೋದ್ದಿಮೆ ಇಲಾಖೆಗಳ ನಡುವೆ ನಡೆದಿದ್ದು ಪರಸ್ಪರ ಸಹಕರಿಸಲು ಸಹಮತ ವ್ಯಕ್ತವಾಗಿದೆ.

ಸೌದಿಯಲ್ಲಿ ಪ್ರವಾಸಿಗರಿಗೆ ಕಳುಹಿಸುವ ಮೂರನೇ ದೊಡ್ಡ ರಾಜ್ಯವೆನಿಸಿಕೊಳ್ಳುವ ಅವಕಾಶ ಈಗ ಚೀನಕ್ಕೆ ಸಿಕ್ಕಿದ್ದು 2030ರಲ್ಲಿಯವರೆಗೆ 50 ಲಕ್ಷಕ್ಕೂ ಹೆಚ್ಚು ಚೀನದ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಸೌದಿ ಅರೇಬಿಯ ಹಾಕಿಕೊಂಡಿದೆ ಎಂದು ಸೌದಿಯ ಟೂರಿಸಂ ಸಚಿವ ಅಹ್ಮದ್ ಅಲ್ ಕತೀಬ್ ಹೇಳಿದರು.

ಚೀನದ ಪ್ರವಾಸಿಗರನ್ನು ಸ್ವಾಗತಿಸಲು ಸೂಕ್ತವಾದ ಎಲ್ಲ ವ್ಯವಸ್ಥೆಗಳನ್ನು ಮಾಡುತ್ತೇವೆ. ಅಸಾಧಾರಣ ಅನುಭವ ಕೊಡುವ ಒಂದು ಪ್ರವಾಸಕ್ಕೆ ಚೀನಿಗರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಸಚಿವರು ತಿಳಿಸಿದರು.

ಚೀನದ ಒಂದು ಗ್ರೂಪ್‍ಗಳಿಗೆ ಒಂದು ಟೂರಿಸ್ಟ್ ಕೇಂದ್ರವನ್ನು ಕೂಡ ಅನುಮತಿಸಲಾಗಿದೆ ಎಂದು ಚೀನದ ಸೌದಿ ಅರೇಬಿಯದ ರಾಯಭಾರಿ ಅಬ್ದುರ್ರಹ್ಮಾನ್ ಬಿನ್ ಅಹ್ಮದ್ ಅಲ್‍ಹರ್ಬಿ ತಿಳಿಸಿದರು.