ದಿಲ್ಲಿಯಲ್ಲಿ ಮಸೀದಿ ಕೆಡವುದರ ವಿರುದ್ಧ ಭಾರೀ ಪ್ರತಿಭಟನೆ

0
250

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜೂ. 26: ದಿಲ್ಲಿಯ ಮಂಗೋಲ್‍ಪುರಿಯಲ್ಲಿ ಮಸೀದಿಯ ಒಂದು ಭಾಗವನ್ನು ಕೆಡಹಿದ್ದು ಭಾರೀ ಪ್ರತಿಭಟನೆಗೆ ಕಾರಣವಾಗಿದೆ.

ದಿಲಿ ಮುನ್ಸಿಪಲ್ ಕಾರ್ಪೋರೇಷನ್‍ನ ಈ ಕ್ರಮಕ್ಕೆ ಸಾರ್ವಜನಿಕರು ವ್ಯಾಪಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಮಸೀದಿಯ ಕಟ್ಟಡ ಒತ್ತುವರಿ ಮಾಡಿದ ಜಾಗದಲ್ಲಿದೆ ಎಂದು ಮುನ್ಸಿಪ್ ಅಧಿಕಾರಿಗಳು ಹೇಳಿದ್ದಾರೆ.

ನಿನ್ನೆ ಬೆಳಗ್ಗೆ 6 ಗಂಟೆಗೆ ಮಸೀದಿಯ ಗೋಡೆ ಕೆಡಹುವ ಕಾರ್ಯ ನಡೆದಿತ್ತು ಇದನ್ನು ತಿಳಿದು ಜನರು ಒಟ್ಟುಗೂಡಿ ಪ್ರತಿಭಟಿಸಿದರೂ ಪೊಲೀಸರ ಬಿಗಿ ಸುರಕ್ಷೆಯಲ್ಲಿ ಕೆಡಹುವ ಕಾರ್ಯ ಮುಂದುವರಿಸಲಾಯಿತು.

ಇದೇ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆಂದು ವರದಿಯಾಗಿತ್ತು. ಇದನ್ನು ಪೊಲೀಸರು ನಿರಾಕರಿಸಿದ್ದಾರೆ. ದಿಲ್ಲಿ ಡೆಪ್ಯುಟಿ ಪೊಲೀಸ್ ಕಮಿಶನರ್ ಕಟ್ಟಡ ಕೆಡಹುವಾಗ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದು ಹೌದು, ಆದರೆ ಯಾವುದೇ ಅಹಿತಕರ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಅತಿಕ್ರಮಿತ ಜಾಗದಲ್ಲಿರುವ ಕಟ್ಟಡ ಭಾಗವನ್ನು ತೆರವುಗೊಳಿಸುವ ಕಾರ್ಯಸದ್ಯಕ್ಕೆ ಸ್ಥಗಿತವಾಗಿದೆ. ಗೋಡೆಯ ಕೆಲವು ಸ್ಲ್ಯಾಬ್‍ಗಳು ಬಲಶಾಲಿಯಾಗಿರುವುದು ಇದಕ್ಕೆ ಕಾರಣವೆಂದು ಡೆಪ್ಯುಟಿ ಪೊಲೀಸ್ ಕಮಿಶನರ್ ಹೇಳಿದರು.

ಇದು ಬಿಜೆಪಿ ನೇತೃತ್ವದಲ್ಲಿ ಹೊಸದಾಗಿ ಎನ್‍ಡಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದಿಲ್ಲಿಯಲ್ಲಿ ನಡೆದ ಮಸೀದಿ ಕೆಡವಿದ ಮೊದಲ ಘಟನೆಯಾಗಿದೆ.