ಅಸ್ಸಾಂ: ಅರಣ್ಯ ಸಿಬ್ಬಂದಿಯಿಂದ ಇಬ್ಬರು ಮುಸ್ಲಿಮರ ಹತ್ಯೆ; ತನಿಖೆಯ ಭರವಸೆ ನೀಡಿದ ಹಿಮಂತ ಬಿಶ್ವ ಶರ್ಮ

0
240

ಸನ್ಮಾರ್ಗ ವಾರ್ತೆ

ಅಸ್ಸಾಂನ ಲೌಖೋವಾ ವನ್ಯಜೀವಿ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಇಬ್ಬರು ಮುಸ್ಲಿಂ ಪುರುಷರನ್ನು ‘ನಕಲಿ ಎನ್‍ಕೌಂಟರ್’ನಲ್ಲಿ ಹತ್ಯೆಗೈದ ಆರೋಪವನ್ನು ಅಸ್ಸಾಂ ನಾಗರಿಕರ ರಾಷ್ಟ್ರೀಯ ಶಾಂತಿ ಮತ್ತು ಉತ್ತರದಾಯಿತ್ವ (ಸಿಎನ್‍ಎಪಿಎ) ಸಂಘಟನೆಯು ತೀವ್ರವಾಗಿ ಖಂಡಿಸಿದೆ.

ಜೂನ್ 23 ರಂದು ಈ ಘಟನೆ ನಡೆದಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಇದೇ ವೇಳೆ ಸಿಎನ್‍ಎಪಿಎಯು ಸ್ವತಂತ್ರ ತನಿಖೆಗೆ ಒತ್ತಾಯಿಸಿದೆ.

ಸ್ಥಳೀಯ ವರದಿಗಳ ಪ್ರಕಾರ ಅರಣ್ಯ ಸಿಬ್ಬಂದಿಯ ಗುಂಡಿಗೆ ಬಲಿಯಾದವರನ್ನು 25 ವರ್ಷದ ರೆಹಮಾನ್ ಅಲಿ ಮತ್ತು 28 ವರ್ಷದ ಕರೀಂ ಅಹ್ಮದ್ ಎಂದು ಗುರುತಿಸಲಾಗಿದೆ. ಇವರು ಅಕ್ರಮವಾಗಿ ಬೇಟೆಯಾಡಿದ ವೇಳೆ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆ ಹೇಳಿದೆ. ಕಟ್ಟಿಗೆ ಸಂಗ್ರಹಿಸಲು ಇಬ್ಬರೂ ಹೋಗಿದ್ದೆಂದು ಕೊಲ್ಲಲ್ಪಟ್ಟಿರುವವರ ಮನೆಯವರು ಮತ್ತು ಊರವರು ತಿಳಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ ಮತ್ತು ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

“ನಾವು ಅಂತಹ ಆರೋಪಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ನ್ಯಾಯಯುತ ತನಿಖೆ ನಡೆಸುವುದನ್ನು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

“ಯಾರೂ ಕಾನೂನಿಗಿಂತ ಮೇಲಲ್ಲ, ಮತ್ತು ರಾಜ್ಯದ ಅಧಿಕಾರಿಗಳ ಯಾವುದೇ ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಜರಗಿಸುತ್ತೇವೆ ಎಂದು ತಿಳಿಸಿದ್ದಾರೆ.