ಹಜ್ ಹೆಸರಲ್ಲಿ ವಂಚನೆ: 400 ಏಜೆಂಟರುಗಳಿಗೆ ಕೋಳ; 16 ಟೂರಿಸಂ ಕಂಪನಿಗಳ ಲೈಸೆನ್ಸ್ ರದ್ದು

0
360

ಸನ್ಮಾರ್ಗ ವಾರ್ತೆ

ಹಜ್ ಯಾತ್ರೆಗೆ ಕರ್ಕೊಂಡು ಹೋಗುತ್ತೇವೆ ಎಂದು ಹೇಳಿ ವಂಚಿಸಿದ 400 ಕ್ಕಿಂತಲೂ ಏಜೆಂಟರುಗಳನ್ನು ಈಜಿಫ್ಟಿನಲ್ಲಿ ಬಂಧಿಸಲಾಗಿದೆ.

ಹಜ್ ಯಾತ್ರೆಗೆ ಬೇಕಾದ ಸೌಲಭ್ಯವನ್ನು ಒದಗಿಸಿಕೊಡುವುದಾಗಿ ವಾಗ್ದಾನ ಮಾಡಿ ಜನರನ್ನು ವಿಸಿಟಿಂಗ್ ವೀಸಾದಲ್ಲಿ ಸೌದಿಗೆ ತಲುಪಿಸಿ ವಂಚಿಸಿದವರನ್ನು ಹೀಗೆ ಅರೆಸ್ಟ್ ಮಾಡಲಾಗಿದೆ.

16 ಟೂರಿಸಂ ಕಂಪನಿಗಳ ಲೈಸೆನ್ಸ್ ಗಳನ್ನು ರದ್ದು ಮಾಡಿರುವುದಾಗಿಯೂ ಈಜಿಫ್ಟ್ ತಿಳಿಸಿದೆ. ವಿಸಿಟಿಂಗ್ ವೀಸಾದ ಮೂಲಕ ಈಜಿಪ್ಟ್ ನಾಗರಿಕರನ್ನು ಸೌದಿಯಲ್ಲಿ ಇಳಿಸಿದ ಬಳಿಕ ಏಜೆಂಟರುಗಳು ಕಾಣೆಯಾಗುತ್ತಾರೆ.

ಮಕ್ಕಾದ ಅತಿ ತಾಪಮಾನದ ಕಾರಣದಿಂದಾಗಿ ಹಜ್ ಗೆ ತಲುಪಿದ ಸಾವಿರಕ್ಕಿಂತಲೂ ಅಧಿಕ ಮಂದಿ ಮೃತರಾಗಿದ್ದರು. ಇವರಲ್ಲಿ ಹೆಚ್ಚಿನವರು ಈಜಿಪ್ಟಿಯನ್ನರಾಗಿದ್ದಾರೆ. ಮೃತರಲ್ಲಿ 83% ಮಂದಿ ಕೂಡ ಹಜ್ ಪರ್ಮಿಟ್ ಇಲ್ಲದೆ ಸೌದಿಗೆ ಬಂದವರು ಎಂದು ಸೌದಿ ಹಜ್ ಸಚಿವಾಲಯ ತಿಳಿಸಿದೆ.