‘ಸೆಂಗೊಲ್’ ಸಂಸತ್ತಿನಿಂದ ತೆರವುಗೊಳಿಸುವಂತೆ ಆಗ್ರಹಿಸಿದ ಸಮಾಜವಾದಿ ಪಕ್ಷದ ಸಂಸದ ಆರ್.ಕೆ. ಚೌಧರಿ

0
282

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜೂ.27: ಸಮಾಜವಾದಿ ಪಕ್ಷದ (ಎಸ್‍ಪಿ) ಸಂಸದ ಆರ್.ಕೆ. ಚೌಧರಿ ಅವರು ಗುರುವಾರ ಸಂಸತ್ತಿನಲ್ಲಿ ‘ಸೆಂಗೊಲ್’ ಸಂಸತ್ತಿನಿಂದ ತೆರವುಗೊಳಿಸಲು ಆಗ್ರಹಿಸಿದ್ದಾರೆ.

ಇದು ರಾಜಪ್ರಭುತ್ವ ಸಂಕೇತವಾಗಿದೆ ಇದು ಸಂಸತ್ತಿನಲ್ಲಿ ಇರಬಾರದು ಎಂದು ಅವರು ಹೇಳಿದರು.

“ಸಂವಿಧಾನವು ಪ್ರಜಾಪ್ರಭುತ್ವದ ಸಂಕೇತವಾಗಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಸಂಸತ್ತಿನಲ್ಲಿ ಸೆಂಗೋಲ್ ಅನ್ನು ಸ್ಥಾಪಿಸಿದೆ. ‘ಸೆಂಗೊಲ್’ ಎಂದರೆ ‘ರಾಯಲ್ ರಾಡ್’ ಅಥವಾ ‘ಕಿಂಗ್ಸ್ ರಾಡ್’ ಆಗಿದೆ.

ನಮ್ಮ ದೇಶ ರಾಜಪ್ರಭುತ್ವದ ವ್ಯವಸ್ಥೆಗೆ ತಿಲಾಂಜಲಿಯಿತ್ತು ಸ್ವತಂತ್ರವಾಯಿತು. ದೇಶವು ‘ರಾಜನ ಕೋಲು’ ಮೂಲಕ ಆಡಳಿತ ನಡೆಸುವುದಿಲ್ಲ ಆದುದರಿಂದ ಅದು ಸಂಸತ್ತಿನಲ್ಲಿ ಇರಬಾರದು ಎಂದು ಹೇಳಿದರು.

ಇದೇ ವೇಳೆ ಇದಕ್ಕೆ ಬಿಜೆಪಿ ಪ್ರತಿಕ್ರಿಯಿಸಿದ್ದು. ಆರ್ ಕೆ ಚೌಧರಿ ಅವಮಾನಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಬಿಜೆಪಿಯ ಮುಖಂಡ ಕೇಶವನ್ ಎಂಬವರು ಹೇಳಿದರು. ಕೇಶವನ್ ಪ್ರಕಾರ ಆರ್ ಕೆ ಚೌಧರಿ ಲಕ್ಷಾಂತರ ಭಕ್ತರನ್ನು ಅವಮಾನಿಸಿದ್ದಾರೆ. ಆದರೆ ಸಂಸತ್ತಿಗೂ ಭಕ್ತಿಗೂ ಏನು ಸಂಬಂಧ ಎಂಬ ಪ್ರಶ್ನೆ ಉದ್ಭವಿಸುತ್ತಿದೆ.

ಇದೇ ವೇಳೆ ಕೇಂದ್ರ ಸಚಿವೆ ಅನುಪ್ರಿಯ ಪಟೇಲ್ ಸೆಂಗೋಲ್ ಇಟ್ಟಾಗ ಸಮಾಜವಾದಿ ಪಾರ್ಟಿಯ ಸಂಸದರು ಎಲ್ಲಿದ್ದರು ಎಂದು ಪ್ರಶ್ನಿಸಿದರು. ಸೆಂಗೋಲ್ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಸೂಕ್ತ ಅಲ್ಲ ಎಂದು ಆರ್‍ಜೆಡಿ ಸಂಸದೆ ಮೀಸಾ ಭಾರತಿ ಕೂಡ ಹೇಳಿದರು. ನಮ್ಮದು ಪ್ರಜಾಪ್ರಭುತ್ವ ದೇಶ ಆದುದರಿಂದ ಅದನ್ನು ಸಂಸತ್ತಿನಿಂದ ಹೊರ ತೆಗೆಯಬೇಕೆಂದು ಮೀಸಾ ಭಾರತಿ ಆಗ್ರಹಿಸಿದರು.

ಇದೇ ವೇಳೆ ಸಮಾಜವಾದಿ ಪಾರ್ಟಿಯ ಅಧ್ಯಕ್ಷ ಅಖಿಲೇಶ್ ಯಾದವ್ ಆರ್‍ಕೆ ಚೌಧರಿಯವರನ್ನು ಸಮರ್ಥಿಸಿಕೊಂಡರು. ಸೆಂಗೋಲ್ ಸ್ಥಾಪಿಸಿದಾಗ ಪ್ರಧಾನಿ ಅದಕ್ಕೆ ತಲೆಬಾಗಿದ್ದರು. ಪ್ರಮಾಣ ವಚನ ಸ್ವೀಕರಿಸುವಾಗ ಅದನ್ನು ಮರೆತಿರಬೇಕು. ನಮ್ಮ ಸಂಸದರ ಹೇಳಿಕೆ ಅವರಿಗೆ ಅದನ್ನು ನೆನಪಿಸಬಹುದು ಎಂದು ಅಖಿಲೇಶ್ ಯಾದವ್ ವ್ಯಂಗ್ಯವಾಡಿದರು.