ಅರವಿಂದ್ ಕೇಜ್ರಿವಾಲ್ ಅವರಿಗೆ ಭಗವದ್ಗೀತೆಯನ್ನು ಹೊಂದಲು ಅನುಮತಿ; ಮನೆಯ ಆಹಾರ ಸೇವಿಸಲು ಅವಕಾಶ

0
213

ಸನ್ಮಾರ್ಗ ವಾರ್ತೆ

ಮದ್ಯನೀತಿ ಭ್ರಷ್ಟಾಚಾರಕ್ಕೆ ಸಂಬಂಧಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ರನ್ನು ಮೂರು ದಿವಸದ ಸಿಬಿಐ ಕಸ್ಟಡಿಗೆ ದಿಲ್ಲಿಯ ರೌಸ್ ಅವೆನ್ಯೂ ಕೋರ್ಟು ನೀಡಿದ್ದು ಕಸ್ಟಡಿಯಲ್ಲಿ ತನಗೆ ಕೆಲವು ವಿಷಯಗಳಲ್ಲಿ ಅನುಮತಿ ಬೇಕೆಂದು ಕೇಜ್ರಿವಾಲ್ ಮನವಿ ಮಾಡಿದ್ದರು.

ಅದರಂತೆ, ಸಿಬಿಐ ಕಸ್ಟಡಿಯಲ್ಲಿರುವಾಗ ಕೇಜ್ರಿವಾಲ್‌ಗೆ ಕನ್ನಡಕ, ವೈದ್ಯರು ಬರೆದ ಔಷಧಿಗಳು ಮತ್ತು ಮನೆಯಿಂದಲೇ ಆಹಾರವನ್ನು ಪಡೆಯಬಹುದಾಗಿದೆ. ಹಾಗೆಯೇ ಭಗವದ್ಗೀತೆಯನ್ನು ಹೊಂದಲು ಸಹ ಅನುಮತಿ ನೀಡಿದೆ.

ಪ್ರತಿ ದಿನ ಒಂದು ಗಂಟೆ ತನ್ನ ಹೆಂಡತಿ ಮತ್ತು ಸಂಬಂಧಿಕರನ್ನು ನೋಡಲು ಅವಕಾಶ ನೀಡಲಾಯಿತು. ಏತನ್ಮಧ್ಯೆ, ಪ್ಯಾಂಟ್ ಬಿಗಿಗೊಳಿಸಲು ಬೆಲ್ಟ್ ಅನ್ನು ಅನುಮತಿಸುವಂತೆ ಕೇಜ್ರಿವಾಲ್ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಕೇಜ್ರಿವಾಲ್ ಅವರನ್ನು ಜೂನ್ 29 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಮಧ್ಯ ಪಾಲಿಸಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೇಜ್ರಿವಾಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿಬಿಐ ಅವರನ್ನು ಬುಧವಾರ ಬಂಧಿಸಿದೆ.