ವೇಗ ಕಡಿಮೆಗೊಳಿಸಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್

0
191

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ವಂದೇ ಭಾರತ್ ಮತ್ತು ಗತಿಮಾನ್ ಸೇರಿದಂತೆ ಕೆಲವು ಪ್ರೀಮಿಯಂ ರೈಲುಗಳ ವೇಗವನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ಸಿದ್ಧವಾಗಿದೆ. ಕೆಲವು ಮಾರ್ಗಗಳಲ್ಲಿ ವೇಗವನ್ನು 160 ರಿಂದ 130 ಕ್ಕೆ ಇಳಿಸಲು ರೈಲ್ವೆ ಯೋಜಿಸುತ್ತಿದೆ. ರೈಲ್ವೆ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ದಿ ಹಿಂದೂ ಪತ್ರಿಕೆಯ ವರದಿಯ ಪ್ರಕಾರ, ಈ ಶಿಫಾರಸನ್ನು ಉತ್ತರ-ಮಧ್ಯ ರೈಲ್ವೆ ಮಂಡಳಿಗೆ ಈ ಮೊದಲೇ ರವಾನಿಸಲಾಗಿದೆ.

ಶಿಫಾರಿಸ್ಸಿನ ಪ್ರಕಾರ ವಂದೇ ಭಾರತ್, ಗತಿಮಾನ್ ಎಕ್ಸ್‌ಪ್ರೆಸ್ ನ ವೇಗವನ್ನು 160ಕಿ.ಮೀಯಿಂದ 130 ಕಿ.ಮೀಗೆ ಇಳಿಸಲಾಗುವುದು. ಶತಾಬ್ದಿ ಎಕ್ಸ್‍ಪ್ರೆಸ್‍ನ ವೇಗವನ್ನು 150 ಕಿ.ಮೀಯಿಂದ 130 ಕಿ.ಮೀಗೆ ಇಳಿಸಲಾಗುವುದು. ವರದಿಯಲ್ಲಿ ಹೇಳಿರುವ ಪ್ರಕಾರ 130 ಕಿಲೋ ಮೀಟರ್ ವೇಗದಲ್ಲಿ ರೈಲು ಸಂಚರಿಸುವುದು ಸುರಕ್ಷಿತ ಎಂದು ರೈಲ್ವೆ ಸೇಫ್ಟಿ ಕಮಿಶನರ್ ಹೇಳಿದ್ದಾರೆ.

ಇದೇವೇಳೆ ಎರಡು ರೈಲ್ವೆ ಝೋನ್‍ಗಳ ಶಿಫಾಸ್ಸನ್ನು ರೈಲ್ವೆ ಮಂಡಳಿ ಒಪ್ಪಬಹುದಾಗಿದೆ ಎಂದು ದ ಹಿಂದೂ ವರದಿ ತಿಳಿಸಿದೆ. ತೀರ್ಮಾನಕ್ಕೆ ಒಪ್ಪಿಗೆಯ ಮುದ್ರೆ ಬಿದ್ದರೆ ಸುಮಾರು ಹತ್ತು ರೈಲುಗಳ ಸಮಯದಲ್ಲಿ ಬದಲಾವಣೆ ಆಗಲಿದೆ. ಕಳೆದ ಕೆಲವು ವರ್ಷಗಳಿಂದ ರೈಲ್ವೆ ಅಫಘಾತಗಳು ಹೆಚ್ಚಳವಾಗಿರುವ ಪರಿಸ್ಥಿತಿಯಲ್ಲಿ ವೇಗವನ್ನು ಕಡಿಮೆಗೊಳಿಸುವ ಕುರಿತು ಚರ್ಚೆಗಳು ರೈಲ್ವೆಯಲ್ಲಿ ಸಕ್ರಿಯಗೊಂಡಿತ್ತು.

.