ದ್ವೇಷ ಭಾಷಣ; ಭಾರತದ ಅಲ್ಪಸಂಖ್ಯಾತರ ಕುರಿತು ಆತಂಕಗೊಂಡಿದ್ದೇವೆ- ಅಮೆರಿಕ

0
217

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಜೂ. 27: ಭಾರತದ ದ್ವೇಷ ಭಾಷಣಗಳು ಮತ್ತು ಮತಾಂತರ ವಿರೋಧಿ ಕಾನೂನಿನ ಬಗ್ಗೆ ನಾವು ಆತಂಕಗೊಂಡಿದ್ದೇವೆ ಎಂದು ಅಮೆರಿಕದ ರಾಜ್ಯಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಹೇಳಿದ್ದಾರೆ.

ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ 200 ದೇಶಗಳ ವರದಿ ಹೊರ ತರುವ ಸಂದರ್ಭದಲ್ಲಿ ಬ್ಲಿಂಕ್ ಈ ಮಾತುಗಳನ್ನು ಹೇಳಿದ್ದಾರೆ.

ಅಲ್ಪಸಂಖ್ಯಾತರ ಮನೆಗಳು, ಆರಾಧಾನಾಲಯಗಳು ಧ್ವಂಸಗೊಳಿಸುವುದರಲ್ಲಿಯೂ ನಾವು ಆತಂಕ ವ್ಯಕ್ತಪಡಿಸುತ್ತಿದ್ದೇವೆ ಎಂದವರು ಹೇಳಿದರು.

ಜಗತ್ತಿನ ಲಕ್ಷಾಂತರ ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಈಗಲೂ ಗೌರವಿಸಲಾಗುತ್ತಿಲ್ಲ. ಧಾರ್ಮಿಕ ಸ್ವಾತಂತ್ರ್ಯ ರಕ್ಷಿಸುವುದಕ್ಕಾಗಿ ಕೆಲವು ಗಂಭೀರ ವ್ಯವಹಾರಗಳನ್ನು ಜನರು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಭಾರತದ ಮತಾಂತರ ವಿರೋಧಿ ಕಾನೂನುಗಳು, ದ್ವೇಷ ಭಾಷಣ, ಅಲ್ಪಸಂಖ್ಯಾತರ ಮನೆಗಳು ಆರಾಧಾನಾಲಯಗಳನ್ನು ಕೆಡುವುದು ಹೆಚ್ಚಳವಾಗುತ್ತಿದೆ. ಇದೇ ವೇಳೆ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ಕೂಡ ಜಗತ್ತಿನಲ್ಲಿ ಸಕ್ರಿಯವಾಗಿ ನಡೆಯುತ್ತಿದೆ ಎಂದು ಅಮೆರಿಕದ ವರದಿಯಲ್ಲಿ ಹೇಳಲಾಗಿದೆ.

ಭಾರತದ 28 ರಾಜ್ಯಗಳಲ್ಲಿ ಹತ್ತರಲ್ಲಿ ಮತಾಂತರ ತಡೆಯುವುದಕ್ಕೆ ಕಾನೂನುಗಳು ಜಾರಿಗೊಳಿಸಲಾಗಿದೆ. ಅಕ್ರಮಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅಲ್ಪಸಂಖ್ಯಾತರ ವಿರುದ್ಧ ಅಪರಾಧ ಕೃತ್ಯಗಳಲ್ಲಿ ತನಿಖೆ ನಡೆಸುವ ಕೇಂದ್ರ ಸರಕಾರದ ಸಾಮಥ್ರ್ಯದ ಬಗ್ಗೆ ಒಂದು ವಿಭಾಗ ಅಲ್ಪಸಂಖ್ಯಾತರು ಆತಂಕಗೊಂಡಿದ್ದಾರೆ ಎಂದು ಅಮೆರಿಕದ ವರದಿ ಬೆಟ್ಟು ಮಾಡಿದೆ. ಕಳೆದ ವರ್ಷ ಇಂತಹದೇ ವರದಿ ಅಮೆರಿಕದಿಂದ ಬಂದಿತ್ತು.