ಓಂ ಬಿರ್ಲಾರ ಕೊನೆಯ ಪುತ್ರಿಗೆ ಐಎಎಸ್ ಪರೀಕ್ಷೆ ಬರೆಯದೆ ಸಿಕ್ಕಿದೆಯೇ?

0
1838

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಲೋಕಸಭಾ ಸ್ಪೀಕರ್ ಆಗಿ ಎರಡನೇ ಬಾರಿಗೆ ಆಯ್ಕೆಯಾದ ಓಮ್ ಬಿರ್ಲಾರ ಕೊನೆಯ ಪುತ್ರಿ ಆಂಜಲಿಗೆ ಐಎಎಸ್ ಪರೀಕ್ಷೆ ಬರೆಯದೆ ಸಿಕ್ಕಿದೆ ಎಂದು ಆರೋಪ ಕೇಳಿ ಬಂದಿದೆ.

ಮೊದಲ ಪ್ರಯತ್ನದಲ್ಲಿಯೇ ಅಂಜಲಿ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸಾಗಿದ್ದರೆ. ಮಯಿಲ್‍ಸ್‍ನಲ್ಲಿ 953 ಮಾರ್ಕುಗಳು ಸಿಕ್ಕಿವೆ. ಪರ್ಸನಲ್ ಆಂಡ್ ಟ್ರೈನಿಂಗ್ ವಿಭಾಗ 2020ರಲ್ಲಿ ತಯಾರಿಸಿದ ರಿಸರ್ವ್ ಲೀಸ್ಟಿನಲ್ಲಿ ಅಂಜಲಿ ಬಿರ್ಲಾ ಸಹಿತ ಜನರಲ್, ಒಬಿಸಿ, ಇಡಬ್ಲ್ಯೂ ಎಸ್‍, ಎಸ್ಸಿ ಸಹಿತ ವಿವಿಧ ವಿಭಾಗಗಳಲ್ಲಿ 89 ಉದ್ಯೋಗಾಕಾಂಕ್ಷಿಗಳು ಇದ್ದರು.

ಇದೇ ವೇಳೆ ಓಂ ಬಿರ್ಲಾರ ಮಗಳಾಗಿರುವುದರಿಂದ ಅಂಜಲಿಗೆ ಐಎಎಸ್ ಲಭಿಸಿದೆ, ಅವರು ಸಿವಿಲ್ ಸರ್ವಿಸ್ ಪರೀಕ್ಷೆ ಪಾಸಾಗಿಲ್ಲ. ಸಂದರ್ಶನಕ್ಕೆ ಬಂದಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳು ಬಂದಿವೆ. ಅದಕ್ಕೆ ಉತ್ತರವಾಗಿ ಅಂಜಲಿಯೂ ಮಾತಾಡಿದ್ದಾರೆ. ಸರಿಯಾದ ಕ್ರಮಗಳನ್ನು ಪಾಲಿಸಿಯೇ ತಾನು ಐಎಎಸ್ ಸ್ಥಾನಕ್ಕೆ ಬಂದಿರುವೆನು ಎಂದು ಹೇಳಿದ್ದಾರೆ.

ಎರಡೂವರೆ ವರ್ಷ ಕಠಿಣ ಪ್ರಯತ್ನದಿಂದ ಸಿಕ್ಕಿದ ಯಶಸ್ಸು ಇದು. ಇದರಲ್ಲಿ ಪಾಸಾಗುವ ಮೂಲಕ ನನಗೆ ಸ್ವಾತಂತ್ರ್ಯ ಸಿಕ್ಕಿದ ಅನುಭವ ಆಗಿದೆ ಎಂದು ಅಂಜಲಿ ಹೇಳಿದ್ದಾರೆ.

ಓಂ ಬಿರ್ಲಾರ ಕೊನೆಯ ಮಗಳು ಅಂಜಲಿ ಕೋಟದ ಸೋಫಿಯಾ ಸ್ಕೂಲಿನಲ್ಲಿ ಕಲಿತದ್ದು. ನಂತರ ದಿಲ್ಲಿಯ ರಾಂಜಾಸ್ ಕಾಲೇಜಿನಲ್ಲಿ ಪೊಲಿಟಿಕಲ್ ಸಯನ್ಸ್ ಆನರ್ಸ್ ಪದವಿ ಗಳಿಸಿದರು. ಇದೇ ಸಮಯದಲ್ಲಿ ಅವರು ಯುಪಿಎಸ್‍ಸಿ ಪರೀಕ್ಷೆಗೆ ತರಬೇತಿ ಆರಂಭಿಸಿದ್ದರು.