ಲೋಕಸಭಾ ಚುನಾವಣಾ ಫಲಿತಾಂಶ: ದ್ವೇಷ, ವಿಭಜಕ ರಾಜಕೀಯ ನೀತಿಯ ಬದಲು ಅಭಿವೃದ್ಧಿ ಮತ್ತು ಲಿಬರಲಿಸಂಗೆ ಮನ್ನಣೆ; ಜಮಾಅತೆ ಇಸ್ಲಾಮಿ ಹಿಂದ್

0
164

ಸನ್ಮಾರ್ಗ ವಾರ್ತೆ

ಲೋಕಸಭಾ ಚುನಾವಣೆಯ ಫಲಿತಾಂಶ ಸರ್ವಾಧಿಕಾರಿ ಸ್ವರೂಪದ ಆಡಳಿತಕ್ಕೆ ವಿರುದ್ಧವಾಗಿ ಪ್ರಜಾತಂತ್ರ ರೀತಿಯ ಆಡಳಿತಕ್ಕೆ ಬೆಂಬಲವನ್ನು ನೀಡಿದೆ. ಹಾಗೆಯೇ ದ್ವೇಷ ಮತ್ತು ವಿಭಜಕ ರಾಜಕೀಯ ನೀತಿಯ ಬದಲು ಅಭಿವೃದ್ಧಿ ಮತ್ತು ಲಿಬರಲಿಸಂ ಗೆ ಮನ್ನಣೆ ನೀಡಿದೆ. ಹಾಗೆಯೇ ಅರೋಗೆನ್ಸಿನ ಬದಲು ಎಲ್ಲರನ್ನೂ ಒಳಗೊಳ್ಳುವ ನೀತಿಗೆ ಒತ್ತಾಯ ಮಾಡಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ನ ಕೇಂದ್ರ ಸಲಹಾ ಸಮಿತಿ ಸಭೆಯು ಅಭಿಪ್ರಾಯ ಪಟ್ಟಿದೆ.

ಜೂನ್ 23 ರಿಂದ 25ರ ವರೆಗೆ ದೆಹಲಿಯಲ್ಲಿ ನಡೆದ ಕೇಂದ್ರ ಸಲಹಾ ಸಮಿತಿ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ತನಗೆ ಓಟು ನೀಡಿದ ಮತ್ತು ವೋಟು ನೀಡದ ಪ್ರತಿಯೊಬ್ಬರ ಕ್ಷೇಮಕ್ಕೂ ಕೆಲಸ ಮಾಡುವ ಹೊಣೆಗಾರಿಕೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಇದೆ. ನಾಗರಿಕರ ಮೇಲೆ ಯಾವುದೇ ತಾರತಮ್ಯವಿಲ್ಲದ ನಿಲುವನ್ನು ಸರಕಾರ ಹೊಂದಬೇಕಿದೆ ಎಂದು ಕೇಂದ್ರ ಸಲಹಾ ಸಮಿತಿ ಸಭೆ ಆಗ್ರಹಿಸಿದೆ.

ಇದೇ ವೇಳೆ ಪ್ರತಿಪಕ್ಷದ ಜವಾಬ್ದಾರಿಯನ್ನು ನೆನಪಿಸಿರುವ ಕೇಂದ್ರ ಸಲಹಾ ಸಮಿತಿಯು ಕೇಂದ್ರ ಸರಕಾರವು ಸಂವಿಧಾನ ಮತ್ತು ಸೆಕ್ಯುಲರ್ ನೀತಿಗೆ ವಿರುದ್ಧ ನಡೆದಾಗಲೆಲ್ಲ ಅದನ್ನು ಪ್ರಶ್ನಿಸುವ ಮತ್ತು ವಿರೋಧಿಸುವ ಕೆಲಸವನ್ನು ಇನ್ನಷ್ಟು ಅಚ್ಚುಕಟ್ಟಾಗಿ ಪ್ರತಿಪಕ್ಷಗಳು ಮಾಡಬೇಕಿದೆ ಎಂದು ಹೇಳಿದೆ.