ಇಸ್ರೇಲಿನ ಅದಾನಿಯ ಹೈಫಾ ಬಂದರಿನ ಮೇಲೆ ಹೂತಿಗಳ ದಾಳಿ

0
348

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜೂ. 29 : ಯೆಮೆನ್‍ನ ಹೂತಿಗಳು ಕೆಂಪು ಸಮುದ್ರದ ಮೂಲಕ ಹಾದು ಹೋಗುತ್ತಿದ್ದ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ, ಭಾರತೀಯ ಕೈಗಾರಿಕೋದ್ಯಮಿ ಗೌತಮ್ ಅದಾನಿ ಗುತ್ತಿಗೆ ಪಡೆದ ಹೈಫಾ ಬಂದರಿನ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದರು.

ಕೆಂಪು ಸಮುದ್ರದಲ್ಲಿ ಬ್ರಿಟಿಷ್ ನೌಕಾ ಪಡೆಯ ಹಡಗಿಗೆ ದಾಳಿ ನಡೆಸಿದ್ದು, ಐದು ಕ್ಷಿಪಣಿಗಳನ್ನು ಹಾರಿ ಬಿಟ್ಟಿದ್ದಾರೆ. ಈ ದಾಳಿಯಲ್ಲಿ ಯಾರಿಗೂ ಹಾನಿಯಾಗಿಲ್ಲ ಮತ್ತು ಹಡಗು ಕೂಡ ಸುರಕ್ಷಿತವಾಗಿದೆ ಎಂದು ವರದಿಯಾಗಿದೆ.

ಇರಾಕ್‍ನ ಕೆಲವು ಸಂಘಟನೆಯ ಸಹಯೋಗದಲ್ಲಿ ಜಂಟಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ ಎಂದು ಹೂತಿಗಳು ತಿಳಿಸಿದ್ದು ಹಲವಾರು ಡ್ರೋನ್‍ಗಳು ಹೈಫಾ ಬಂದರಿನ ಬಳಿ ಇಸ್ರೇಲ್ ಹಡಗನ್ನು ಗುರಿಯಾಗಿಸಿಕೊಂಡಿವೆ.

ಗಾಝದ ಮೇಲಿನ ದಾಳಿಯನ್ನು ವಿರೋಧಿಸಿ, ಹೂತಿ ಬಂಡುಕೋರರು ಕಳೆದ ವರ್ಷ ನವೆಂಬರ್‌ ನಿಂದ ಇಸ್ರೇಲ್ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.