ತೀವ್ರವಾದಿ ಮಂತ್ರಿಯನ್ನು ತಡೆದು ಮುತ್ತಿಗೆ ಹಾಕಿದ ಯಹೂದಿಗಳು: ಸೈನ್ಯದ ಕಡ್ಡಾಯ ಸೇವೆಗೆ ವಿರೋಧ

0
207

ಸನ್ಮಾರ್ಗ ವಾರ್ತೆ

ಟೆಲ್ ಅವೀವ್: ನೆತನ್ಯಾಹು ಸಚಿವ ಯೆಶಯ್ಯಾ ಹರೇದಿ ಯಹೂದಿ ವಿಭಾಗದ ವಿದ್ಯಾರ್ಥಿಗಳನ್ನು ಬಲವಂತದಿಂದ ಸೈನ್ಯಕ್ಕೆ ಸೇರಿಸುವುದನ್ನು ಪ್ರಶ್ನಿಸಿ ಹರೇದಿ ವಿಶ್ವಾಸಿಗಳು ಸಚಿವರ ಕಾರನ್ನು ತಡೆದ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕಲ್ಲೆಸೆತ, ಬೆಂಕಿ ಹಚ್ಚುವುದು, ಪೊಲೀಸರೊಂದಿಗೆ ಘರ್ಷಣೆ ಕೂಡ ನಡೆದಿದೆ. ಬೀದಿಯಲ್ಲಿ ಬೆಂಕಿ ಇಟ್ಟ ಪ್ರತಿಭಟನಾಕಾರರು, ವಸತಿ ಸಚಿವ ಯಿತ್ಶಾಕ್ ಗೊಲ್ಡೊನೊಫ್‍ರ ಕಾರನ್ನು ತಡೆದು ಅಕ್ರಮವೆಸಗಿದರು.

60,000 ಧಾರ್ಮಿಕ ವಿದ್ಯಾರ್ಥಿಗಳನ್ನು ಸೈನಿಕ ಸೇವೆಗೆ ಒತ್ತಾಯಿಸುವುದು ಹರೇದಿಗಳು ವಿರೋಧಕ್ಕೆ ಕಾರಣವಾಗಿದ್ದು ಹರೇದಿಗಳು ಯಹೂದಿಯರಲ್ಲೇ ತೀವ್ರವಾದಿ ವಿಭಾಗವಾಗಿದೆ. ವಿರೋಧ ತೀವ್ರಗೊಂಡ ಮೇಲೆ ಸೈನ್ಯಕ್ಕೆ ಹರೇದಿಗಳನ್ನು ಸೇರ್ಪಡೆಗೊಳಿಸುವುದನ್ನು ನಿಲ್ಲಿಸಲಾಗಿದೆ.

ಗಾಝದಲ್ಲಿ ಇಸ್ರೇಲಿನ ಸೈನ್ಯ ಮಾನವ ಹತ್ಯೆ ನಡೆಸುತ್ತಿದ್ದು ಇದೇ ವೇಳೇ ಪುನಃ ಸೈನ್ಯಕ್ಕೆ ಸೇರ್ಪಡೆಗೊಳಿಸುವ ಪ್ರಕ್ರಿಯೆಯನ್ನು ಸರಕಾರ ಆರಂಭಿಸಿದ್ದನ್ನು ವಿರೋಧಿಸಿ ಈಗ ಪ್ರತಿಭಟನೆ ನಡೆದಿದೆ.

ಈ ವರೆಗೆ ಹರೇದಿ ಯೆಶಯ್ಯ ವಿದ್ಯಾರ್ಥಿಗಳಿಗೆ 26 ವರ್ಷದವರೆಗೆ ಕಡ್ಡಾಯ ಸೈನಿಕ ಸೇವೆಯಲ್ಲಿ ವಿನಾಯಿತಿ ಇದೆ. ಆದರೆ ಇದನ್ನು 21 ವರ್ಷಕ್ಕೆ ಇಳಿಸುವ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ತರುವ ಕುರಿತು ಸಚಿವರು ಬೆಂಬಲಿಸಿದ್ದರು. ಇದು ಸಚಿವರ ವಿರುದ್ಧ ಹರೇದಿಗಳ ಕೋಪಕ್ಕೆ ಕಾರಣವಾಗಿದೆ. ನಾವು ಸತ್ತರೂ ಸೈನ್ಯಕ್ಕೆ ಸೇರುವುದಿಲ್ಲ ಎಂದು ಫಲಕಗಳನ್ನು ಹಿಡಿದು ಹರೇದಿಗಳು ಪ್ರತಿಭಟನೆ ನಡೆಸಿದ್ದಾರೆ.

ಗೊಲ್ಡೊನೋಫ್ ಅಲ್ಟ್ರಾ ಆರ್ಥೋಡೆಕ್ಸ್ ಯುನೈಟೆಡ್ ತೊರ ಜುದಾಯಿಸಂ ಯುಟಿಜೆ ಪಾರ್ಟಿ ಮುಖ್ಯಸ್ಥರಾಗಿದ್ದಾರೆ ಜೆರುಸಲೇಂನಲ್ಲಿ ಮನೆಗೆ ಹೋಗುವಾಗ ಪ್ರತಿಭಟನಾಕಾರರು ಅವರ ಕಾರನ್ನು ತಡೆದು ಕಾರಿಗೆ ಗುದ್ದಿ ಗಾಜು ಪುಡಿ ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.