ರಾಷ್ಟ್ರಪತಿಗೆ ಕೃತಜ್ಞತೆ ಚರ್ಚೆ ವೇಳೆ ಮೋದಿ ಸರಕಾರಕ್ಕೆ ಮುಖಭಂಗ

0
274

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇಂದ್ರ ಸರಕಾರದ ಏಜೆನ್ಸಿಗಳಾದ ಇಡಿ ಮತ್ತು ಸಿಬಿಐಯನ್ನು ಸರಕಾರ ದುರುಪಯೋಗಿಸುತ್ತಿದೆ ಎಂದು ಪಾರ್ಲಿಮೆಂಟಿನ ಹೊರಗೆ ಪ್ರತಿಪಕ್ಷ ಸಂಸದರು ಪ್ರತಿಭಟನಾ ಧರಣಿ ನಡೆಸಿದರು.

ಈ ವೇಳೆ ಅವರು ಕೈಯಲ್ಲಿ ಪ್ಲೇ ಕಾರ್ಡುಗಳನ್ನು ಹಿಡಿದು ಘೋಷಣೆಯನ್ನು ಕೂಗುತ್ತಿದ್ದರು.

ನೀಟ್ ವಿಷಯದಲ್ಲಿ ಚರ್ಚೆಗೆ ಪ್ರತಿಪಕ್ಷ ಆಗ್ರಹಿಸಿದ ನಂತರ ಸದನವನ್ನು ಮುಂದೂಡಲಾಗಿತ್ತು. ಪುನಃ ಪಾರ್ಲಿಮೆಂಟು ಆರಂಭವಾಗಿದೆ. ರಾಷ್ಟ್ರಪತಿಗೆ ಕೃತಜ್ಞತೆ ಸಲ್ಲಿಸುವ ಪ್ರಸ್ತಾವದಲ್ಲಿ ಚರ್ಚಿಸುವ ಮೊದಲು ನೀಟ್ ಪೇಪರ್ ಸೋರಿಕೆಯ ಬಗ್ಗೆ ಚರ್ಚಿಸಬೇಕೆಂದು ಪುನಃ ಪ್ರತಿಪಕ್ಷ ಆಗ್ರಹಿಸಿತು. ಓಂ ಬಿರ್ಲಾ ಪ್ರತಿಪಕ್ಷದ ಬೇಡಿಕೆಯನ್ನು ತಿರಸ್ಕರಿಸಿದರು.

ದಲಿತ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವಿಭಾಗಗಳ ಕುರಿತು ರಾಷ್ಟ್ರಪತಿ ಭಾಷಣದಲ್ಲಿ ಇಲ್ಲ. ರಾಷ್ಟ್ರಪತಿಯ ಭಾಷಣ ದಿಕ್ಕು ದೆಸೆಯಿಲ್ಲದ್ದಾಗಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ಸರಕಾರವನ್ನು ತರಾಟೆಗೆತ್ತಿಕೊಂಡರು.

ರಾಷ್ಟ್ರಪತಿ ಎಂದರೆ ಪಾರ್ಲಿಮೆಂಟಿನ ಮುಖ್ಯ ಘಟಕ ಆಗಿದೆ. ರಾಷ್ಟ್ರಪತಿಯನ್ನು ಪ್ರತಿಪಕ್ಷ ಗೌರವಿಸುತ್ತದೆ. ರಾಷ್ಟ್ರಪತಿ ಈ ವರ್ಷದ ಮೊದಲ ಭಾಷಣ ಜನವರಿಯಲ್ಲಿ ಮಾಡಿದರು. ಈಗ ಎರಡನೆಯ ಬಾರಿ ಜೂನ್‍ನಲ್ಲಿ ಮಾಡಿದ್ದಾರೆ. ಮೊದಲ ಭಾಷಣ ಚುನಾವಣೆಗಾಗಿತ್ತು. ಎರಡನೆಯ ಭಾಗ ಅದರ ಕಾಪಿಯಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನೀಟ್‍ನ ಕುರಿತು ಪ್ರಧಾನಿ ವಿದ್ಯಾರ್ಥಿಗಳಿಗೆ ಸಂದೇಶ ನೀಡಬೇಕೆಂದು ಪ್ರತಿಪಕ್ಷ ಬಯಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಅದಕ್ಕಾಗಿ ಈ ವಿಷಯವನ್ನು ಪಾರ್ಲಿಮೆಂಟಿನಲ್ಲಿ ಚರ್ಚಿಸಲು ಅವರು ಬಯಸುವುದೆಂದು ಹೇಳಿದರು.