ಮಣಿಪುರದಲ್ಲಿ ಎನ್ ಆರ್ ಸಿ ಜಾರಿಗೆ ಮೈತೇಯ್, ನಾಗ ಸಂಘಟನೆಗಳ ಆಗ್ರಹ

0
215

ಸನ್ಮಾರ್ಗ ವಾರ್ತೆ

ಇಂಫಾಲ್, ಜೂ. 3: ನುಸುಳುಕೋರರನ್ನು ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ರಿಜಿಸ್ಟರ್(ಎನ್‍ಆರ್‍ಸಿ) ಜಾರಿಗೊಳಿಸಬೇಕೆಂದು ಪ್ರಮುಖ ಮೈತೇಯಿ, ನಾಗಾ ಸಮುದಾಯದ ಸಂಘಟನೆಗಳು ಮಂಗಳವಾರ ಮಣಿಪುರದ ರಾಜ್ಯಪಾಲೆ ಅನಸೂಯಾ ವೈ ಕೆ ಯವರನ್ನು ಭೇಟಿಯಾಗಿ ಆಗ್ರಹಿಸಿದ್ದಾರೆ.

ಕೋಆರ್ಡಿನೇಟಿಂಗ್ ಕಮಿಟಿ ಫಾರ್ ಮಣಿಪುರ ಇಂಟರ್ ಗ್ರೆಟ್ ಸಿಒಸಿಒಎಂಐ ಮತ್ತು ಯುನೈಟೆಡ್ ನಾಗಾ ಕೌನ್ಸಿಲ್‍ ಯುಎನ್‍ಸಿಯ ನಾಯಕರು ಒಟ್ಟಿಗೆ ಬಂದು ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

1952ರ ಪೌರತ್ವ ನೋಂದಣಿ ಆಧಾರರದಲ್ಲಿ ಎನ್‍ಆರ್‍ಸಿ ಜಾರಿಗೊಳಿಸಬೇಕೆಂದು ಇವರು ಆಗ್ರಹಿಸಿದ್ದಾರೆ. ಮಣಿಪುರ ಮೈತೇಯ್ ಸಮುದಾಯದ ಪರಮೋನ್ನತ ಸಂಘಟನೆ ಕೊಕೊಮಿ ಇದರ ಅಧ್ಯಕ್ಷ ಎನ್‍ಜಿ ಲೊರಾ ಅವರು ಈ ಕೂಡ ಈ ತಂಡದಲ್ಲಿದ್ದುದು ವಿಶೇಷವಾಗಿತ್ತು.

ರಾಜ್ಯಪಾಲರು ಸಂಘಟನೆ ಮಂದಿಗೆ ಪೂರಕವಾಗಿ ಪ್ರತಿಕ್ರಿಯಿಸಿದ್ದು ಎನ್ ಆರ್‍ಸಿಯ ಬಗ್ಗೆ ಮಾತು ಕೊಟ್ಟಿದ್ದಾರೆ. ಅನಧಿಕೃತವಾಗಿ ಬಂದವರು ಇದ್ದಾರೆ. ಇದು ಈಶಾನ್ಯ ರಾಜ್ಯಗಳ ಜನಸಂಖ್ಯೆಯನ್ನು ಅಸಮತೋಲನಗೊಳಿಸಿದೆ ಎಂದು ಅವರು ಹೇಳಿದ್ದು ಇದನ್ನು ತಡೆಯಲು ಎನ್‍ಆರ್‍ಸಿ ಅಗತ್ಯ ಎಂದು ಇವರು ರಾಜ್ಯಪಾಲರಿಗೆ ತಿಳಿಸಿದರು./ ನುಸುಳು ಕೊರನ್ನು ತಡೆಯಲು ವೈಜ್ಞಾನಿಕ ರೀತಿಯನ್ನು ಅಳವಡಿಸಬೇಕು ಎನ್ ಆರ್‍ಸಿ ಬೇಗನೆ ಜಾರಿಗೊಳಿಸಬೇಕು ಎಂದು ಮನವಿ ಪತ್ರದಲ್ಲಿ ಸೂಚಿಸಲಾಗಿದೆ.

ಇದೇ ವೇಳೆ ತಾನು ದಿಲ್ಲಿಗೆ ಹೋಗಿದ್ದಾಗ ರಾಷ್ಟ್ರಪತಿ, ಕೇಂದ್ರ ವಿತ್ತಸಚಿವರು ಮತ್ತು ಗೃಹ ಸಚಿವರಲ್ಲಿ ಇದನ್ನು ಹೇಳಿದ್ದೇನೆ ಎಂದು ರಾಜ್ಯಪಾಲರು ತಮ್ಮನ್ನು ಭೇಟಿಯಾದವರಿಗೆ ತಿಳಿಸಿದರು.