ಝಿಕ ವೈರಸ್: ರಾಜ್ಯಗಳಿಗೆ ಎಚ್ಚರಿಕೆ

0
242

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜು. 4: ಮಹಾರಾಷ್ಟ್ರದಲ್ಲಿ ಝಿಕ ವೈರಸ್ ಪ್ರಕರಣಗಳು ದೃಢಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಎಚ್ಚರಿಕೆ ಸಂದೇಶವನ್ನು ಹೊರಡಿಸಿತು.

ಗರ್ಭಿಣಿಯರು ತಪಾಸಣೆ ನಡೆಸಿ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯನ್ನು ನಿರೀಕ್ಷಿಸಬೇಕು ಮತ್ತು ಜಾಗೃತೆ ವಹಿಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಆಗ್ರಹಿಸಿದೆ.

ಆಸ್ಪತ್ರೆ ಆರೋಗ್ಯ ಕೇಂದ್ರಗಳನ್ನು ಸೊಳ್ಳೆ ಮುಕ್ತಗೊಳಿಸಬೇಕು. ಇದಕ್ಕಾಗಿ ನೊಡಲ್ ಅಧಿಕಾರಿ ನೇಮಕಗೊಳಿಸಬೇಕು. ಜನವಾಸ ಸ್ಥಳದಲ್ಲಿ , ಕೆಲಸದ ಜಾಗಗಳಲ್ಲಿ, ಶಾಲೆಗಳು, ನಿರ್ಮಾಣ ಕಾರ್ಯಗಳಲ್ಲಿ ನಡೆಯುವಲ್ಲಿ , ಆರೋಗ್ಯ ಸಂಸ್ಥೆಗಳಲ್ಲಿ ನಿಗಾ ಇರಿಸಬೇಕು. ರಕ್ಷಣಾ ವ್ಯವಸ್ಥೆಗಳು ಬಲಪಡಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.

ಜನರಲ್ಲಿ ಆತಂಕ ಆಗದಿರಲು ಸಾಮಾಜಿಕ ಮಾಧ್ಯಮಗಳು ಮೂಲಕ ಕೂಡ ಪ್ರಚಾರ ಮಾಡಬೇಕೆಂದು ಕೇಂದ್ರ ಸರಕಾರ ಆಗ್ರಹಿಸಿದೆ.

ಮಹಾರಾಷ್ಟ್ರದಲ್ಲಿ ಗರ್ಭಿಣಿಯರ ಸಹಿತ ಎಂಟು ಮಂದಿಗೆ ಝಿಕ ವೈರಸ್ ದೃಢಪಟ್ಟಿದ್ದು ಈಡಿಸ್ ಸೊಳ್ಳೆಗಳ ಮೂಲಕ ಈ ರೋಗ ಹರಡುತ್ತದೆ. ಡೆಂಗ್ ,ಚಿಕುನ್ ಗುನಿಯ ಮೊದಲಾದ ರೋಗವಾಹಕಗಳು ಕೂಡ ಈ ಸೊಳ್ಳೆಗಳು ಆಗಿವೆ. 2016ರಲ್ಲಿ ಗುಜರಾತಿನಲ್ಲಿ ದೇಶದ ಮೊದಲ ಝಿಕ ಪ್ರಕರಣ ವರದಿಯಾಗಿತ್ತು.

ತಮಿಳ್ನಾಡು, ಮಧ್ಯಪ್ರದೇಶ, ರಾಜಸ್ಥಾನ, ಕೇರಳ, ಮಹಾರಾಷ್ಟ್ರ, ಉತ್ತರಪ್ರದೇಶ, ದಿಲ್ಲಿ, ಕರ್ನಾಟಕ ರಾಜ್ಯಗಳಲ್ಲಿ ಆ ನಂತರ ಝಿಕ ವೈರಸ್ ಪ್ರಕರಣ ವರದಿಯಾಗಿತ್ತು.