ಉತ್ತರ ಪ್ರದೇಶ: 25 ವರ್ಷದ ವೈದ್ಯ ಇಸ್ತೇಕಾರ್ ರ ಹೆಸರು ಕೇಳಿ ಹಲ್ಲೆ ನಡೆಸಿದ ಗುಂಪು

0
308

ಸನ್ಮಾರ್ಗ ವಾರ್ತೆ

ಮೊರದಾಬಾದ್, ಜು.4: ಜೂನ್ 30 ರಂದು ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ 25 ವರ್ಷದ ವೈದ್ಯರೊಬ್ಬರು ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಹಿಂದುತ್ವ ಗುಂಪು ಹಲ್ಲೆ ನಡೆಸಿದ ಘಟನೆ ನಡೆದಿದೆ.

ವೈದ್ಯ ಡಾ.ಇಸ್ತೇಕಾರ್, ತನ್ನ ವಾಹನಕ್ಕೆ ಇಂಧನ ತುಂಬಲು ಪೆಟ್ರೋಲ್ ಪಂಪ್‍ನಲ್ಲಿ ನಿಲ್ಲಿಸಿದಾಗ ಹೆಸರನ್ನು ಕೇಳಿದ ಗುಂಪು ಮುಸ್ಲಿಮ್ ಎಂದು ಅರಿತುಕೊಂಡು ಹಲ್ಲೆ ಮಾಡಿದೆ.

“ನಾನು ನನ್ನ ಕ್ಲಿನಿಕ್‍ನಿಂದ ಹಿಂತಿರುಗುತ್ತಿದ್ದೆ, ನನ್ನ ಬೈಕ್‍ನಲ್ಲಿ ಇಂಧನ ಖಾಲಿಯಾಗಿದೆ ಎಂದು ನಾನು ಪೆಟ್ರೋಲ್ ಪಂಪ್‍ನಲ್ಲಿ ಇಂಧನ ತುಂಬಲು ನಿಲ್ಲಿಸಿದೆ. ನಾನು ರಸ್ತೆ ದಾಟುತ್ತಿದ್ದಾಗ ಇಬ್ಬರು ನನ್ನನ್ನು ತಡೆದು ನನ್ನ ಹೆಸರು ಕೇಳಿ ನಿಂದಿಸಿ ಥಳಿಸಿದರು. ಅವರು ಹೆಚ್ಚು ಜನರನ್ನು ಸೇರಿಸಿದರು ಮತ್ತು ನನ್ನನ್ನು ಸುಮಾರು 25 ಜನರು ನನ್ನನ್ನು ಸುತ್ತುವರಿದು ಹಲ್ಲೆ ನಡೆಸಿದರು ಎಂದು ಇಸ್ತೇಕಾರ್ ತಿಳಿಸಿದ್ದಾರೆ ಎಂದು ದಿ ಅಬ್ಸರ್ವರ್ ಪೋಸ್ಟ್ ವರದಿ ಮಾಡಿದೆ.

ಅವರಲ್ಲೇ ಒಬ್ಬ ವ್ಯಕ್ತಿಯೊಬ್ಬ ವೈದ್ಯರನ್ನು ಗುರುತಿಸಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರು ಯಶಸ್ವಿಯಾಗಲಿಲ್ಲ.

ಪ್ರಕರಣದಲ್ಲಿ ಪೊಲೀಸರು ಈ ವರೆಗೆ ಆರು ಮಂದಿಯನ್ನು ಬಂಧಿಸಿದ್ದಾರೆ. ಇವರಲ್ಲಿ ಒಬ್ಬ ಬಿಜೆಪಿ ಮಹಾನಗರ ಅಧ್ಯಕ್ಷ ಎಂದು ಸ್ಟಿಕ್ಕರ್ ಅಂಟಿಸಿದ ಬೈಕ್‍ನಲ್ಲಿ ಬಂದಿದ್ದ. ಆರೋಪಿಗಳ ವಿರುದ್ಧ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 323 (ಸ್ವಯಂ ಪ್ರೇರಿತವಾಗಿ ನೋವುಂಟು ಮಾಡುವುದು), 148 (ಗಲಭೆ, ಶಸ್ತ್ರಸಜ್ಜಿತ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಮಾರಕ ಆಯುಧ ಮತ್ತು 147 (ಗಲಭೆ) ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.