ನೆಟ್‍ಫ್ಲಿಕ್ಸ್ ಸರಣಿ ನಿರ್ಮಾಪಕ ಅಬ್ದುಲ್ ಅಝೀಝ್ ಅಲ್ಮುಝೈನಿಗೆ 13 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಸೌದಿಅರೇಬಿಯ

0
332

ಸನ್ಮಾರ್ಗ ವಾರ್ತೆ

ರಿಯಾದ್: ನೆಟ್‍ಫ್ಲಿಕ್ಸ್ ಸರಣಿ ಮತ್ತು ಹಳೆಯ ಟ್ವೀಟ್‍ಗಳ ಮೂಲಕ ಭಯೋತ್ಪಾದನೆ ಮತ್ತು ಸಲಿಂಗಕಾಮವನ್ನು ಉತ್ತೇಜಿಸಿದ್ದಕ್ಕಾಗಿ ಸೌದಿ ಅರೇಬಿಯಾ (ಕೆಎಸ್‍ಎ) ಅಧಿಕಾರಿಗಳು ಲೇಖಕ ಮತ್ತು ನಿರ್ಮಾಪಕ ಅಬ್ದುಲ್ ಅಝೀಝ್ ಅಲ್ಮುಝೈನಿ ಅವರಿಗೆ 13 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ ಎಂದು ವರದಿಯಾಗಿದೆ.

2021ರಲ್ಲಿ, ತಮ್ಮ ಜನಪ್ರಿಯ ಅನಿಮೇಟೆಡ್ ಸರಣಿ ಮಸಮೀರ್ ಅನ್ನು ಪ್ರಸಾರ ಮಾಡಲು ನೆಟ್‍ಫ್ಲಿಕ್ಸ್‍ನೊಂದಿಗೆ ವಿಶೇಷ ಒಪ್ಪಂದವನ್ನು ಪಡೆದುಕೊಂಡ ನಂತರ ಅವರ ಮತ್ತು ಅವರ ಕಂಪನಿ ಮೈರ್ಕಾಟ್ ಅನಿಮೇಷನ್ ಸ್ಟುಡಿಯೋ ಮೇಲೆ ಒತ್ತಡಗಳು ಪ್ರಾರಂಭವಾದವು.

ಆಡಿಯೋವಿಶುವಲ್ ಮೀಡಿಯಾದ ಜನರಲ್ ಅಥಾರಿಟಿಯ ನಿಯಮ ಉಲ್ಲಂಘನೆಗಳ ನಿಯಂತ್ರಣದ ನಿರ್ದೇಶಕ ಸಾದ್ ಅಲ್-ಸುಹೈಮಿ ಅವರಿಂದ ನಿರಂತರ ಬೆದರಿಕೆಗಳು ತನಗೆ ಬಂದಿವೆ ಎಂದು ಎಂದು ಅಲ್ಮುಝೈನಿ ವೀಡಿಯೊ ಸಂದೇಶದಲ್ಲಿ ವಿವರಿಸಿದ್ದಾರೆ.

ಅಲ್ಮುಝೈನಿ ಅವರು 2010-2014 ರಿಂದ ಅವಮಾನ, ಭಯೋತ್ಪಾದನೆ, ಸಲಿಂಗಕಾಮ ಮತ್ತು ಟ್ವೀಟ್‍ಗಳನ್ನು ಮಾಡಿದ ಆರೋಪಗಳನ್ನು ಕೂಡ ಎದುರಿಸುತ್ತಿದ್ದಾರೆ.

ಸೌದಿ ಅರೇಬಿಯಾದ ಪಬ್ಲಿಕ್ ಪ್ರಾಸಿಕ್ಯೂಷನ್ 25 ವರ್ಷಗಳ ಜೈಲು ಶಿಕ್ಷೆ ಮತ್ತು 13 ವರ್ಷದ ಪ್ರಯಾಣ ನಿಷೇಧವನ್ನು ಹೇರಬೇಕೆಂದು ಕೋರ್ಟಿನಲ್ಲಿ ಆಗ್ರಹಿಸಿತ್ತು. ದೇಶದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಮುಝೈನಿಗೆ 13 ವರ್ಷಗಳ ಶಿಕ್ಷೆ ಮತ್ತು 13 ವರ್ಷಗಳ ಪ್ರಯಾಣ ನಿಷೇಧವನ್ನು ಹೇರಿ ತೀರ್ಪು ನೀಡಿದೆ.

https://x.com/SaadAbedine/status/1806617197441142796