ಸುನಕ್ ಔಟ್: ಬ್ರಿಟನ್‍ನಲ್ಲಿ ಕನ್ಸರ್ವೇಟಿವ್ ಪಾರ್ಟಿಯನ್ನು ಮಗುಚಿ ಹಾಕಿದ ಲೇಬರ್ ಪಾರ್ಟಿ, ಕೇರ್ ಸ್ಟಾರ್‍ಮರ್ ಪ್ರಧಾನಿ!

0
174

ಸನ್ಮಾರ್ಗ ವಾರ್ತೆ

ಲಂಡನ್, ಜು.5: ಕಾಲವೇ ಎಲ್ಲವನ್ನು ಬದಲಾಯಿಸುತ್ತದೆ ಎಂಬುದಕ್ಕೆ ಬ್ರಿಟನ್‌ನಲ್ಲಾದ ರಾಜಕೀಯ ಬದಲಾವಣೆಯನ್ನು ಮಾಧ್ಯಮಗಳು ಉಲ್ಲೇಖಿಸುತ್ತಿವೆ.

ಹದಿನಾಲ್ಕು ವರ್ಷದ ಕನ್ಸರ್ವೇಟಿವ್ ಪಾರ್ಟಿ ಆಡಳಿತವನ್ನು ಅಲ್ಲಿನ ಮತದಾರರು ಕಿತ್ತೆಸೆದಿದ್ದಾರೆ. ಹಿಂದುತ್ವವಾದಿಗಳು ಅಟ್ಟದಲ್ಲಿ ಕೂರಿಸುತ್ತಿದ್ದ ಋಷಿ ಸುನಕ್ ಪಾರ್ಟಿ ಹೀನಾಯವಾಗಿ ಸೋತಿದೆ.

370 ಮಂದಿಯ ಪಾರ್ಲಿಮೆಂಟಿಗೆ 181 ಮಂದಿ ಲೇಬರ್ ಪಾರ್ಟಿಯ ಎಂಪಿಗಳು ಗೆದ್ದು ಬಂದಿದ್ದಾರೆ. ಕೇವಲ 90 ಸೀಟುಗಳು ಋಷಿ ಸುನಕ್ ಪಾರ್ಟಿ ಗೆದ್ದಿದೆ. ಲಿಬರಲ್ ಡೆಮಕ್ರಾಟ್‍ಗಳಿಗೆ 51 ಸೀಟುಗಳು ಸಿಕ್ಕಿವೆ. ಸ್ಕಾಟಿಷ್ ನ್ಯಾಶನಲ್ ಪಾರ್ಟಿಗೆ ಆರು ಸೀಟುಗಳು ಸಿಕ್ಕಿದ್ದು ಸೀನ್ ಫೆಯಿನ್ 6 ಸೀಟುಗಳಲ್ಲಿ ಮತ್ತು ಇತರರು 21 ಸೀಟುಗಳಲ್ಲಿ ವಿಜಯ ದಾಖಲಿಸಿದ್ದಾರೆ.

ಜನರು ಬದಲಾವಣೆಗಾಗಿ ವೋಟು ಮಾಡಿದರು ಎಂದು ಲೇಬರ್ ಪಾರ್ಟಿ ನಾಯಕ ಕೆರ್ ಸ್ಟಾರ್‍ಮೆನ್ ಹೇಳಿದ್ದು ಅವರೇ ಬಹುತೇಕ ಬ್ರಿಟನ್‍ನಲ್ಲಿ ಪ್ರಧಾನಿಯಾಗುವ ಸಾಧ್ಯತೆ ದಟ್ಟವಾಗಿ ಕಾಣಿಸುತ್ತಿದೆ. ಚುನಾವಣೆ ಸೋಲಿನ ಹೊಣೆ ಹೊತ್ತು ಕ್ಷಮೆ ಯಾಚಿಸುವುದಾಗಿ ಋಷಿ ಸುನಕ್ ಹೇಳಿದರು.

ಇಂಗ್ಲೆಂಡ್, ಸ್ಕಾಟ್‍ಲೆಂಡ್, ವೇಲ್ಸ್, ಉತ್ತರ ಅಯರ್ಲೆಂಡ್ ಮುಂತಾದ 650 ಸದಸ್ಯರ ಪಾರ್ಲಿಮೆಂಟಿನಲ್ಲಿ ಬಹುಮತಕ್ಕೆ 326 ಸೀಟುಗಳಲ್ಲಿ ಗೆಲ್ಲಬೇಕು. ಲೆಬರಲ್‍ಗಳು, ಡೆಮಕ್ರಾಟ್‍ಗಳು , ಗ್ರೀನ್ ಪಾರ್ಟಿ, ಸ್ಕಾಟಿಶ್ ನ್ಯಾಶನಲ್ ಪಾರ್ಟಿ(ಎಸ್‍ಎನ್‍ಪಿ) ಎಸ್‍ಡಿಎಲ್‍ಪಿ, ಡೆಮಕ್ರಾಟಿಕ್ ಯುನಿಯನಿಸ್ಟ್ ಪಾರ್ಟಿ ಸೀನ್ ಫೆಯಿನ್, ಪ್ಲೈಡ್ ಸಿಮ್ರು, ವಲಸೆಗಾರರ ವಿರೋಧಿ ರಿಫಾರ್ಮ್ ಪಾರ್ಟಿ ಸಹಿತ ರಾಜಕೀಯ ಪಾರ್ಟಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದವು.

ಸರಕಾರಕ್ಕೆ 2025 ಜನವರಿವರೆಗೆ ಅಧಿಕಾರದಲ್ಲಿರಬಹುದಾಗಿತ್ತು. ಆದರೆ ಸುನಕ್ ಮೊದಲೇ ಚುನಾವಣೆಗೆ ತೆರಳಿದರು. ಈಗ ಸೋತು ಸುಣ್ಣವಾಗಿದ್ದಾರೆ. ಇದು ಕಾಲದ ಬದಲಾವಣೆಯಾಗಿ ಗುರುತಿಸಲ್ಪಡಲಿದೆ.