ಲಿವಿಂಗ್ ಟುಗೆದರ್ ಮದುವೆ ಸಂಬಂಧವಲ್ಲ ; ಸಂಗಾತಿಯನ್ನು ಪತಿ ಎಂದು ಕರೆಯುವಂತಿಲ್ಲ – ಕೇರಳ ಹೈಕೋರ್ಟು

0
202

ಸನ್ಮಾರ್ಗ ವಾರ್ತೆ

ಕೊಚ್ಚಿ,ಜು.11: ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಸಂಗಾತಿ ಅಥವಾ ಸಂಬಂಧಿಕರಿಂದ ದೈಹಿಕ, ಮಾನಸಿಕ ಹಿಂಸೆ ನಡೆದರೆ ಅದು ಗೃಹ ಹಿಂಸೆ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಕೇರಳ ಹೈಕೋರ್ಟು ಹೇಳಿದೆ.

ಲಿವಿಂಗ್ ಟುಗೆದರ್ ಮದುವೆಯಲ್ಲ, ಸಂಗಾತಿಯನ್ನು ಪತಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಎರ್ನಾಕುಳಂ ನಿವಾಸಿಯ ವಿರುದ್ಧ ಪ್ರಕರಣವನ್ನು ಹೈಕೋರ್ಟು ರದ್ದು ಪಡಿಸಿ ಆದೇಶ ನೀಡಿದೆ. ನನ್ನೊಂದಿಗೆ ಲಿವಿಂಗ್ ರಿಲೇಶನ್ ಇತ್ತು, ನಂತರ ಜಗಳ ಮಾಡಿ ಪೊಲೀಸರಿಗೆ ದೂರು ನೀಡಿದ್ದು ಎಂದು ವ್ಯಕ್ತಿ ಹೇಳುತ್ತಿದ್ದಾನೆ. ಮಹಿಳೆಯ ದೂರಿನಲ್ಲಿ ಕೊಯಿಲಾಂಡಿ ಪೊಲೀಸರು ಕೇಸು ದಾಖಲಿಸಿದ್ದರು. ಈ ಕೇಸು ರದ್ದು ಪಡಿಸಬೇಕೆಂದು ಅರ್ಜಿದಾರ ಬೇಡಿಕೆ ಸಲ್ಲಿಸಿದ್ದಾನೆ.

ಕಾನೂನಾತ್ಮಕವಾಗಿ ಮದುವೆ ಆದರೆ ಮಾತ್ರ ಗಂಡ ಹೆಂಡತಿ ಎಂದು ಕರೆಯಬಹುದು. ಗೃಹ ಹಿಂಸೆ ವ್ಯಾಪ್ತಿಯಲ್ಲಿ ಪ್ರಕರಣ ಬರಬೇಕಾದರೆ ಮದುವೆ ಆಗಿರಬೇಕೆಂದು ಕೋರ್ಟು ತಿಳಿಸಿದೆ.