ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ ಬೆಂಗ್ರೆ ಎಸ್ಐಒ-ಜಿಐಒ ವತಿಯಿಂದ ಕ್ಯಾಂಡಲ್‌ಲೈಟ್ ಪ್ರತಿಭಟನೆ

0
446

ಸನ್ಮಾರ್ಗ ವಾರ್ತೆ

ಬೆಂಗ್ರೆ: ಎಸ್‌ಐಒ ಮತ್ತು ಜಿಐಒ ಬೆಂಗ್ರೆ ಘಟಕವು ಬೆಂಗ್ರೆಯ ಬಿಎಂಡಿ ಫೆರ್ರಿ ಸರ್ವಿಸ್ ಬಳಿ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ದ ಜಾಗೃತಿ ಮೂಡಿಸಲು ಕ್ಯಾಂಡಲ್‌ಲೈಟ್ ಪ್ರತಿಭಟನೆಯನ್ನು ಆಯೋಜಿಸಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಮಂಗಳೂರು ಎಸ್‌ಐಒ ಸದಸ್ಯರಾದ ಫಿರಾಸ್, ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿದ್ದಲ್ಲದೇ ಮಹಿಳಾ ದೌರ್ಜನ್ಯಗಳ ವಿರುದ್ದ ಎಸ್‌ಐಒ ನ ನಿಲುವನ್ನು ಸ್ಪಷ್ಟಪಡಿಸಿದರು.

ಬಳಿಕ ಮಾತನಾಡಿದ ಜಿಐಒ ಬೆಂಗ್ರೆ ಘಟಕದ ಸಂಚಾಲಕಿ ಶಿರೀನ್ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು ಮತ್ತು ಸಮುದಾಯದ ಒಗ್ಗಟ್ಟಿನ ಅಗತ್ಯವನ್ನು ಒತ್ತಿ ಹೇಳಿದರು.

ಎಲ್ಲಾ ನಾಗರಿಕರಿಗೆ ಸುರಕ್ಷತೆ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳುವಂತೆ ಪಶ್ಚಿಮ ಬಂಗಾಳ ಸರ್ಕಾರದ ಜವಾಬ್ದಾರಿಯನ್ನು ನೆನಪಿಸಿದರು. ಹಿಂಸಾಚಾರ ನಡೆಸಿದ ದುಷ್ಕರ್ಮಿಗಳ ವಿರುದ್ಧ ಸರ್ಕಾರವು ಕಠಿಣ ಕ್ರಮ ಕೈಗೊಳ್ಳುವಂತೆ ಎಸ್‌.ಐ.ಒ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬ್ರ.ಆಸಿಫ್ ಡಿ.ಕೆ ಒತ್ತಾಯಿಸಿದರು.

ಎಸ್.ಐ.ಒ ಬೆಂಗ್ರೆ ಘಟಕದ ಅಧ್ಯಕ್ಷ ಅಬ್ದುಲ್ ರಫಿ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂಬ ಸಂದೇಶಗಳ ಪ್ರಬಲ ಘೋಷಣೆಗಳೊಂದಿಗೆ ಪ್ರತಿಭಟನೆಯನ್ನು ಮುನ್ನಡೆಸಿದರು.

ಈ ಸಂದರ್ಭದಲ್ಲಿ ಎಸ್.ಐ.ಒ, ಜಿ.ಐ.ಒ ಇದರ ಸದಸ್ಯರು, ಕಾರ್ಯಕರ್ತರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.