ವಯನಾಡ್ ದುರಂತ: 10 ಕೋಟಿ ಪರಿಹಾರ ಯೋಜನೆ ಘೋಷಿಸಿದ ಜಮಾಅತೆ ಇಸ್ಲಾಮಿ ಹಿಂದ್, ಕೇರಳ

0
926

ಸನ್ಮಾರ್ಗ ವಾರ್ತೆ

ವಯನಾಡ್ ದುರಂತದಲ್ಲಿ ಸಂತ್ರಸ್ತರಾದವರಿಗೆ 10 ಕೋಟಿಯ ಪರಿಹಾರ ಯೋಜನೆಯನ್ನು ಕೇರಳ ಜಮಾಅತೆ ಇಸ್ಲಾಮಿ ಹಿಂದ್ ಘೋಷಿಸಿದೆ.. ಇದು ಮೊದಲ ಹಂತದ ಪರಿಹಾರ ಯೋಜನೆಯಾಗಿದೆ ಎಂದು ಹಿರಾ ಸೆಂಟರ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಮುಜೀಬ್ರಹ್ಮಾನ್ ಅವರು ತಿಳಿಸಿದ್ದಾರೆ.

ತಜ್ಞರು ನಡೆಸಿದ ಸರ್ವೆಯ ಆಧಾರದಲ್ಲಿ ಈ ಪರಿಹಾರ ಕಾರ್ಯವನ್ನು ಎತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಡಯಾಲಿಸಿಸ್ ಕಾಯಿಲೆ ಇರುವವರು ಹಾಸಿಗೆಗೆ ಸೀಮಿತರಾದವರು ವೃದ್ಧರು ಮತ್ತು ಇತರ ಅಸಹಾಯಕರಿಗೆ ತಾತ್ಕಾಲಿಕ ವಾಸಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು ಸರಕಾರ ಶಾಶ್ವತ ವ್ಯವಸ್ಥೆ ಮಾಡುವವರೆಗೆ ಈ ತಾತ್ಕಾಲಿಕ ಯೋಜನೆ ಜಾರಿಯಲ್ಲಿ ಇರುತ್ತದೆ ಎಂದವರು ಹೇಳಿದ್ದಾರೆ.

ಮನೆ ನಿರ್ಮಿಸುವ ಯೋಜನೆಯ ಜೊತೆಗೆ ಕೊಡಿಯತೂರಿನ ವಾದಿ ರಹಮಾನ್ ಸ್ಕೂಲ್ ನ ಸಹಯೋಗದಲ್ಲಿ ಪ್ರಾಥಮಿಕ ಶಾಲೆಯಿಂದ ಹೈಯರ್ ಸೆಕೆಂಡರಿವರೆಗೆ ಕಲಿಕೆಗೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಕೂಡ ಅವರು ತಿಳಿಸಿದ್ದಾರೆ. ಆರ್ಥಿಕ ಸಹಾಯ ನೀಡುವ ಮೂಲಕ ಉದ್ಯೋಗಾವಕಾಶವನ್ನು ಉಂಟುಮಾಡುವ ಪ್ರಯತ್ನ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.