ಕೆಲವು ಧರ್ಮಗಳು, ಭಾಷೆಗಳು ಆರೆಸ್ಸೆಸ್‍ಗೆ ಎರಡನೆಯ ದರ್ಜೆಯದು: ರಾಹುಲ್ ಗಾಂಧಿ

0
152

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಕೆಲವು ಧರ್ಮಗಳು, ಭಾಷೆಗಳು ಮತ್ತು ಸಮುದಾಯಗಳನ್ನು ಆರೆಸ್ಸೆಸ್ ಎರಡನೇ ದರ್ಜೆಯಂತೆ ನೋಡುತ್ತದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಅವರು ವಾಷಿಂಗ್ಟನ್ ಡಿಸಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ತಮಿಳು, ಮರಾಠಿ, ಬಂಗಾಳಿ ಮತ್ತು ಮಣಿಪುರಿ ಆರೆಸ್ಸೆಸ್‍ಗೆ ಎರಡನೇ ದರ್ಜೆಯ ಭಾಷೆಗಳಾಗಿವೆ. ಈ ವಿಭಜನೆಯ ವಿರುದ್ಧ ಭಾರತದಲ್ಲಿ ಹೋರಾಟ ಇದೆ. ಪ್ರತಿಯೊಬ್ಬರೂ ಅವರವರ ಧರ್ಮವನ್ನು ಪಾಲಿಸುವಂತಾಗಬೇಕು. ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ಭಾರತವು ಭಾಷೆಗಳು, ಸಂಪ್ರದಾಯಗಳು ಮತ್ತು ಇತಿಹಾಸಗಳ ಸಮೂಹವಾಗಿದೆ ಎಂದು ಅವರು ಹೇಳಿದರು. ಆದಾಗ್ಯೂ, ಭಾರತವು ರಾಜ್ಯಗಳ ಒಕ್ಕೂಟವಲ್ಲ ಎಂದು ಆರೆಸ್ಸೆಸ್‍ ವಾದಿಸುತ್ತದೆ. ಅವರು ದ್ವೇಷ ಹರಡಬಾರದು ಮತ್ತು ಭಾಷೆ, ಧರ್ಮ, ಸಮುದಾಯಗಳು ಮತ್ತು ಜನರನ್ನು ಗೌರವಿಸಬೇಕು ಎಂದು ರಾಹುಲ್ ಹೇಳಿದರು.