ಲೆಬನಾನ್‌: ಸ್ಫೋಟಗೊಂಡ ವಾಕಿ ಟಾಕಿಯನ್ನು ತಯಾರಿಸಿದವರು ಯಾರು?

0
144

ಸನ್ಮಾರ್ಗ ವಾರ್ತೆ

ಲೆಬನಾನಿನಲ್ಲಿ ಹಿಝ್ಬುಲ್ಲಾ ಉಪಯೋಗಿಸುತ್ತಿದ್ದ ವಾಕಿ ಟಾಕಿ ಸ್ಪೋಟಗೊಂಡದ್ದು ಎಲ್ಲರಿಗೂ ಗೊತ್ತು. ಇದರಿಂದಾಗಿ 20 ಮಂದಿ ಸಾವಿಗೀಡಾಗಿದ್ದು 450 ಮಂದಿ ಗಾಯಗೊಂಡಿದ್ದಾರೆ.

ಈ ನಡುವೆ ಈ ವಾಕಿ ಟಾಕಿಯನ್ನು ನಿರ್ಮಿಸಿದ್ದು ಯಾರು ಎಂಬ ಬಗ್ಗೆ ಗೊಂದಲ ಮುಂದುವರೆದಿದೆ. ಜಪಾನಿನ ಐಕೋ ಎಂಬ ಕಂಪನಿಯ ಲೋಗೋವನ್ನು ಈ ವಾಕಿಟಾಕಿ ಹೊಂದಿದೆ. ಆದರೆ ಈ ಕಂಪನಿ ವಾಕಿಟಾಕಿ ನಿರ್ಮಿಸುವುದನ್ನು 10 ವರ್ಷಗಳ ಹಿಂದೆಯೇ ನಿಲ್ಲಿಸಿದೆ ಎಂದು ಜಪಾನ್ ಹೇಳಿದ್ದು ಇದೀಗ ಇದನ್ನು ಉತ್ಪಾದಿಸಿದ ಕಂಪನಿ ಯಾವುದು ಎಂಬ ಗೊಂದಲ ಮುಂದುವರೆದಿದೆ.

ಇಸ್ರೇಲ್ ನ ಕಣ್ಗಾವಲಿನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಳೆದ ಫೆಬ್ರವರಿಯಿಂದ ಹಿಝ್ಬುಲ್ಲಾ ಸದಸ್ಯರು ಮೊಬೈಲ್ ಉಪಯೋಗಿಸುವುದನ್ನು ಸ್ಥಗಿತಗೊಳಿಸಿದ್ದರು. ಇಸ್ರೇಲ್ ಹ್ಯಾಕ್ ಮಾಡಿ ತಾವು ಎಲ್ಲಿದ್ದೇವೆ ಎಂಬುದನ್ನು ಪತ್ತೆ ಹಚ್ಚಲು ಮೊಬೈಲ್ ನಿಂದ ಸಾಧ್ಯವಾದೀತು ಎಂಬ ಸಂದೇಹದಿಂದ ಈ ನಿರ್ಧಾರಕ್ಕೆ ಬಂದಿತ್ತು.

ಆ ಕಾರಣದಿಂದ ತೈವಾನ್ ನ ಗೋಲ್ಡ್ ಅಪ್ಪೋಲೋ ಕಂಪನಿಯಿಂದ ವಾಕಿ ಟಾಕಿಯನ್ನು ಖರೀದಿಸಿ ಹಿಝ್ಬುಲ್ಲಾ ತನ್ನ ಸದಸ್ಯರಿಗೆ ಹಂಚಿಕೆ ಮಾಡುತ್ತಿತ್ತು. ನಮ್ಮ ಬ್ರಾಂಡ್ ನೇಮ್ ನಲ್ಲಿ ಹಂಗೆರಿಯ ಬಿ ಏ ಸಿ ಕನ್ಸಲ್ಟಿಂಗ್ ಎಂಬ ಕಂಪನಿ ಇದನ್ನು ನಿರ್ಮಿಸಿದೆ ಎಂದು ತೈವಾನ್ ಕಂಪನಿ ಹೇಳಿಕೊಂಡಿದೆ. ಆದರೆ ಈ ಪೇಜರುಗಳಲ್ಲಿ ತಯಾರಿಸುವ ಹಂತದಲ್ಲಿ 3 ಗ್ರಾಂ ಸ್ಫೋಟಕವನ್ನು ತುಂಬಿಸಿ ಇಡಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.