ಜಡ್ಜ್ ರ ಪಾಕಿಸ್ತಾನ; ವರದಿ ಕೇಳಿದ ಸುಪ್ರೀಂ ಕೋರ್ಟ್

0
79

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಸೆ.20: ರಾಜ್ಯದ ಜಡ್ಜ್ ಪಾಕಿಸ್ತಾನ ಹೇಳಿಕೆ ನೀಡಿದ್ದು ಸುಪ್ರೀಂಕೋರ್ಟು ಅದರ ವರದಿಯನ್ನು ಕೇಳಿದೆ.

ಪ್ರಕರಣವೊಂದರಲ್ಲಿ ವಿಚಾರಣೆಯ ವೇಳೆ ಜಡ್ಜ್ ವೇದವ್ಯಾಚಾರ್ ಶ್ರಿಶಾನಾನಂದ ಬೆಂಗಳೂರಿನಲ್ಲಿ ಮುಸ್ಲಿಮರು ವಾಸ ಇರುವ ಸ್ಥಳಕ್ಕೆ ಪಾಕಿಸ್ತಾನ ಎಂದು ಹೇಳಿಕೆ ನೀಡಿದ್ದರು. ನಂತರ ಇದು ವಿವಾದವಾಗಿತ್ತು. ಈ ಘಟನೆಯಲ್ಲಿ ಸುಪ್ರೀಂಕೋರ್ಟಿನ ಚೀಫ್ ಜಸ್ಟಿಸ್ ಡಿವೈ ಚಂದ್ರಚೂಡ್, ಜಸ್ಟಿಸ್ ಸಂಜಯ್ ಖನ್ನ, ಬಿಆರ್ ಗವಯ್ ,ಸೂರ್ಯಕಾಂತ್ ಋಷಿಕೇಶ್ ರಾಯ್‍ರ ಪೀಠ ಸ್ವಪ್ರೇರಣೆಯಿಂದ ವಿಷಯವನ್ನು ಕೈಗೆತ್ತಿಕೊಂಡು ವರದಿಯನ್ನು ಕೇಳಿದೆ. ಶ್ರೀಷಾನಾನಂದರ ಎರಡು ವೀಡಿಯೊ ಕ್ಲಿಪ್‍ಗಳು ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಮಹಿಳಾ ವಕೀಲರ ವಿರುದ್ಧ ಜಡ್ಜ್ ಈ ರೀತಿ ಹೇಳಿಕೆ ನೀಡಿದ್ದರು. ಇದರ ನಂತರ ಹೈಕೋರ್ಟು ಸೆಕ್ರಟರಿ ಜನರಲ್‍ರಲ್ಲಿ ಸುಪ್ರೀಂ ಕೋರ್ಟು ವಿವರಣೆ ಕೇಳಿತು.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿರುವ ವೀಡಿಯೊವನ್ನು ಸೂಕ್ಷ್ಮವಾಗಿ ನೋಡಲಾಗುತ್ತಿದೆ. ಅದರ ಪ್ರಕಾರ ಜಡ್ಜ್ ವಿರುದ್ಧ ಕ್ರಮವೂ ಜರಗಲಿದೆ ಎಂದು ಚೀಫ್ ಜಸ್ಟಿಸ್ ಚಂದ್ರ ಚೂಡರು ಹೇಳಿದರು. ಹಿರಿಯ ವಕೀಲರ ಸಹಿತ ಹಲವರು ಹೈಕೋರ್ಟು ಜಡ್ಜ್ ಹೇಳಿಕೆಯನ್ನು ಟೀಕಿಸಿದ್ದಾರೆ.