ನ್ಯಾಯಾದೀಶರ ಕೋಮುದ್ವೇಷ ಆತಂಕಕಾರಿ: ವೆಲ್ಫೇರ್ ಪಾರ್ಟಿ

0
63

ಸನ್ಮಾರ್ಗ ವಾರ್ತೆ

ಬೆಂಗಳೂರು: ನಗರದ ಮುಸ್ಲಿಮ್ ಬಾಹುಳ್ಯ ಪ್ರದೇಶವೊಂದನ್ನು ಪಾಕಿಸ್ತಾನ ಎಂದು ನ್ಯಾಯಾದೀಶರು ಕರೆದಿರುವುದು ಅಕ್ಷಮ್ಯವಾಗಿದೆ. ನ್ಯಾಯ ನೀಡುವ ಓರ್ವ ನ್ಯಾಯಾಧೀಶರ ಮನೋಸ್ಥಿತಿಯನ್ನು ಇದು ಬಹಿರಂಗಪಡಿಸಿದೆ. ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನ್ಯಾಯ ವ್ಯವಸ್ಥೆಯಲ್ಲಿ ಇಂತಹ ಅಘಾತಕಾರಿ, ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿದ್ದು ಇದರಿಂದ ಬಹುತ್ವ ಭಾರತದ ಬುನಾದಿಗೆ ಹಾನಿಯಾಗುತ್ತಿದೆ. ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಮೂವತ್ತು ನಿವೃತ್ತ ನ್ಯಾಯಾಧೀಶರು ಭಾಗವಹಿಸಿರುವುದು. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮನೆಗೆ ಪ್ರಧಾನ ಮಂತ್ರಿಗಳು ಭೇಟಿ ನೀಡಿ ಪೂಜೆಯಲ್ಲಿ ಭಾಗಿಯಾಗುವುದು. ಹೈಕೋರ್ಟ್ ನ್ಯಾಯಾಧೀಶರೋರ್ವರು ಮನುಸ್ಮೃತಿ ಯನ್ನು ಹೊಗಳುತ್ತಾ ಆಚಾರ ವಿಚಾರ ವ್ಯವಹಾರ ಪ್ರಾಯಶ್ಚಿತ್ತ ಬೋಧಿಸುತ್ತದೆ ಎಂದು ಹೇಳುವುದು ಕೆಲವು ಉದಾಹರಣೆಗಳಾಗಿವೆ ಎಂದವರು ಹೇಳಿದರು.