ಸುಪ್ರೀಂ ಕೋರ್ಟ್ ಯುಟ್ಯೂಬ್ ಚ್ಯಾನೆಲ್ ಹ್ಯಾಕ್

0
54

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ ಸೆ.20: ಸುಪ್ರೀಂ ಕೋರ್ಟಿನ ಅಧಿಕೃತ ಯುಟ್ಯೂಬ್ ಚ್ಯಾನೆಲ್ ಹ್ಯಾಕ್ ಆಗಿದೆ. ಈ ಚ್ಯಾನೆಲ್‍ನಲ್ಲಿ ಕ್ರಿಪ್ಟೊ ಕರೆನ್ಸಿಯ ವೀಡಿಯೊಗಳು ತುಂಬಿಕೊಂಡಿವೆ. ಇಂದು ಶುಕ್ರವಾರ ಹ್ಯಾಕ್ ಆಗಿದ್ದು ಸುಪ್ರೀಂಕೋರ್ಟಿನ ಸಂವಿಧಾನ ಪೀಠ ವಿಚಾರಣೆಗೆತ್ತಿಕೊಳ್ಳುವ ಪ್ರಕರಣಗಳು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಲ್ಲಿ ವಿಚಾರಣೆಯನ್ನು ಲೈವ್ ಆಗಿ ಸಾರ್ವಜನಿಕರಿಗೆ ತೋರಿಸಲಾಗುತ್ತಿತ್ತು.

ಆದರೆ ಹ್ಯಾಕರ್‍ಗಳು ಇದು ಪ್ರಸಾರವಾಗದಂತೆ ನೋಡಿಕೊಳ್ಳಲು ಯಶಸ್ವಿಯಾಗಿದ್ದು ಅಮೆರಿಕದ ರಿಪಿಲ್ ಲ್ಯಾಬ್‍ನ ಎಕ್ಸ್ ಆರ್‍ಪಿ ಕ್ರಿಪ್ಟೊ ಕರೆನ್ಸಿಯ ವೀಡಿಯೊ ಅಪ್‍ಲೋಡ್ ಮಾಡಿ ವಂಚಿಸಿದ್ದಾರೆ.

ಈ ಹಿಂದೆ ಕೊಲ್ಕತಾದ ಆರ್‍ಜಿಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಟ್ರೈನಿ ವೈದ್ಯೆಯನ್ನು ಕೊಲೆ ಮಾಡಿದ ಪ್ರಕರಣವನ್ನು ಸುಪ್ರೀಂಕೋರ್ಟು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿತ್ತು. ಇದರ ವಿಚಾರಣೆಯು ಕೂಡ ಸುಪ್ರೀಂಕೋರ್ಟು ಲೈವ್ ಆಗಿ ತೋರಿಸುತ್ತಿತ್ತು. ಆದರೆ ಈಗ ಯುಟ್ಯೂಬ್ ಅನ್ನು ಹ್ಯಾಕರ್‍ಗಳು ಬಳಸದಂತೆ ಮಾಡಿದರು. ಕಳೆದ ವರ್ಷ ನಕಲಿ ಸುಪ್ರೀಂಕೋರ್ಟ್ ವೆಬ್ ಉಪಯೋಗಿಸಿ ಫೀಸಿಂಗ್ ದಾಳಿ ನಡೆಸಲಾಗಿತ್ತು. ಇದಾದ ನಂತರ ಆನ್‍ಲೈನ್ ವ್ಯವಹಾರ ನಡೆಸುವಾಗ ವಕೀಲರು ಎಚ್ಚರ ವಹಿಸಬೇಕೆಂದು ಚೀಫ್ ಜಸ್ಟಿಸ್ ಚಂದ್ರಚೂಡರು ಹೇಳಿದ್ದರು. ಈಗ ಯುಟ್ಯೂಬೇ ಹ್ಯಾಕಾಗಿದೆ.