ಮಾಲ್ಡೀವ್ಸ್ ಜಾಗತಿಕ ಇಸ್ಲಾಮಿಕ್ ಫೈನಾನ್ಸ್ ಕಾನ್ಫರೆನ್ಸ್: ಸೈಯದ್ ಮೂಸಾ ಕಲೀಮ್ ರಿಗೆ ಗ್ಲೋಬಲ್ ಇಸ್ಲಾಮಿಕ್ ಫೈನಾನ್ಸ್ ಅವಾರ್ಡ್ 2024

0
73

ಸನ್ಮಾರ್ಗ ವಾರ್ತೆ

ಜಾಗತಿಕ ಇಸ್ಲಾಮಿಕ್ ಫೈನಾನ್ಸ್ ಕಾನ್ಫರೆನ್ಸ್ ಇತ್ತೀಚಿಗೆ ಮಾಲ್ದಿವ್ಸ್ ನಲ್ಲಿ ನಡೆದಿದೆ. ಈ ಕಾನ್ಫರೆನ್ಸ್ ಅನ್ನು ಮಾಲ್ದಿವ್ಸ್ ಸರಕಾರವೇ ಆಯೋಜಿಸಿದೆ. ಮಾಲ್ದಿವ್ಸ್ ನ ಅಧ್ಯಕ್ಷ ಮೊಹಮ್ಮದ್ ವಾಹಿದ್ ಹಸನ್ ಮತ್ತು ಫೈನಾನ್ಸ್ ಮಿನಿಸ್ಟರ್ ಮೊಹಮ್ಮದ್ ಶಫಿಕ್ ಸಹಿತ ಮುಸ್ಲಿಂ ರಾಷ್ಟ್ರಗಳ ಅನೇಕ ಪ್ರತಿನಿಧಿಗಳು ಮತ್ತು ಇಸ್ಲಾಮಿಕ್ ಬ್ಯಾಂಕಿಂಗ್ ನ ಮುಖ್ಯಸ್ಥರು ಇದರಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಇಸ್ಲಾಮಿಕ್ ಬ್ಯಾಂಕ್ ನ ಮುಖ್ಯಸ್ಥರಾದ ಸಯ್ಯದ್ ಮೂಸಾ ಕಲೀಮ್ ಅವರನ್ನು ಗೌರವಿಸಲಾಯಿತು. ಇವರು ಹೈದರಾಬಾದ್ ಮೂಲದವರು. ಇವರು ದುಬೈ ಇಸ್ಲಾಮಿಕ್ ಬ್ಯಾಂಕ್, ಇಸ್ಲಾಮಿಕ್ ಬ್ಯಾಂಕ್ ಆಫ್ ಆಫ್ಘಾನಿಸ್ತಾನ್ ಮತ್ತು ಇತರ ಹಲವು ಇಸ್ಲಾಮಿಕ್ ಬ್ಯಾಂಕ್ ಗಳಲ್ಲಿ ದುಡಿದ ಅನುಭವವನ್ನು ಹೊಂದಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಬ್ಯಾಂಕ್ ಅಭಿವೃದ್ಧಿಯಲ್ಲಿ ಇವರು ಬಹಳ ದೊಡ್ಡ ಪಾತ್ರವನ್ನು ನಿಭಾಯಿಸಿದ್ದಾರೆ. ಇವರ ಸತತ ಪ್ರಯತ್ನದಿಂದಾಗಿ ಇಸ್ಲಾಮಿಕ್ ಬ್ಯಾಂಕಿಗೆ ಜಾಗತಿಕ ಮಾನ್ಯತೆ ದೊರಕುವಂತಾಗಿದೆ. ಇವರ ತಂದೆ ಸಯ್ಯದ್ ಯೂಸುಫ್ ಅವರು ಆಂಧ್ರಪ್ರದೇಶದ ವಿಧಾನಸಭೆಯ ಮಾಜಿ ಕಾರ್ಯದರ್ಶಿಯಾಗಿದ್ದರು ಮತ್ತು ರೇಡಿಯನ್ಸ್ ವಾರಪತ್ರಿಕೆಯ ಗೌರವ ಸಂಪಾದಕರಾಗಿದ್ದರು.