ಮುಸ್ಲಿಮ್ ಐಕ್ಯತಾ ವೇದಿಕೆ ಕುದ್ರೋಳಿ ವತಿಯಿಂದ ಐತಿಹಾಸಿಕ ರಕ್ತದಾನ ಶಿಬಿರ

0
119

ಸನ್ಮಾರ್ಗ ವಾರ್ತೆ

ಮಂಗಳೂರು: ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ, KMC ಆಸ್ಪತ್ರೆ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇದರ ಜಂಟಿ ಆಶ್ರಯದಲ್ಲಿ ಬೃಹತ್ ಹಾಗೂ ಐತಿಹಾಸಿಕ ರಕ್ತದಾನ ಶಿಬಿರವು ಕುದ್ರೋಳಿ ಸರಕಾರಿ ಉರ್ದು ಶಾಲೆಯಲ್ಲಿ ಯಶಸ್ವಿಯಾಗಿ ಜರುಗಿತು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಐವನ್ ಡಿಸೋಜಾ, ಪದ್ಮರಾಜ್ ರಾಮಯ್ಯ, ರಿಯಾಝ್ ಕಡಂಬು, ಜಗದೀಶ್ ಬೋಲೂರು, ಮುಹಮ್ಮದ್ ಇಸ್ಹಾಕ್ ಪುತ್ತೂರು, ನಾಸಿರ್ ಹೈಕೋ, ಹಾಜೀ ಇಸ್ಮಾಯಿಲ್ ಡೀಲಕ್ಸ್, ಪಿ.ಪಿ ಅಝೀಝ್, ಹಾಜಿ ಶಂಸುದ್ದೀನ್ ಕುದ್ರೋಳಿ, ಬಶೀರ್ ಅಹ್ಮದ್ ಶಾಲಿಮಾರ್, ಲತೀಫ್ ಕಂದಕ್, ಸುನೀಲ್ ಕುಮಾರ್ ಬಜಿಲ್ ಕೆರಿ, ಕೆ ಅಶ್ರಫ್, ಝೀನತ್ ಶಂಸುದ್ದೀನ್, ಶರೀಫ್ ವೈಟ್ ಸ್ಟೋನ್, ಮಂಜುಳಾ ನಾಯ್ಕ್ ,ಅಶೋಕ್ ಕುಮಾರ್, ಲಕ್ಷ್ಮಣ್ ಕುಂದರ್ ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. 

ಮುಸ್ಲಿಮ್ ಐಕ್ಯತಾ ವೇದಿಕೆಯ ಅಧ್ಯಕ್ಷರಾದ ಜನಾಬ್ ಯಾಸೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವು ಕುರ್ ಆನ್ ಪಠಣದೊಂದಿಗೆ ಆರಂಭಗೊಂಡಿತು. ಸಂಸ್ಥೆಯ ಕಾರ್ಯದರ್ಶಿಯಾದ ಹಾಜಿ ಬಿ ಅಬೂಬಕ್ಕರ್ ರವರು ಸ್ವಾಗತಿಸಿ, ಬಿ.ಎ ಮೊಹಮ್ಮದ್ ಅಲಿ ಕಮರಡಿಯವರು ನಿರೂಪಿಸಿದರು. ಎನ್ ಕೆ ಅಬೂಬಕ್ಕರ್ ಧನ್ಯವಾದ ಅರ್ಪಿಸಿದರು.

ಈ ಸಂದರ್ಭದಲ್ಲಿ ಸುಮಾರು 554 ಯುನಿಟ್ ರಕ್ತ ಸಂಗ್ರಹವಾಗಿದೆ. ರಕ್ತದಾನದಲ್ಲಿ ಭಾಗವಹಿಸಿದ ಎಲ್ಲರನ್ನು ಸಂಘಟಕರು ಅಭಿನಂದಿಸಿದ್ದಾರೆ.