ಅಣ್ವಸ್ತ್ರದಿಂದ ತಿರುಗೇಟು ನೀಡುತ್ತೇನೆ- ಪುಟಿನ್

0
140

ಸನ್ಮಾರ್ಗ ವಾರ್ತೆ

ಮಾಸ್ಕೊ, ಸೆ. 26: ರಷ್ಯದ ವಿರುದ್ಧ ಯುಕ್ರೇನ್ ವಾಯು ದಾಳಿ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಅಣ್ವಸ್ತ್ರ ಪ್ರಯೋಗಿಸುವ ಬೆದರಿಕೆಯನ್ನು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೀಡಿದ್ದಾರೆ.

ಅಣುಶಕ್ತಿ ಇರುವ ದೇಶಗಳ ಬೆಂಬಲದಿಂದ ಯುಕ್ರೇನ್ ದಾಳಿ ನಡೆಸುತ್ತಿದ್ದು ಅದೇ ರೀತಿ ಪ್ರತಿಯೇಟು ನೀಡುತ್ತೇವೆ ಎಂದು ಪುಟಿನ್ ಹೇಳಿದ್ದು ಕಾನೂನುಗಳನ್ನು ಬದಲಿಸಲು ರಷ್ಯಾವನ್ನು ನಿರ್ಬಂಧಿಸಲಾಗುತ್ತಿದೆ ಎಂದೂ ಅವರು ತಿಳಿಸಿದರು.

ಅಣು ಆಯುಧ ಶಕ್ತಿಯನ್ನು ಹೊಂದಿಲ್ಲ ಯುಕ್ರೇನ್. ಆದರೆ ಅಣು ಆಯುಧವನ್ನು ಸಂಗ್ರಹಿಸಿಟ್ಟಿರುವ ಅಮೆರಿಕ ಸಹಿತ ದೇಶಗಳು ಅದನ್ನು ಬೆಂಬಲಿಸುತ್ತಿದೆ. ಈ ಹಿಂದೆ ದೀರ್ಘ ದೂರದ ಮಿಸೈಲ್ ಉಪಯೋಗಿಸಲು ಅನುಮತಿ ನೀಡಬೇಕೆಂದು ಯುಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಅಮೆರಿಕವನ್ನು ವಿನಂತಿಸಿದ್ದರು. ಕಳೆದ ವಾರ ನಡೆದ ಅಮೆರಿಕ ಸಂದರ್ಶನದಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡನ್‍ರೊಂದಿಗೆ ಚರ್ಚೆಯಲ್ಲಿ ಝೆಲೆನ್‍ಸ್ಕಿ ಈ ಅನುಮತಿಯನ್ನು ಕೇಳಿದ್ದರು. ಈ ವರ್ಷ ಹಲವು ಸಲ ರಷ್ಯದ ಮೇಲೆ ಯುಕ್ರೇನ್ ಮಿಸೈಲ್‍ಗಳನ್ನು ಹಾರಿಸಿ ಬಿಟ್ಟಿದೆ.