ಜೈಲಿನಲ್ಲಿರುವುದು ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವುದಿಲ್ಲ – ಬಾಂಬೆ ಹೈಕೋರ್ಟ್

0
61

ಸನ್ಮಾರ್ಗ ವಾರ್ತೆ

ಮುಂಬಯಿ: ಜೈಲು ಪಾಲಾದ ವ್ಯಕ್ತಿಗೆ ಕಲಿಯುವ ಹಕ್ಕು ಇದ್ದೇ ಇದೆ. ಅದು ಇಲ್ಲದಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟು ಹೇಳಿದೆ.

ಕಾನೂನು ಪದವಿ ಕಲಿಯಲು ಅರ್ಹತಾ ಪರೀಕ್ಷೆ ಪಾಸಾದ ವ್ಯಕ್ತಿ ಜೈಲು ಪಾಲಾದರೆ ಆತನಿಗೆ ಪ್ರವೇಶ ನಿಷೇಧಿಸಲು ಆಗುವುದಿಲ್ಲ ಎಂದು ಎಂದು ಕೋರ್ಟು ತಿಳಿಸಿತು.

ಭೀಮ ಕೊರೆಗಾವ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಹೇಶ್ ರಾವುತ್ ಸಲ್ಲಿಸಿದ ಅರ್ಜಿಯಲ್ಲಿ ಹೈಕೋರ್ಟು ಹೀಗೆಂದಿದೆ.

ವಿಚಾರಣೆಯ ವೇಳೆ ಮಹೇಶ್ ರಾವುತ್‍ರಿಗೆ ಕಲಿಕೆ ಮುಂದುವರಿಸಲು ಜಸ್ಟಿಸ್ ಎಸ್ ಅಧಿಕಾರಿ, ನೀಲಾ ಗೋಖಲೆ ಅನುಮತಿ ನೀಡಿದರು. ಈ ಹಿಂದೆ ರಾವುತ್‍ಗೆ ಬಾಂಬೆ ಹೈಕೋರ್ಟು ಜಾಮೀನು ನೀಡಿತ್ತು. ಆದರೆ ಎನ್‍ಐಎಯ ಮೇಲ್ಮನವಿಯಲ್ಲಿ ಸುಪ್ರೀಂಕೋರ್ಟು ತಡೆಯಾಜ್ಞೆ ಅದಕ್ಕೆ ನೀಡಿದೆ.

ಜೈಲಿನಲ್ಲಿರುವುದರಿಂದ ಶೇ. 75 ಕಡ್ಡಾಯ ಹಾಜರಾತಿ ಸಾಧ್ಯವಾಗುವುದಿಲ್ಲ ಎಂದು ಸಿದ್ಧಾರ್ಥ ಕಾಲೇಜು ಮತ್ತು ಮುಂಬೈ ವಿಶ್ವವಿದ್ಯಾನಿಲಯ ಮಹೇಶ್ ರಾವುತ್‍ಗೆ ಕಾನೂನು ಪದವಿ ಸೇರ್ಪಡೆಗೆ ನಿಷೇಧ ಹೇರಿತ್ತು. ನಂತರ ಸಾರ್ವಜನಿಕ ಪ್ರವೇಶ ಪರೀಕ್ಷೆ ಸೆಟ್‍ನ ಅನುಮತಿ ಕೇಳಿದಾಗ ಯಾರೂ ವಿರೋಧಿಸಿಲ್ಲ ಎಂದು ಕೋರ್ಟು ಬೆಟ್ಟು ಮಾಡಿದೆ. ರಾವುತ್‍ಗೆ ಕಲಿಯದಂತೆ ತಡೆಯುವುದು ಅವರ ಕಲಿಯುವ ಹಕ್ಕು ನಿರಾಕರಣೆಯಾಗಿದೆ. ಇದು ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ ಎಂದು ಕೋರ್ಟು ಹೇಳಿದೆ. ಕೂಡಲೇ ಅವರಿಗೆ ಕಾಲೇಜು ಪ್ರವೇಶ ನೀಡಬೇಕೆಂದು ಆದೇಶಿಸಿದೆ.