ಪಶ್ಚಿಮದೊಂದಿಗೆ ಸಂಬಂಧ ಸುಧಾರಿಸಲು ಟೆಹ್ರಾನ್ ಸಿದ್ಧವಿದೆ: ಇರಾನ್ ಅಧ್ಯಕ್ಷ

0
122

ಸನ್ಮಾರ್ಗ ವಾರ್ತೆ

ವಿಶ್ವಸಂಸ್ಥೆ: ಟೆಹ್ರಾನ್ ಅಂತರಾಷ್ಟ್ರೀಯ ಸಂಬಂಧಗಳಲ್ಲಿ “ರಚನಾತ್ಮಕ” ಅಧ್ಯಾಯವನ್ನು ತೆರೆಯಲು ಬಯಸುತ್ತಿದೆ ಮತ್ತು ಟೆಹ್ರಾನ್ ತನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಪಶ್ಚಿಮದೊಂದಿಗೆ ತೊಡಗಿಸಿಕೊಳ್ಳಲು ಸಿದ್ಧವಾಗಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದರು.

ಮಂಗಳವಾರ ನಡೆದ ವಿಶ್ವಸಂಸ್ಥೆಯ ವಿಶ್ವ ನಾಯಕರ ವಾರ್ಷಿಕ ಸಭೆಯ ತನ್ನ ಮೊದಲ ಭಾಷಣದಲ್ಲಿ, ಪೆಜೆಶ್ಕಿಯಾನ್ ಅವರು ಇಸ್ರೇಲ್ ಗಾಝದಲ್ಲಿ ನಡೆಸುತ್ತಿರುವ ಅಕ್ರಮವನ್ನು “ಮಾನವೀಯತೆಯ ವಿರುದ್ಧದ ಅಪರಾಧಗಳು” ಮತ್ತು “ಹತಾಶ ಅನಾಗರಿಕತೆ” ಎಂದು ಹೇಳಿದರು. ಇದೇ ವೇಳೆ ಪೆಲೆಸ್ತೀನ್ ಹಾಗೂ ಲೆಬನಾನ್ ಮೇಲಿನ ದಾಳಿಗಳನ್ನು ಅವರು ತೀವ್ರವಾಗಿ ಖಂಡಿಸಿದರು.

“ನನ್ನ ದೇಶವು ಹೊಸ ಯುಗಕ್ಕೆ ಪ್ರವೇಶಿಸಲು ಬಲವಾದ ಅಡಿಪಾಯವನ್ನು ಹಾಕುವ ಗುರಿಯನ್ನು ಹೊಂದಿದೆ, ವಿಕಸನಗೊಳ್ಳುತ್ತಿರುವ ಜಾಗತಿಕ ಕ್ರಮದಲ್ಲಿ ಪರಿಣಾಮಕಾರಿ ಮತ್ತು ರಚನಾತ್ಮಕ ಪಾತ್ರವನ್ನು ವಹಿಸಲು ಬಯಸುವುದಾಗಿ ಪೆಜೆಶ್ಕಿಯಾನ್ ತಿಳಿಸಿದರು.

“ನಾವು ಎಲ್ಲರಿಗೂ ಶಾಂತಿಯನ್ನು ಬಯಸುತ್ತೇವೆ ಮತ್ತು ಯಾವುದೇ ದೇಶದೊಂದಿಗೆ ಸಂಘರ್ಷದ ಉದ್ದೇಶವಿಲ್ಲ … ಇರಾನ್ ಯುದ್ಧವನ್ನು ವಿರೋಧಿಸುತ್ತದೆ ಮತ್ತು ಉಕ್ರೇನ್‍ನಲ್ಲಿ ಮಿಲಿಟರಿ ಸಂಘರ್ಷವನ್ನು ತಕ್ಷಣವೇ ನಿಲ್ಲಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.

“ನಾವು 2015 ರ ಪರಮಾಣು ಒಪ್ಪಂದಕ್ಕೆ ಸಿದ್ಧರಿದ್ದೇವೆ. ಒಪ್ಪಂದದ ಬದ್ಧತೆಗಳನ್ನು ಸಂಪೂರ್ಣವಾಗಿ ಮತ್ತು ಪ್ರಾಮಾಣಿಕವಾಗಿ ಕಾರ್ಯಗತಗೊಳಿಸಿದರೆ, ಇತರ ವಿಷಯಗಳ ಕುರಿತು ಸಂವಾದವನ್ನು ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ”ಎಂದವರು ಹೇಳಿದರು.