ಗಾಝಾ, ಲೆಬನಾನ್ ಮೇಲೆ ಇಸ್ರೇಲ್ ದಾಳಿ ಅಧಾರ್ಮಿಕ: ಪೋಪ್ ಪ್ರಾನ್ಸಿಸ್

0
183

ಸನ್ಮಾರ್ಗ ವಾರ್ತೆ

ಗಾಝಾ ಮತ್ತು ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯು ಅಧಾರ್ಮಿಕ ಎಂದು ಪೋಪ್ ಪ್ರಾನ್ಸಿಸ್ ಹೇಳಿದ್ದಾರೆ. ಸೇನಾ ಕಾರ್ಯಾಚರಣೆಯಲ್ಲಿ ಯುದ್ಧ ನಿಯಮಗಳನ್ನು ಪಾಲಿಸಬೇಕು ಎಂದವರು ಹೇಳಿದ್ದಾರೆ. ಹಿಝ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾ ಅವರನ್ನು ಹತ್ಯೆ ಮಾಡಿದ ಕುರಿತಂತೆ ಮಾಧ್ಯಮ ಪ್ರಶ್ನೆಗೆ ಉತ್ತರಿಸುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ನ ಪ್ರತಿರೋಧದ ಹಕ್ಕನ್ನು ಒಪ್ಪಿಕೊಳ್ಳುವುದರ ನಡುವೆಯೇ ಕದನ ವಿರಾಮ ಏರ್ಪಡಬೇಕು, ಬಂಧಿಗಳ ವಿಮೋಚನೆ ಆಗಬೇಕು, ಗಾಝಕ್ಕೆ ಮಾನವೀಯ ನೆರವು ತಲುಪುವಂತೆ ನೋಡಿಕೊಳ್ಳಬೇಕು ಎಂದು ಕೂಡ ಅವರು ಆಗ್ರಹಿಸಿದ್ದಾರೆ.

ಈ ಮೊದಲು ಇಸ್ರೇಲ್ ದಾಳಿಗೆ ಹಿಝ್ಬುಲ್ಲಾ ನಾಯಕ ಹಸ್ಸನ್ ನಸ್ರುಲ್ಲಾ ಮೃತಪಟ್ಟಿದ್ದರು. ಇವರಲ್ಲದೆ ಇಬ್ಬರು ಉನ್ನತ ಕಮಾಂಡರ್ ಗಳು ಕೂಡ ಹತ್ಯೆಗೀಡಾಗಿದ್ದರು. ಹಿಝ್ಬುಲ್ಲಾದ ಉನ್ನತ ನಾಯಕರನ್ನು ಗುರಿಯಿರಿಸಿ ಇಸ್ರೇಲ್ ಈ ದಾಳಿ ಮಾಡಿದ್ದು, ಇದಕ್ಕೆ ಇಸ್ರೇಲ್ ಗುಪ್ತಚರ ಸಂಸ್ಥೆಗೆ ಕೆಲಸ ಮಾಡುತ್ತಿದ್ದ ಇರಾನ್ ನಾಗರಿಕನ ಮಾಹಿತಿಯೇ ಕಾರಣ ಎಂದು ತಿಳಿದುಬಂದಿದೆ.