ಮಹಿಳಾ ಜಡ್ಜ್ ಗೆ ವಾಟ್ಸ್ ಆ್ಯಪ್ ಮೂಲಕ ಕೊಲೆ ಬೆದರಿಕೆ

0
538

ತಿರುವನಂತಪುರಂ,ಮೇ 6: ಮಹಿಳಾ ಜಡ್ಜ್ ಒಬ್ಬರಿಗೆ ವಾಟ್ಸ್ ಆ್ಯಪ್ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ತಿರುವನಂತಪುರಂ ಅಡಿಶನಲ್ ಜಿಲ್ಲಾ ಸೆಶನ್ಸ್ ಜಡ್ಜ್ ಎ.ಎಸ್. ಮಲ್ಲಿಕಾ ಕಂಟೊನ್ಮೆಂಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇವರ ಮೊಬೈಲ್ ನಂಬರ್ ಉಪಯೋಗಿಸಿ ಫೈಝಲ್ ಎಂಬಾತ ನಕಲಿ ಇಮೇಲ್ ಐಡಿ ಸೃಷ್ಟಿಸಿದ್ದು, ಈ ಐಡಿಯಲ್ಲಿ ಫೇಸ್‍ಬುಕ್ ಖಾತೆ ತೆರೆದು ಹಲವರಿಗೆ ನಕಲಿ ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ. ಆತನ ಸಂದೇಶದ ನಂತರ ಅಪರಿಚಿತ ವ್ಯಕ್ತಿ ಫೋನ್ ಕರೆ ಮಾಡಿ ಕಿರುಕುಳ ನೀಡಿದ್ದು. ವಾಟ್ಸ್‍ಆ್ಯಪ್‍ಗೆ ನಿರಂತರ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ಜಡ್ಜ್ ವಿವರಿಸಿದ್ದಾರೆ.